D-Mart: ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಡಿಮಾರ್ಟ್ ಮಾಲೀಕ ರಾಧಾಕಿಶನ್ ದಮನಿ

DMart owner Radhakishan Damani : ಮುಂಬೈನ ಸಿಂಗಲ್ ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ಬೆಳೆದ ದಮನಿ ಈಗ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಒಟ್ಟು ಆಸ್ತಿ ಮೌಲ್ಯ 19.2 ಬಿಲಿಯನ್ ಡಾಲರ್.

ರಾಧಾಕಿಶನ್  ದಮನಿ

ರಾಧಾಕಿಶನ್ ದಮನಿ

  • Share this:
Radhakishan Damani: ಡಿಮಾರ್ಟ್ ಸೂಪರ್​​ ಮಾರ್ಕೆಟ್​​ನ ಮಾಲೀಕ ರಾಧಾಕಿಶನ್ ಎಸ್ ದಮನಿ ಜಾಗತಿಕ ಅಗ್ರ 100 ಬಿಲಿಯನೇರ್‌ಗಳ ಕ್ಲಬ್‌ಗೆ ಪ್ರವೇಶಿಸಿದ್ದಾರೆ. ಮುಂಬೈನ ಸಿಂಗಲ್ ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ಬೆಳೆದ ದಮನಿ ಈಗ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪಟ್ಟಿಯಲ್ಲಿ 98ನೇ ಸ್ಥಾನದಲ್ಲಿದ್ದು, ಅವರ ಒಟ್ಟು ಆಸ್ತಿ ಮೌಲ್ಯ 19.2 ಬಿಲಿಯನ್ ಡಾಲರ್. 2021 ರಲ್ಲಿ ದಮಾನಿ ಅವರ ಸಂಪತ್ತು 4.3 ಬಿಲಿಯನ್ ಡಾಲರ್ ನೊಂದಿಗೆ ಶೇ. 29 ರಷ್ಟು ಹೆಚ್ಚಾಗಿದೆ. ಈ 100 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಅಜೀಮ್ ಪ್ರೇಮ್‌ಜಿ, ಶಿವ್ ನಾಡರ್ ಮತ್ತು ಲಕ್ಷ್ಮಿ ಮಿತ್ತಲ್ ಕೂಡ ಇದ್ದಾರೆ. ದಮನಿ ಈ ಪಟ್ಟಿಯಲ್ಲಿ 98 ಸ್ಥಾನ ಪಡೆದುಕೊಂಡಿದ್ದಾರೆ.

ದಮನಿ ದೀರ್ಘಾವಧಿ ಹೂಡಿಕೆಗಳ ಮೂಲಕ ತಮ್ಮ ಸಂಪತ್ತುನ್ನು ವೃದ್ಧಿಸಿಕೊಂಡಿದ್ದಾರೆ.  ದಮನಿ ಅವರು ಹೆಚ್ಚಾಗಿ 10,15 ಮತ್ತು 20 ವರ್ಷಗಳ ಹೂಡಿಕೆಗೆ ಆದ್ಯತೆ ನೀಡಿದ್ದಾರೆ. ಅವರ ಈ ದೂರದೃಷ್ಟಿಯೇ ಅವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿ ಎಂದು ವಿಶ್ಲೇಷಿಸಲಾಗುತ್ತಿದೆ. ಅವರ ಹೆಚ್ಚಿನ ಸಂಪತ್ತು ಸೂಪರ್​​​​ ಮಾರ್ಟ್​​​ನಲ್ಲಿ (ಡಿಮಾರ್ಟ್ ನಡೆಸುವ ಕಂಪನಿ) ಶೇರ್​​ಗಳ ರೂಪದಲ್ಲಿದೆ.  ಸೂಪರ್‌ಮಾರ್ಟ್‌ಗಳಲ್ಲದೆ ವಿಎಸ್‌ಟಿ ಇಂಡಸ್ಟ್ರೀಸ್, ಇಂಡಿಯಾ ಸಿಮೆಂಟ್ಸ್, ಸುಂದರಂ ಫೈನಾನ್ಸ್ ಮತ್ತು ಟ್ರೆಂಟ್​​​ ಕೂಡ ಅವರ ಮಾಲೀಕತ್ವದ ಸಂಸ್ಥೆಗಳಾಗಿವೆ.

2002 ರಲ್ಲಿ ಸ್ಥಾಪನೆಯಾದ ಡಿಮಾರ್ಟ್, 2019 ಹಾಗೂ 2020ನೇ ಆರ್ಥಿಕ ವರ್ಷದಲ್ಲಿ ಮಾರಾಟ ಮತ್ತು ಲಾಭದಲ್ಲಿ ಎರಡು ಅಂಕಿಯ ಬೆಳವಣಿಗೆಯನ್ನು ಕಂಡಿದೆ. ಸಾಂಕ್ರಾಮಿಕ ರೋಗದಿಂದಾಗಿ 2021ನೇ ಆರ್ಥಿಕ ವರ್ಷದ ಲಾಭಕ್ಕೆ ಕೊಂಚ ಅಡ್ಡಿಯಾಗಿದೆ. 2008-09ರಿಂದ ಇಲ್ಲಿನವರೆಗೆ ವಾರ್ಷಿಕ ಬೆಳವಣಿಗೆ ದರ (CAGR) ಶೇ.56  ಮತ್ತು ಮಾರಾಟ  ಶೇ.36 ರಷ್ಟಿದೆ.

ಇದನ್ನೂ ಓದಿ: 1 ಕೋಟಿ ಯುವಜನತೆಗೆ ಉಚಿತ ಸ್ಮಾರ್ಟ್​​​ಫೋನ್​​, ಸರ್ಕಾರಿ ಉದ್ಯೋಗಿಗಳಿಗೂ ಗುಡ್​​ನ್ಯೂಸ್​​ ಕೊಟ್ಟ ಯುಪಿ ಸಿಎಂ

ಬ್ಲಾಕ್‌ಬಸ್ಟರ್ ಪಟ್ಟಿಯ ನಂತರ ದಮನಿ ಅಗ್ರ 10 ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ವಿಲಾಸಿ ಜೀವನಕ್ಕೆ ಹೆಚ್ಚೇನು ಒತ್ತು ಕೊಡದ ದಮನಿ, ಇತ್ತೀಚೆಗೆ ಮುಂಬೈನ ಮಲಬಾರ್ ಹಿಲ್ಸ್ ಪ್ರದೇಶದಲ್ಲಿ 1,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿ ಸುದ್ದಿಯಾಗಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ದೇಶದ ಅತಿದೊಡ್ಡ ಆಸ್ತಿ ಒಪ್ಪಂದವಾಗಿದೆ.

ಇತ್ತೀಚೆಗೆ ಫ್ಯೂಚರ್ ಗ್ರೂಪ್, ಆದಿತ್ಯ ಬಿರ್ಲಾ ಗ್ರೂಪ್​​  ನಷ್ಟವನ್ನು ಅನುಭವಿಸಿದಾಗ ಡಿಮಾರ್ಟ್‌ ನಿರಂತರ ಲಾಭವನ್ನು ಗಳಿಸಿತ್ತು. ಇತರ ವ್ಯಾಪಾರಿಗಳಿಗಿಂತ ಭಿನ್ನವಾಗಿ ಡಿಮಾರ್ಟ್ ಆಸ್ತಿಯನ್ನು ಹೊಂದಿದೆ. ಜೂನ್ 30, 2021 ರ ವೇಳೆಗೆ ಡಿಮಾರ್ಟ್ 238 ಮಳಿಗೆಗಳನ್ನು ಹೊಂದಿದೆ.  2020-22ರ ಅವಧಿಯಲ್ಲಿ ಕಂಪನಿಯು 59 ಮಳಿಗೆಗಳನ್ನು ತೆರೆದಿದೆ ಎಂದು ಮ್ಯಾನೇಜ್‌ಮೆಂಟ್ ಹೇಳಿದೆ. ಡಿಮಾರ್ಟ್ ಕಾರ್ಯನಿರ್ವಹಿಸುವ ಕೆಲವು ನಗರಗಳಲ್ಲಿ ಡಿಮಾರ್ಟ್ ರೆಡಿ ಎಂಬ ಇ-ಕಾಮರ್ಸ್ ಉದ್ಯಮವನ್ನೂ ಆರಂಭಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: