ಭಾರತದ 2ನೇ ಅತೀ ದೊಡ್ಡ ಮಾಲ್​ನಲ್ಲಿ ಅವಘಡ: ವಿಡಿಯೋ ವೈರಲ್..!

330 ಬ್ರಾಂಡ್‌ಗಳ ಶಾಪ್​ಗಳು ಈ ಮಾಲ್​ನಲ್ಲಿವೆ. ಇನ್ನು ಸಿನಿಪ್ರಿಯರಿಗಾಗಿ 7-ಸ್ಕ್ರೀನ್ ಪಿವಿಆರ್ ಮಲ್ಟಿಪ್ಲೆಕ್ಸ್ ಮತ್ತು ಗೇಮಿಂಗ್ ಸೆಂಟರ್ ಸ್ಮ್ಯಾಶ್ ಸೇರಿದಂತೆ ಹಲವಾರು ಮನರಂಜನಾ ಆಯ್ಕೆಗಳಿವೆ.

news18-kannada
Updated:July 8, 2020, 4:25 PM IST
ಭಾರತದ 2ನೇ ಅತೀ ದೊಡ್ಡ ಮಾಲ್​ನಲ್ಲಿ ಅವಘಡ: ವಿಡಿಯೋ ವೈರಲ್..!
DLF Mall of India
  • Share this:
ಉತ್ತರ ಪ್ರದೇಶ: ನೋಯ್ಡಾದ ಸೆಕ್ಟರ್ 18 ರ ಡಿಎಲ್ಎಫ್ ಮಾಲ್ ಆಫ್ ಇಂಡಿಯಾದಲ್ಲಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಈ ಮಾಲ್‌ನ ಮೇಲ್ಛಾವಣಿಯ ಒಂದು ಭಾಗ ಕುಸಿದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಮಾಲ್​ನ ಮೇಲ್ಛಾವಣಿಯ ಒಂದು ಭಾಗ ಕುಸಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಇದರಿಂದ ಸುತ್ತಮುತ್ತ ಪ್ರದೇಶದಲ್ಲಿ ಧೂಳು ಪಸರಿಸಿರುವುದು ಕಂಡುಬರುತ್ತದೆ. ಇನ್ನು ಈ ಸಂಬಂಧ ಠಾಣೆಗೂ ಸ್ಥಳೀಯರಿಂದ ಹಲವಾರು ಕರೆಗಳು ಬಂದಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಆದಾಗ್ಯೂ, ಮಾಲ್ ಅಧಿಕಾರಿಗಳು ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು ಬಿಲ್ಡಿಂಗ್​ನಿಂದ ಅಂತರ ಕಾಯ್ದುಕೊಳ್ಳುವಂತೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೆಯೇ ಪ್ರಸ್ತುತ ಹರಿದಾಡುತ್ತಿರುವು ಒಂದು ತಿಂಗಳ ಹಿಂದಿನ ವಿಡಿಯೋವಾಗಿದ್ದು, ಮಾಲ್​ನಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಈಗ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಸಂಕಷ್ಟ: ಆಟೋ ಓಡಿಸುತ್ತಿರುವ ನಟಿ..!

ಇದರ ಹೊರತಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆ ನಡೆದಿರುವುದು ನಿಜ ಎನ್ನಲಾಗುತ್ತಿದ್ದು, ಮೇಲ್ಛಾವಣಿ ಕುಸಿತದಿಂದ ಕೆಲ ಕಾಲ ಮಾಲ್​ ಮುಚ್ಚಬೇಕಾಬಹುದು ಎಂದು ತಿಳಿಸಲಾಗಿದೆ. ಕಳೆದ ವರ್ಷ ನೋಯ್ಡಾದ ಸ್ಪೈಸ್​​ ಶಾಪಿಂಗ್​ ಮಾಲ್​ನ 4ನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಅಗ್ನಿಶಾಮಕ ದಳ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯಿಂದ ಯಾವುದೇ ಅಪಾಯ ಸಂಭವಿಸಿರಲಿಲ್ಲ.

ಭಾರತದ 2ನೇ ದೊಡ್ಡ ಮಾಲ್:
ಡಿಎಲ್ಎಫ್ ಮಾಲ್ ಆಫ್ ಇಂಡಿಯಾ ಭಾರತದ 2ನೇ ಅತಿ ದೊಡ್ಡ ಮಾಲ್​. ಇಲ್ಲಿ 100ಕ್ಕೂ ಹೆಚ್ಚು ಫ್ಯಾಶನ್ ಔಟ್​ಲೆಟ್​ಗಳು, ಸುಮಾರು 50 ಕ್ಕೂ ಹೆಚ್ಚು ವಿಸ್ತಾರವಾದ ಫುಡ್ ಕೋರ್ಟ್​ಗಳು ಮತ್ತು 80 ಕ್ಕೂ ಹೆಚ್ಚು ಕಿಯೋಸ್ಕ್‌ಗಳು ಸೇರಿದಂತೆ ಫ್ಯಾಷನ್ ಮತ್ತು ಮನೆ ಅಲಂಕಾರಿಕ ಮಳಿಗೆಗಳಿವೆ.ಹಾಗೆಯೇ ಸುಮಾರು 330 ಬ್ರಾಂಡ್‌ಗಳ ಶಾಪ್​ಗಳು ಈ ಮಾಲ್​ನಲ್ಲಿವೆ. ಇನ್ನು ಸಿನಿಪ್ರಿಯರಿಗಾಗಿ 7-ಸ್ಕ್ರೀನ್ ಪಿವಿಆರ್ ಮಲ್ಟಿಪ್ಲೆಕ್ಸ್ ಮತ್ತು ಗೇಮಿಂಗ್ ಸೆಂಟರ್ ಸ್ಮ್ಯಾಶ್ ಸೇರಿದಂತೆ ಹಲವಾರು ಮನರಂಜನಾ ಆಯ್ಕೆಗಳಿವೆ. ಕೇರಳದ ಲೂಲು ಮಾಲ್ ಬರುವುದಕ್ಕಿಂತ ಮೊದಲು ಡಿಎಲ್​ಎಫ್ ಮಾಲ್ ಭಾರತದ ಅತೀ ದೊಡ್ಡ ವಾಣಿಜ್ಯ ಸಂಕೀರ್ಣ ಎಂದು ಗುರುತಿಸಿಕೊಂಡಿತ್ತು.

Published by: zahir
First published: July 8, 2020, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading