ದೀಪಾವಳಿ ಸಂಭ್ರಮ: ಕೋಣಗಳ ಹಬ್ಬಕ್ಕೆ ಎಂಟ್ರಿಕೊಟ್ಟ ಶೆಹೆನ್​ ಷಾ

ಕಟ್ಟುಮಸ್ತಾದ, ಮಿರಿಮಿರಿ ಮಿಂಚುವ ಕೋಣಗಳನ್ನು ಪ್ರದರ್ಶನ ಮಾಡಲು ಕೋಟಿ, ಕೋಟಿ ಕೊಟ್ಟು ಖರೀದಿಸಲಾಗುತ್ತದೆ. 75 ವರ್ಷಗಳ ಇತಿಹಾಸ ಹೊಂದಿರುವ ಈ ಹಬ್ಬಕ್ಕೆ ಈ ಬಾರಿ ಆಗಮಿಸಿರುವುದು 25 ಕೋಟಿಯ ಶೆಹೆನ್​ ಷಾ | Hyderabad sadar festival Rs 25 crore worth buffalo Shahenshah will be special attraction

Seema.R | news18
Updated:November 6, 2018, 4:51 PM IST
ದೀಪಾವಳಿ ಸಂಭ್ರಮ: ಕೋಣಗಳ ಹಬ್ಬಕ್ಕೆ ಎಂಟ್ರಿಕೊಟ್ಟ ಶೆಹೆನ್​ ಷಾ
ಕಟ್ಟುಮಸ್ತಾದ, ಮಿರಿಮಿರಿ ಮಿಂಚುವ ಕೋಣಗಳನ್ನು ಪ್ರದರ್ಶನ ಮಾಡಲು ಕೋಟಿ, ಕೋಟಿ ಕೊಟ್ಟು ಖರೀದಿಸಲಾಗುತ್ತದೆ. 75 ವರ್ಷಗಳ ಇತಿಹಾಸ ಹೊಂದಿರುವ ಈ ಹಬ್ಬಕ್ಕೆ ಈ ಬಾರಿ ಆಗಮಿಸಿರುವುದು 25 ಕೋಟಿಯ ಶೆಹೆನ್​ ಷಾ | Hyderabad sadar festival Rs 25 crore worth buffalo Shahenshah will be special attraction
  • News18
  • Last Updated: November 6, 2018, 4:51 PM IST
  • Share this:
ನ್ಯೂಸ್​ 18 ಕನ್ನಡ

ದೀಪಾವಳಿ ಹಬ್ಬದಂದು ಒಂದೊಂದು ಪ್ರದೇಶದಲ್ಲಿಯೂ ವಿಶಿಷ್ಠ ಆಚರಣೆಗಳು ನಡೆದುಕೊಂಡು ಬಂದಿದೆ. ಧನ್​ತೆರಸ್​, ಲಕ್ಷ್ಮೀ ಪೂಜೆಯಂತಹ ಅನೇಕ ವಿಶಿಷ್ಟ ಆಚರಣೆಗಳು ರೂಢಿಸಿಕೊಂಡು ಬರಲಾಗಿದೆ.

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಯಾದವ ಸಮುದಾಯ 'ಕೋಣಗಳ ಹಬ್ಬ'ವನ್ನು  ಈ ಸಮಯದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದು.  ಸದರ್​ ಹಬ್ಬ ಅಥವಾ   ‘ದುನ್ನಪೊತುಲ ಪಂಡಗ’ ಎಂಬ ಹೆಸರಿನಿಂದ ಖ್ಯಾತಿಗೊಂಡಿರುವ ಈ ಹಬ್ಬದ ಪ್ರಮುಖ ಆಕರ್ಷಣೆಗಳು ಕೋಣಗಳು.ಕಟ್ಟುಮಸ್ತಾದ, ಮಿರಿಮಿರಿ ಮಿಂಚುವ ಕೋಣಗಳನ್ನು ಪ್ರದರ್ಶನ ಮಾಡಲು ಕೋಟಿ, ಕೋಟಿ ಕೊಟ್ಟು ಖರೀದಿಸಲಾಗುತ್ತದೆ. 75 ವರ್ಷಗಳ ಇತಿಹಾಸ ಹೊಂದಿರುವ ಈ ಹಬ್ಬಕ್ಕೆ ಈ ಬಾರಿ ಆಗಮಿಸಿರುವುದು 25 ಕೋಟಿಯ 'ಶೆಹೆನ್​ ಷಾ'

ದುಬಾರಿ ಬೆಲೆಯ ಶೆಹೆನ್​ ಷಾ

ಹರಿಯಾಣದ ಅಹಮದ್​ ಆಲಂ ಖಾನ್​ ಅವರು ಸಾಕಿರುವ ಮುರ್ರಾ ಜಾತಿಯ ಈ ಕೋಣ ನೋಡಿದರೆ ಸಾಕು ಜನರು ಹುಬ್ಬೇರಿಸುವುದು ಗ್ಯಾರಂಟಿ.ಐದು ವರೆ ವರ್ಷದ ಈ ಕೋಣ ಆರುವರೆ ಅಡಿ ಎತ್ತರ, 15 ಅಡಿ ಅಗಲವಿದ್ದು, 1500 ಕೆಜಿ ತೂಕವನ್ನು ಹೊಂದಿದೆ. ದಿನಕ್ಕೆ 100 ಸೇಬು, 5ಕೆಜಿ ಗೋಡುಂಬಿ, ಬಾದಾಮಿ, ಪಿಸ್ತಾ, ಕರಿಬೆಲ್ಲ. 40 ಲೀಟರ್​ ಹಾಲು ಇದರ ನಿತ್ಯದ ಆಹಾರ.ತಿಂಗಳಿಗೆ ಒಂದೂವರೆ ಲಕ್ಷ ಖರ್ಚುಮಾಡಿಕೊಂಡು ಸಾಕುತ್ತಿದ್ದ ಈ ಮಾಲೀಕ 25 ಕೋಟಿಗೆ ಈ ಕೋಣವನ್ನು ಮಾರಿದ್ದು, ಸ್ಪರ್ಧೆಗೆ ಇಳಿಸಿದ್ದಾರೆ. ಶೆಹೆನ್​ ಶಾ ಜೊತೆಯಲ್ಲಿ ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಚಾಂಪಿಯನ್​ ಆಗಿರುವ 20 ಕೋಟಿಯ ರಾಜಾ ಮತ್ತು 15 ಕೋಟಿಯ ಧಾರಾ ಕೋಣಗಳು ಸ್ಪರ್ಧೆಗೆ ಇಳಿದಿದ್ದು, ಯಾರು ಚಾಂಪಿಯನ್​ ಪಟ್ಟ ಪಡೆಯಲಿದ್ದಾರೆ ಎನ್ನುವುದು  ಕುತೂಲ ಮೂಡಿಸಿದೆ.

ನ.9ರಿಂದ ಹೈದ್ರಾಬಾದ್​ನ ನಾರಾಯಂಗುಡಾದಲ್ಲಿ ಈ ಸಂಪ್ರದಾಯಿಕ ಹಬ್ಬ ನಡೆಯಲಿದ್ದು, ಈ ಕೋಣಗಳ ಮೇಲೆ ಎಲ್ಲರ ಕಣ್ಣು ಮೂಡಿದೆ. ​

First published:November 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading