Banned Firecrackers: ದೀಪಾವಳಿ ಹಬ್ಬಕ್ಕೆ ಯಾವ ರಾಜ್ಯಗಳು ಪಟಾಕಿ ಸಿಡಿಸುವುದನ್ನು ನಿಷೇಧಿಸಿವೆ? ಇಲ್ಲಿದೆ ಲಿಸ್ಟ್

ಕರ್ನಾಟಕ ಸರ್ಕಾರವು ದೀಪಾವಳಿ ಸಮಯದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಿದೆ. ಜೊತೆಗೆ ಕೋವಿಡ್​-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಳೆ ಭಾರತ(India)ದಾದ್ಯಂತ ದೀಪಾವಳಿ (Diwali 2021) ಹಬ್ಬವನ್ನು ಆಚರಿಸಲಾಗುತ್ತದೆ. ದೀಪ ಹಚ್ಚುವುದರ ಜೊತೆಗೆ ಪಟಾಕಿ ಹೊಡೆಯುವುದೂ ಸಹ ಹಬ್ಬದ ಒಂದು ಭಾಗವಾಗಿಬಿಟ್ಟಿದೆ. ಆದರೆ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಹಲವು ರಾಜ್ಯಗಳು ಪಟಾಕಿಯನ್ನು(Firecrackers Ban) ನಿಷೇಧಿಸಿವೆ. ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯದ(Air Pollution) ಜೊತೆಗೆ ಶಬ್ಧ ಮಾಲಿನ್ಯ(Noise Pollution)ವೂ ಉಂಟಾಗುತ್ತದೆ. ಹೀಗಾಗಿ ದೇಶಾದ್ಯಂತ ಹಲವು ರಾಜ್ಯ(States)ಗಳು ಪಟಾಕಿ ಮಾರಾಟ ಹಾಗೂ ಹೊಡೆಯುವುದನ್ನು ನಿಷೇಧ(Banned Bursting Firecrackers) ಮಾಡಿವೆ. ಕೆಲವು ರಾಜ್ಯಗಳು ಹಸಿರು ಪಟಾಕಿ(Green Crackers) ಮಾರಾಟ ಮಾಡುವಂತೆ, ಹೊಡೆಯವಂತೆ ಗ್ರಾಹಕರಿಗೆ ಆದೇಶ ನೀಡಿವೆ. ಪರಿಸರ ಸ್ನೇಹಿ(Eco-friendly)ಯಾದ ಹಸಿರು ಪಟಾಕಿ ವಾಯು ಮಾಲಿನ್ಯ ಉಂಟು ಮಾಡುವುದಿಲ್ಲ.

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಬಗ್ಗೆ ನಿರ್ಬಂಧ ಹೇರಿರುವ ಹಾಗೂ ಕೆಲವು ಷರತ್ತುಗಳನ್ನು ವಿಧಿಸಿರುವ ರಾಜ್ಯಗಳ ಪಟ್ಟಿ ಹೀಗಿದೆ:

ದೆಹಲಿ

ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಮಿತಿಯು ಜನವರಿ 1, 2022 ರವರೆಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿದೆ.
ಸಮಿತಿಯ ಆದೇಶದ ಪ್ರತಿಯಲ್ಲಿ ‘‘ದೆಹಲಿಯಾದ್ಯಂತ ಜನವರಿ 1, 2022ರವರೆಗೆ ಪಟಾಕಿ ಮಾರಾಟ ಮತ್ತು ಪಟಾಕಿ ಹೊಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ‘‘ ಎಂದು ಹೇಳಲಾಗಿದೆ.

ಹರಿಯಾಣ

ಹರಿಯಾಣ ಸರ್ಕಾರವು ಸಹ ಪಟಾಕಿ ನಿಷೇಧಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಬೇರೆ ಭಾಗಗಳಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದೆ. ಭಿವಾನಿ, ಚರ್ಕಿ ದಾದ್ರಿ, ಫರೀದಾಬಾದ್, ಗುರುಗ್ರಾಮ್, ಜಜ್ಜೀರ್, ಜಿಂದ್, ಕರ್ನಲ್, ಮಹೇಂದರ್​ಘರ್, ನುಹ್, ಪಲ್ವಾಲ್, ಪಾಣಿಪತ್, ರೇವಾರಿ, ರೋಹ್ಟಕ್ ಮತ್ತು ಸೋನಿಪತ್​ ಜಿಲ್ಲೆಗಳಲ್ಲಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಪಟಾಕಿ ನಿಷೇಧಿಸಿದೆ.

ಇದನ್ನೂ ಓದಿ:PM Modi Diwali: ಪ್ರತಿಬಾರಿಯಂತೆ ನಾಳೆ ಯೋಧರೊಂದಿಗೆ ದೀಪಾವಳಿ ಆಚರಿಸಲಿರುವ ಪ್ರಧಾನಿ ಮೋದಿ

ಗಾಳಿಯ ಗುಣಮಟ್ಟ ಸಾಧಾರಣ/ ಉತ್ತಮವಾಗಿದ್ದರೆ ಅಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಲಾಗಿದೆ. ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲೂ ಹಸಿರು ಪಟಾಕಿ ಹೊಡೆಯಲು ಅವಕಾಶವಿದೆ. ಪರವಾನಗಿ ಹೊಂದಿರುವವರು ಮಾತ್ರ ಪಟಾಕಿ ಮಾರಾಟ ಮಾಡಬಹುದಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಯಾವ ನಗರಗಳಲ್ಲಿ ಪಟಾಕಿ ಮಾರಾಟ ಮಾಡಲು ಮತ್ತು ಹೊಡೆಯಲು ಅವಕಾಶ ಇದೆ ಎಂಬುದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕ

ಕರ್ನಾಟಕ ಸರ್ಕಾರವು ದೀಪಾವಳಿ ಸಮಯದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಿದೆ. ಜೊತೆಗೆ ಕೋವಿಡ್​-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ. ‘‘ಸುಪ್ರೀಂ ಕೋರ್ಟ್​​ ನಿರ್ದೇಶನದಂತೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ಇದೆ. ಬೇರೆ ಪಟಾಕಿಗಳ ಮಾರಾಟ/ ಸಿಡಿಸುವಿಕೆಗೆ ಅವಕಾಶ ಇಲ್ಲ‘‘ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದ್ದಾರೆ.

ಪರವಾನಗಿ ಹೊಂದಿರುವ ಮಾರಾಟಗಾರರು ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ನವೆಂಬರ್ 1-10ರವರೆಗೆ ಮಾತ್ರ ಹಸಿರು ಪಟಾಕಿಗಳ ಅಂಗಡಿಗಳು ತೆರೆದಿರುತ್ತವೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಹಬ್ಬಕ್ಕೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಆದೇಶ ನೀಡಿದೆ. ದೀಪಾವಳಿ ಮತ್ತು ಕಾಳಿ ಪೂಜೆಯ ದಿನ 2 ಗಂಟೆ ಮಾತ್ರ ಅಂದರೆ ರಾತ್ರಿ 8-10 ಗಂಟೆವರೆಗೆ ಪಟಾಕಿ ಸಿಡಿಸಬಹುದು. ಛತ್ ಪೂಜೆಯ ದಿನ ಬೆಳಗ್ಗೆ 6-8 ಗಂಟೆವರೆಗೆ ಹಸಿರು ಪಟಾಕಿ ಹೊಡೆಯಬಹುದು. ಕ್ರಿಸ್​ಮಸ್​​ ಮತ್ತು ನ್ಯೂ ಈಯರ್ ಈವ್​ಗೆ ಕೇವಲ 35 ನಿಮಿಷ ಮಾತ್ರ ಪಟಾಕಿ ಸಿಡಿಸಬಹುದು ಎಂದು ಮಂಡಳಿ ಹೇಳಿದೆ.

ಪುಣೆ

ಪುಣೆಯಲ್ಲಿ ಸುತ್ಲಿ ಅಥವಾ ಆಟಂ ಬಾಂಬ್​ ಎಂದು ಕರೆಯಲ್ಪಡುವ ಪಟಾಕಿ ಉತ್ಪಾದನೆ, ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಲಾಗಿದೆ. ಅಕ್ಟೋಬರ್ 27ರಿಂದ ನವೆಂಬರ್ 7ರವರೆಗೆ ನಗರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ 125 ಡೆಸಿಬಲ್​ಗಿಂತ ಹೆಚ್ಚಿನ ಶಬ್ದವನ್ನು ಉಂಟುಮಾಡುವ ಪಟಾಕಿಗಳನ್ನು ಸಿಡಿಸದಂತೆ ಸರ್ಕಾರ ಜನರಿಗೆ ಆದೇಶ ನೀಡಿದೆ. ಶಬ್ಧ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ರಾತ್ರಿ 10ರಿಂದ ಬೆಳಗ್ಗೆ 6ವರೆಗೆ ಸಿಡಿಸುವಂತಿಲ್ಲ.

ಛತ್ತೀಸ್​ಗಢ

ಛತ್ತೀಸ್​ಗಢ ಸರ್ಕಾರವು ದೀಪಾವಳಿ ಮತ್ತು ಗುರುಪರ್ವದ ಸಮಯದಲ್ಲಿ ರಾತ್ರಿ 8-10 ಗಂಟೆಯವರೆಗೆ ಪಟಾಕಿಗಳನ್ನು ಸಿಡಿಸಬಹುದು ಎಂದು ಹೇಳಿದೆ. ಮಾರ್ಗಸೂಚಿ ಅನ್ವಯ, ಛತ್ ಪೂಜೆಯಂದು ಬೆಳಗ್ಗೆ 6-8, ಹೊಸ ವರ್ಷ ಮತ್ತು ಕ್ರಿಸ್​ಮಸ್​ ದಿನ ರಾತ್ರಿ 11.55ರಿಂದ ಮಧ್ಯರಾತ್ರಿ 12.30 ರವರೆಗೆ ಪಟಾಕಿ ಸಿಡಿಸುಬಹುದು.

ಇದನ್ನೂ ಓದಿ:Cooking Oil Price Drop: ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಬಂಪರ್ ಕೊಡುಗೆ..!

ಪಾಂಡಿಚೇರಿ

ಕೇಂದ್ರಾಡಳಿತ ಪ್ರದೇಶವು ದೀಪಾವಳಿಗೂ ಮುನ್ನ ಕಡಿಮೆ ದರದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಸರ್ಕಾರಿ ಸಂಸ್ಥೆಯಾದ ಪ್ಯಾಪ್ಸ್ಕೋ ಪಾಂಡಿಚೇರಿಯಾದ್ಯಂತ ಪಟಾಕಿಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಮಳಿಗೆಗಳನ್ನು ಸ್ಥಾಪಿಸಿದೆ. ಸಂಸ್ಥೆಯು ಸಾರ್ವಜನಕರಿಗೆ ಶೇ.75ರಷ್ಟು ಸಬ್ಸಿಡಿಯಲ್ಲಿ ಪಟಾಕಿಗಳನ್ನು ನೀಡುತ್ತಿದೆ.

ರಾಜಸ್ಥಾನ

ರಾಜಸ್ಥಾನ ಸರ್ಕಾರವು ಈ ದೀಪಾವಳಿಯಲ್ಲಿ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಮಾತ್ರ ಅನುಮತಿ ನೀಡಿದೆ. ಮುಂಬರುವ ಹಬ್ಬ-ಹರಿದಿನಗಳಲ್ಲಿ ಪಟಾಖಿ ಸಿಡಿಸುವ ನಿರ್ಬಂಧಿತ ಸಮಯವನ್ನು ಸರ್ಕಾರ ಹೊರಡಿಸಿದೆ.
Published by:Latha CG
First published: