• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video; ಪ್ಲಾಸ್ಟಿಕ್ ಬಾಟಲ್ ನುಂಗಿದ ನಾಗರ ಹಾವು ಏನ್ ಮಾಡ್ತು ಗೊತ್ತಾ?; ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ

Viral Video; ಪ್ಲಾಸ್ಟಿಕ್ ಬಾಟಲ್ ನುಂಗಿದ ನಾಗರ ಹಾವು ಏನ್ ಮಾಡ್ತು ಗೊತ್ತಾ?; ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ

ಪ್ಲಾಸ್ಟಿಕ್ ಬಾಟಲ್ ನುಂಗಿ ಮತ್ತೆ ಹೊರಗೆಸೆದ ನಾಗರಹಾವು.

ಪ್ಲಾಸ್ಟಿಕ್ ಬಾಟಲ್ ನುಂಗಿ ಮತ್ತೆ ಹೊರಗೆಸೆದ ನಾಗರಹಾವು.

ಈ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಅರಣ್ಯ ಅಧಿಕಾರಿ ಪ್ರವೀಣ್ ನೀವು ಉಪಯೋಗಿಸಿ ಎಸೆಯುವ ಒಂದು ಪ್ಲಾಸ್ಟಿಕ್ ಬಾಟಲ್ ಅರಣ್ಯ ಜೀವಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.

  • Share this:

ನಾಗರ ಹಾವೊಂದು ಪ್ಲಾಸ್ಟಿಕ್ ಬಾಟಲ್ ನುಂಗಿ ಅರಗಿಸಿಕೊಳ್ಳಲಾಗದೆ ಮತ್ತೆ ಆ ಬಾಟಲ್ ಅನ್ನು ಹೊರಗೆ ಹಾಕಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವೈರಲ್ ಆಗುತ್ತಿದೆ.


ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಖಾಸಗಿ ಟ್ವಿಟರ್​ನಲ್ಲಿ ಹಂಚಿಕೊಂಡಿರುವ 48 ಸೆಕೆಂಡ್ ಉದ್ದದ ದೃಶ್ಯವನ್ನು ಲಕ್ಷಾಂತರ ಜನ ಟ್ವಿಟರ್​ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದು ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಕಿಡಿಕಾರುತ್ತಿದ್ದಾರೆ.ಈ ದೃಶ್ಯದಲ್ಲಿ ಆಹಾರ ಹುಡುಕಿಕೊಂಡು ಗ್ರಾಮದೊಳಗೆ ಬರುವ ಹಾವೊಂದು ಪ್ಲಾಸ್ಟಿಕ್​ ಬಾಟಲ್​ ಅನ್ನು ನುಂಗಿದ್ದು, ಅದನ್ನು ಅರಗಿಸಿಕೊಳ್ಳಲಾಗದೆ ಒದ್ದಾಡಿದೆ. ಕೊನೆಗೆ ಅದನ್ನು ಉಗುಳಲು ಅರಣ್ಯ ಸೇವಾ ಅಧಿಕಾರಿ ಪ್ರವೀಣ್​ ಪ್ರಚೋದನೆ ನೀಡಿದಾಗ ಹಾವು ಬಾಟಲ್ ಅನ್ನು ಉಗುಳಿದೆ. ನಂತರ ಹಾವನ್ನು ರಕ್ಷಿಸಿ ಅರಣ್ಯದಲ್ಲಿ ಬಿಡಲಾಗಿದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಅರಣ್ಯ ಅಧಿಕಾರಿ ಪ್ರವೀಣ್ "ನೀವು ಉಪಯೋಗಿಸಿ ಎಸೆಯುವ ಒಂದು ಪ್ಲಾಸ್ಟಿಕ್ ಬಾಟಲ್ ಅರಣ್ಯ ಜೀವಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ" ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ : ಇಡೀ ದೇಶಕ್ಕೆ ರಾಷ್ಟ್ರಧ್ವಜವನ್ನು ಸರಬರಾಜು ಮಾಡುವ ಹೆಮ್ಮೆಯ ಖಾದಿ ಗ್ರಾಮೋದ್ಯೋಗ ಕೇಂದ್ರ ಎಲ್ಲಿದೆ, ಇದರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು