SaveLakshaDweep: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್​ ಪಟೇಲ್ ವಿರೋಧಿಸಿ ಪ್ರಧಾನಿಗೆ 93 ಮಾಜಿ ಉನ್ನತ ಅಧಿಕಾರಿಗಳ ಪತ್ರ

ದಿನೇಶ್ವರ್ ಶರ್ಮ ನಂತರ ಲಕ್ಷದ್ವೀಪಕ್ಕೆ ಯಾವ IAS-IPS ಅಧಿಕಾರಿ ಆಡಳಿತಾಧಿಕಾರಿ ಬರುತ್ತಾರೆ? ಎಂದು ಇಡೀ ದ್ವೀಪದ ಜನ ಕಾತುರದಿಂದ ಕಾದು ನೋಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಅಧಿಕಾರಿಯಾಗಿ ಬಂದವರೆ ಈ ರಾಜಕಾರಣಿ ಪ್ರಫುಲ್ ಖೋಡಾ ಪಟೇಲ್. ಅಲ್ಲಿಂದ ಆರಂಭವಾಗಿತ್ತು ಸಮಸ್ಯೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ತಿರುವನಂತಪುರಂ (ಜೂನ್ 06): ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಸರಣಿ ವಿವಾದಾತ್ಮಕ ನಿರ್ಧಾರಗಳ ವಿರುದ್ಧ ದೇಶಾದ್ಯಂತದ 93 ನಿವೃತ್ತ ಉನ್ನತ ನಾಗರಿಕ ಸೇವಾ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದು ಸಹಿ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪತ್ರದಲ್ಲಿ ನಿವೃತ್ತ ಅಧಿಕಾರಿಗಳು, "ಒಂದು ದ್ವೀಪದ ಆಡಳಿತ ಅಧಿಕಾರಿಯಾಗಿ ನೇಮಕವಾದವರು ಯಾವುದೇ ಪಕ್ಷದ ಪರ ಕೆಲಸ ಮಾಡುವುದು ಸರಿಯಲ್ಲ. ಪ್ರಫುಲ್ ಪಟೇಲ್ ಲಕ್ಷದ್ವೀಪದಲ್ಲಿ ಸಾಂವಿಧಾನಿಕವಾಗಿ ತಟಸ್ಥ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು" ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, "ಲಕ್ಷದ್ವೀಪ ಭಾರತದ ಪ್ರಾಚೀನ ಕೇಂದ್ರಾಡಳಿತ ಪ್ರದೇಶವಾಗಿದ್ದು, 'ಅಭಿವೃದ್ಧಿ' ಹೆಸರಿನಲ್ಲಿ ನಡೆಯುತ್ತಿರುವ ಗೊಂದಲದ ಬೆಳವಣಿಗೆಗಳ ಬಗ್ಗೆ ನಮ್ಮ ಆಳವಾದ ಕಾಳಜಿಯನ್ನು ನೋಂದಾಯಿಸಲು ನಾವು ಇಂದು ನಿಮಗೆ ಪತ್ರ ಬರೆಯುತ್ತಿದ್ದೇವೆ" ಎಂದು ಅಧಿಕಾರಿಗಳು ಪ್ರಧಾನಿ ಮೋದಿಗೆ ತಿಳಿಸಿದ್ದಾರೆ.

  ಕಳೆದ ಡಿಸೆಂಬರ್​ನಲ್ಲಿ ಲಕ್ಷದ್ವೀಪಕ್ಕೆ ಆಡಳಿತ ಅಧಿಕಾರಿಯಾಗಿ ನೇಮಕವಾದ ಪ್ರಫುಲ್​ ಪಟೇಲ್​ ಅನೇಕ ಅನಗತ್ಯ ಕಾನೂನುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಜಾರಿ ಮಾಡುತ್ತಿದ್ದಾರೆ. ಅಲ್ಲದೆ, ಅವರು ಹೊಸದಾಗಿ ಜಾರಿಗೆ ತಂದಿರುವ ನಾಲ್ಕು ಕಾನೂನುಗಳು ಇದೀಗ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಹೀಗಾಗಿ ದ್ವೀಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ನಿವೃತ್ತ ಅಧಿಕಾರಿಗಳು, "ಪ್ರಫುಲ್ ಪಟೇಲ್ ಅವರ ಈ ಪ್ರತಿಯೊಂದು ಕರಡು ನಿಯಮಗಳು ದ್ವೀಪಗಳು ಮತ್ತು ದ್ವೀಪವಾಸಿಗಳ ನೀತಿ ಹಾಗೂ ಹಿತಾಸಕ್ತಿಗಳಿಗೆ ವಿರುದ್ಧವಾದ ದೊಡ್ಡ ಕಾರ್ಯಸೂಚಿಯ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಲಕ್ಷದ್ವೀಪದ ಜನರನ್ನು ಸಂಪರ್ಕಿಸದೆ ಈ ನಿರ್ಧಾರಗಳನ್ನು ಏಕಮುಖವಾಗಿ ತೆಗೆದುಕೊಳ್ಳಲಾಗಿದೆ.

  ಈ ಪ್ರತಿಯೊಂದು ಕ್ರಮಗಳು ಅಭಿವೃದ್ಧಿಯಲ್ಲ, ಆದರೆ ಲಕ್ಷದ್ವೀಪದ ಪರಿಸರ ಮತ್ತು ಸಮಾಜವನ್ನು ಗೌರವಿಸುವ ಸ್ಥಾಪಿತ ಅಭ್ಯಾಸಗಳನ್ನು ಉಲ್ಲಂಘಿಸಿ, ಅನ್ಯ ಮತ್ತು ಅನಿಯಂತ್ರಿತ ನೀತಿ ನಿರೂಪಣೆಯನ್ನು ಕಡಿಮೆ ಮಾಡುತ್ತದೆ. ಒಟ್ಟಿಗೆ ತೆಗೆದುಕೊಂಡರೆ, ನಿರ್ವಾಹಕರ ಕ್ರಮಗಳು ಮತ್ತು ದೂರಗಾಮಿ ಪ್ರಸ್ತಾಪಗಳು, ಸರಿಯಾದ ಸಮಾಲೋಚನೆಯಿಲ್ಲದೆ ದ್ವೀಪವಾಸಿಗಳು, ಲಕ್ಷದ್ವೀಪ ಸಮಾಜ, ಆರ್ಥಿಕತೆ ಮತ್ತು ಭೂದೃಶ್ಯದ ಮೇಲೆ ದಾಳಿ ನಡೆಸುತ್ತಾರೆ, ದ್ವೀಪಗಳು ಪ್ರವಾಸಿಗರಿಗೆ ಮತ್ತು ಹೊರಗಿನ ಪ್ರಪಂಚದ ಪ್ರವಾಸೋದ್ಯಮ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್ನ ಒಂದು ಭಾಗವಾಗಿದೆ" ಎಂದು ಪತ್ರದಲ್ಲಿ ದೂರಲಾಗಿದೆ.

  93 ಜನ ಹಿರಿಯ ಮಾಜಿ ಅಧಿಕಾರಿಗಳು ಸಹಿ ಮಾಡಿದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದು, ಈ ಪತ್ರದಲ್ಲಿ ಈಗಿನ ಆಡಳಿತಾಧಿಕಾರಿ ಪ್ರಫುಲ್ ಪಟೇಲ್​ ಅವರನ್ನು ಕೂಡಲೇ ಆ ಸ್ಥಾನದಿಂದ ತೆರವು ಮಾಡಬೇಕು, ಅಲ್ಲದೆ, ಹೊಸ ಅಧಿಕಾರಿಯಾಗಿ ಸೂಕ್ತ ವ್ಯಕ್ತಿಯನ್ನು ನೇಮ ಮಾಡಬೇಕು" ಎಂದು ಒತ್ತಾಯಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರಫುಲ್ ಪಟೇಲ್ ದ್ವೀಪದಲ್ಲಿ ಜಾರಿಗೆ ತಂದ ಇನ್ನೂ ಕೆಲವು ಕರಡು ಆದೇಶಗಳು ಕೇಂದ್ರ ಗೃಹ ಸಚಿವಾಲಯದ ಮುಂದೆ ಅನುಮೋದನೆಗೆ ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: SaveLakshaDweep: ನೆಮ್ಮದಿಯಾಗಿದ್ದ ಲಕ್ಷದ್ವೀಪದಲ್ಲಿ ಹುಳಿ ಹಿಂಡಿತಾ ಕೇಂದ್ರ, ಏನಿದು ಸೇವ್ ಲಕ್ಷದ್ವೀಪ ಹೋರಾಟ? ಇಲ್ಲಿದೆ ಮಾಹಿತಿ!  ಯಾರು ಈ ಪ್ರಫುಲ್ ಖೋಡಾ ಪಟೇಲ್?

  ದಿನೇಶ್ವರ್ ಶರ್ಮ ನಂತರ ಲಕ್ಷದ್ವೀಪಕ್ಕೆ ಯಾವ IAS-IPS ಅಧಿಕಾರಿ ಆಡಳಿತಾಧಿಕಾರಿ ಬರುತ್ತಾರೆ? ಎಂದು ಇಡೀ ದ್ವೀಪದ ಜನ ಕಾತುರದಿಂದ ಕಾದು ನೋಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಅಧಿಕಾರಿಯಾಗಿ ಬಂದವರೆ ಈ ರಾಜಕಾರಣಿ ಪ್ರಫುಲ್ ಖೋಡಾ ಪಟೇಲ್. ಅಲ್ಲಿಂದ ಆರಂಭವಾಗಿತ್ತು ಸಮಸ್ಯೆ.

  ಇದನ್ನೂ ಓದಿ: PM Modi: ಜೈಲಿಗೆ ಹೋಗೋ ಆಸೆಯಿಂದ ‘ಮೋದಿಯನ್ನ ಸಾಯಿಸ್ತೀನಿ’ ಎಂತ ಪೋಲೀಸರಿಗೆ ಕರೆ ಮಾಡಿದ ಆಸಾಮಿ !

  ಯಾರು ಈ ಪ್ರಫುಲ್ ಖೋಡಾ ಪಟೇಲ್ ಎಂಬ ಇತಿಹಾಸವನ್ನು ಕೆದಕಿದರೆ ಹಲವು ರೋಚಕ ಕಹಿ ಸತ್ಯಗಳು ಬಹಿರಂಗವಾಗುತ್ತದೆ. ಅಸಲಿಗೆ ಗುಜರಾತ್ನಲ್ಲಿ ಅಮಿತ್ ಶಾ ಸಚಿವರಾಗಿದ್ದ ಸಂದರ್ಭದಲ್ಲಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅವರನ್ನು ಬಂಧಿಸಿತ್ತು. ಈ ವೇಳೆ ಅಮಿತ್ ಶಾ ಖಾತೆಯನ್ನು ನಿರ್ವಹಿಸಿದ್ದು ಇದೇ ಪ್ರಫುಲ್ ಖೋಡಾ ಪಟೇಲ್.ಲಕ್ಷದ್ವೀಪಕ್ಕೂ ಮುನ್ನ ಡಿಯು-ಡಮನ್ ಮತ್ತು ದಾದ್ರಾ ಹವೇಲಿ ಎಂಬ ಕೇಂದ್ರಾಡಳಿತ ಪ್ರದೇಶಕ್ಕೂ ಪ್ರಫುಲ್ ಖೋಡಾ ಪಟೇಲ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಕಳುಹಿಸಲಾಗಿತ್ತು. ಈ ವೇಳೆ 2019ರಲ್ಲಿ ಡಿಯು-ಡಮನ್ನಲ್ಲಿಉಂಟಾದ ಒಂದು ಸಣ್ಣ ಗಲಭೆಯಲ್ಲಿ 90ಕ್ಕೂ ಹೆಚ್ಚು ಬಡ ಕೂಲಿ ಕಾರ್ಮಕರ ಮನೆಯನ್ನು ನೆಲಸಮ ಮಾಡಿ, ಸೆಕ್ಷನ್ 144 ಜಾರಿ ಮಾಡಿ, ಸರ್ಕಾರಿ ಶಾಲೆಗಳನ್ನು ತಾತ್ಕಾಲಿಕ ಜೈಲನ್ನಾಗಿ ಪರಿವರ್ತಿಸಿ ಅಲ್ಲಿನ ಬಡ ಜನರನ್ನು ಬೀದಿಗೆ ತಂದ ಕುಖ್ಯಾತಿಯೂ ಇವರಿಗೆ ಇದೆ.

  ಇಷ್ಟೇ ಅಲ್ಲ, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ದಾದ್ರಾ-ಹವೇಲಿ ಸಂಸದ ಮೋಹನ್ ಡೆಲ್ಕರ್ ತಮ್ಮ ಸಾವಿಗೆ ಪ್ರಫುಲ್ ಖೋಡಾ ಪಟೇಲ್ ಅವರೇ ಕಾರಣ ಎಂದು ತಮ್ಮ ಡೆತ್ನೋಟ್ನಲ್ಲಿ ಬರೆದಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕೇಂದ್ರ ಸರ್ಕಾರ ಅವರು ಗುಜರಾತ್ನ ರಾಜಕಾರಣಿ ಎಂಬ ಏಕೈಕ ಕಾರಣಕ್ಕೆ ಎಲ್ಲಾ ಸಂಪ್ರದಾಯಗಳನ್ನೂ ಮುರಿದು ಇದೀಗ ಅವರನ್ನು ಲಕ್ಷದ್ವೀಪಕ್ಕೆ ಕಳುಹಿಸಿದೆ. ಆದರೆ, ಲಕ್ಷದ್ವೀಪಕ್ಕೆ ಆತ ಕಾಲಿಟ್ಟ ದಿನಗಳಿಂದಲೂ ದ್ವೀಪದಲ್ಲಿ ಪ್ರತಿಭಟನೆಗಳು ಕಾವೇರುತ್ತಲೇ ಇವೆ.
  Published by:MAshok Kumar
  First published: