ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್​ನ ಹರ್ದೀಪ್ ಸಿಂಗ್ ದಂಗ್

ಕಾಂಗ್ರೆಸ್​ನ ಇತರೆ ಶಾಸಕರಾದ ಬಿಸಹುಲಾಲ್​ ಸಿಂಗ್, ರಘುರಾಜ್ ಕಸ್ನಾನಾ ಮತ್ತು ಪಕ್ಷೇತರ ಶಾಸಕ ಥಾಕೂರ್ ಸುರೇಂದರ್ ಸಿಂಗ್ ಅವರು ಕೂಡ ಬುಧವಾರ ರಾತ್ರಿಯಿಂದ ಕಾಣೆಯಾಗಿದ್ದು, ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಹರ್ದೀಪ್ ಸಿಂಗ್ ದಂಗ್.

ಹರ್ದೀಪ್ ಸಿಂಗ್ ದಂಗ್.

 • Share this:
  ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಂಗ್ ಅವರು ವಿಧಾನಸಭೆ ಸದಸ್ಯ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ಪತ್ರವನ್ನು ಕಾರ್ಯದರ್ಶಿ ಸಚಿವಾಲಯ ಇನ್ನೂ ಸ್ವೀಕರಿಸಿಲ್ಲ. 

  ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಂಗ್ ಅವರನ್ನು ಬಿಜೆಪಿ ನಾಯಕರು ಕರೆದುಕೊಂಡು ಹೋಗಿ, ಕರ್ನಾಟಕದ ಬೆಂಗಳೂರು ಅಥವಾ ಚಿಕ್ಕಮಗಳೂರಿನಲ್ಲಿ ಇರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ನೆನ್ನೆಯಿಂದ ಆರೋಪ ಮಾಡುತ್ತಿದ್ದಾರೆ. ಏತನ್ಮಧ್ಯೆ ದಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

  ಕಾಂಗ್ರೆಸ್​ನ ಇತರೆ ಶಾಸಕರಾದ ಬಿಸಹುಲಾಲ್​ ಸಿಂಗ್, ರಘುರಾಜ್ ಕಸ್ನಾನಾ ಮತ್ತು ಪಕ್ಷೇತರ ಶಾಸಕ ಥಾಕೂರ್ ಸುರೇಂದರ್ ಸಿಂಗ್ ಅವರು ಕೂಡ ಬುಧವಾರ ರಾತ್ರಿಯಿಂದ ಕಾಣೆಯಾಗಿದ್ದು, ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

  ಹರ್ದೀಪ್ ಸಿಂಗ್ ಅವರು ಮಂದಸೌರ್​ನ ಸುವಾಸ್ರಾ ಕ್ಷೇತ್ರದ ಶಾಸಕರಾಗಿದ್ದಾರೆ. ಸರ್ಕಾರದಲ್ಲಿ ಯಾವುದೇ ಹಿರಿಯ ಸ್ಥಾನ ಮತ್ತು ಸಚಿವ ಸ್ಥಾನ ನೀಡದ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಇರುವುದಾಗಿ ದಂಗ್​ ಹೇಳಿದ್ದರು.

  ಇದನ್ನು ಓದಿ: ಮಧ್ಯಪ್ರದೇಶದ ಕೈ ಶಾಸಕರು ಕರ್ನಾಟಕದ ರೆಸಾರ್ಟ್​ಗೆ ಶಿಫ್ಟ್​; ಪರಿಸ್ಥಿತಿ ಇನ್ನೂ ಕೈಮೀರಿಲ್ಲ ಎಂದ ಸಿಎಂ

  ಕೆಲ ಶಾಸಕರನ್ನು ಬಿಜೆಪಿ ನಾಯಕರು ಮಧ್ಯಪ್ರದೇಶದಿಂದ ಕರೆದೊಯ್ದಿದ್ದಾರೆ. ಇಂದು ಮಧ್ಯಾಹ್ನ ಅವರನ್ನು ಹರಿಯಾಣದ ಗುರುಗ್ರಾಮ್ ಪ್ರದೇಶದ ಹೋಟೆಲ್​ನಲ್ಲಿ ಇರಿಸಿದ್ದಾರೆ ಎಂದು ಆರೋಪಿಸಲಾಗಿದೆ.
  First published: