HOME » NEWS » National-international » DISCUSSIONS CONFIDENTIAL DONT WANT TO PREDICT S JAISHANKAR ON CHINA MAK

ಗಡಿ ತಂಟೆಗೆ ಸಂಬಂಧಿಸಿದಂತೆ ಚೀನಾ ಜೊತೆಗಿನ ಮಾತುಕತೆ ಗೌಪ್ಯವಾಗಿರಲಿದೆ; ಸಚಿವ ಎಸ್​. ಜೈಶಂಕರ್​

ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಯ ನಂತರ ಚೀನಾ ಸಹ ಗಡಿ ಪ್ರದೇಶದಿಂದ ಅರ್ಧದಷ್ಟು ಸೈನಿಕರ ಪಡೆಯನ್ನು ಹಿಂಪಡೆದುಕೊಂಡಿದೆ. ಆದರೆ, ಮತ್ತೆ ಮತ್ತೆ ಗಡಿಯಲ್ಲಿ ಹೊಸ ಉಲ್ಲಂಘನೆಗಳ ಮೂಲಕ ಚೀನಾ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವ ಜೈಶಂಕರ್​ ಆರೋಪಿಸಿದ್ದಾರೆ.

news18-kannada
Updated:October 16, 2020, 8:53 AM IST
ಗಡಿ ತಂಟೆಗೆ ಸಂಬಂಧಿಸಿದಂತೆ ಚೀನಾ ಜೊತೆಗಿನ ಮಾತುಕತೆ ಗೌಪ್ಯವಾಗಿರಲಿದೆ; ಸಚಿವ ಎಸ್​. ಜೈಶಂಕರ್​
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್
  • Share this:
ನವ ದೆಹಲಿ: ಲಡಾಖ್​ನಲ್ಲಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಚರ್ಚೆಗಳ ಫಲಿತಾಂಶವನ್ನು ನಾನು ಊಹಿಸಲು ಬಯಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಭಾರತ ಮತ್ತು ಚೀನಾ ನಡುವೆ ಕಳೆದ ಹಲವು ತಿಂಗಳುಗಳಿಂದ ಲಡಾಖ್ ಗಡಿಗೆ ಸಂಬಂಧಿಸಿದಂತೆ ತಕರಾರುಗಳು ನಡೆಯುತ್ತಲೇ ಇವೆ. ಈ ನಡುವೆ ಕಳೆದ ಜೂನ್ ತಿಂಗಳಲ್ಲಿ ಎರಡೂ ದೇಶಗಳ ನಡುವೆ ಗಡಿ ಪ್ರದೇಶದಲ್ಲಿ ಘರ್ಷಣೆ ಉಂಟಾಗಿದ್ದು, ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಈ ಘಟನೆಯ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಅಲ್ಲದೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ತದನಂತರ ಚೀನಾ ಜೊತೆಗೆ ಹಲವು ಬಾರಿ ಭಾರತ ಉನ್ನತ ಮಟ್ಟದ ಮಾತುಕತೆ ನಡೆಸುತ್ತಿದೆ. ಈಗಲೂ ಮಾತುಕತೆ ಚಾಲ್ತಿಯಲ್ಲಿದೆ. ಈ ಸಂಬಂಧ ಇಂದು ಮತ್ತೆ ಬ್ಲೂಮ್ಬರ್ಗ್ ಇಂಡಿಯಾ ಎಕನಾಮಿಕ್ ಫೋರಂನಲ್ಲಿ ಮಾತನಾಡಿರುವ ಸಚಿವ ಜೈಶಂಕರ್, “ಎರಡೂ ದೇಶಗಳ ನಡುವೆ ಚರ್ಚೆ ಮಾತುಕತೆ ನಡೆಯುತ್ತಲೇ ಇದೆ. ಈ ವಿಚಾರ ಸದ್ಯಕ್ಕೆ ಪ್ರಗತಿಯಲ್ಲಿದೆ. ಆದರೆ, ಈ ಮಾತುಕತೆಯಲ್ಲಿ ಏನು ನಡೆಯುತ್ತಿದೆ ಎಂದು ಊಹಿಸಬೇಡಿ” ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಬ್ಲೂಮ್​ಬರ್ಗ್ ಇಂಡಿಯಾ ಎಕನಾಮಿಕ್ ಫೋರಂನಲ್ಲಿ ಭಾರತ ಚೀನಾ ನಡುವಿನ ಮಾತುಕತೆಯಲ್ಲಿ ಏನು ನಡೆಯುತ್ತಿದೆ, ಈ ವಿಚಾರದ ಕುರಿತು ಸ್ಪಷ್ಟತೆಬೇಕು ಎಂಬ ಪತ್ರಕರ್ತರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಸಚಿವ ಜೈಶಂಕರ್, “ಭಾರತ ಮತ್ತು ಚೀನಾ ನಡುವಿನ ಗಡಿ ತಕರಾರಿನ ಮಾತುಕತೆ ಗೌಪ್ಯವಾದ ಸಂಗತಿಯಾಗಿದೆ. ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಭಣಗೊಂಡಿದ್ದು ಮತ್ತೆ ಶಾಂತಿ ಸ್ಥಾಪಿಸಲು ಮತ್ತು ಯಥಾಸ್ಥಿತಿಯನ್ನು ಪುನಃಸ್ಥಾಪನೆಗಾಗಿ ಭಾರತ ಒತ್ತಾಯಿಸುತ್ತಿದೆ.

ಚೀನಾ ಜೊತೆಗಿನ ಮಾತುಕತೆ ವೇಳೆ ಇದೇ ವಿಚಾರವನ್ನು ಭಾರತ ಮುಂದಿಟ್ಟಿದೆ. ಅಲ್ಲದೆ, ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಯ ನಂತರ ಚೀನಾ ಸಹ ಗಡಿ ಪ್ರದೇಶದಿಂದ ಅರ್ಧದಷ್ಟು ಸೈನಿಕರ ಪಡೆಯನ್ನು ಹಿಂಪಡೆದುಕೊಂಡಿದೆ. ಆದರೆ, ಮತ್ತೆ ಮತ್ತೆ ಗಡಿಯಲ್ಲಿ ಹೊಸ ಉಲ್ಲಂಘನೆಗಳ ಮೂಲಕ ಚೀನಾ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ.

ಇದಲ್ಲದೆ, "ಗಡಿ ಪ್ರದೇಶ ಮಾತ್ರವಲ್ಲ, ಲಡಾಖ್​ನಲ್ಲಿ ಸರಣಿ ಸೇತುವೆಗಳನ್ನು ಉದ್ಘಾಟಿಸುವುದಕ್ಕೂ ಚೀನಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಗುರುವಾರ, ವಿದೇಶಾಂಗ ಸಚಿವಾಲಯ ಮತ್ತೆ ಚೀನಾಕ್ಕೆ ಜೋರಾಗಿ ಮತ್ತು ಸ್ಪಷ್ಟವಾದ ಸಂದೇಶವನ್ನು ನೀಡಿದೆ.

ಇದನ್ನೂ ಓದಿ : ಹುಬ್ಬಳ್ಳಿ: ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಲು ಅನುಮತಿ ನೀಡುವಂತೆ ರೈತ ಸಂಘದಿಂದ ಒತ್ತಾಯ

"ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಕೇಂದ್ರ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿವೆ. ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಅವಕಾಶ ಇಲ್ಲ. ಭಾರತದ ಆಂತರಿಕ ವಿಷಯಗಳ ಬಗ್ಗೆ ನೆರೆ ದೇಶಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಾವು ಭಾವಿಸುತ್ತೇವೆ ಅವರು ಇತರರಂತೆಯೇ ನಿರೀಕ್ಷಿಸುತ್ತಾರೆ "ಎಂದು ಸಚಿವಾಲಯ ಹೇಳಿದೆ ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು, ಬೀಜಿಂಗ್ ತನ್ನ ನಿಯಂತ್ರಣ ರೇಖೆ ಅಥವಾ ಎಲ್ಎಸಿಯಲ್ಲಿ ತನ್ನ ಸ್ಥಾನವನ್ನು ಪ್ರತಿಪಾದಿಸಿತ್ತು. ಆದರೆ, ತದನಂತರ ಭಾರತ ಲಡಾಖ್​ನಲ್ಲಿ ಚೀನಾ ತನ್ನ ಸ್ಥಳ ಎಂದು ಹೇಳಿಕೊಳ್ಳುವ ಭಾಗದ ಮೇಲಿನ ಚೀನಾದ ಹಕ್ಕುಗಳನ್ನು ಸಮಗ್ರವಾಗಿ ತಿರಸ್ಕರಿಸಿದೆ.
Published by: MAshok Kumar
First published: October 16, 2020, 8:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories