Killer Hornets - ಕೊರೋನಾ ಆಯ್ತು, ಅಮೆರಿಕ ಪ್ರವೇಶಿಸಿದ ಚೀನಾದ ಮಾರಕ ಕಿಲ್ಲರ್ ಕಡಜಗಳು

ಮೊದಲನೆಯದಾಗಿ ಇದು ಅಮೆರಿಕದ ಕೃಷಿಗಾರಿಕೆಯನ್ನೇ ನಾಶ ಮಾಡಬಹುದು. ಎರಡನೆಯದಾಗಿ ಇದು ಮಾನವ ಮೇಲೂ ದಾಳಿ ಮಾಡಬಹುದು.

Vijayasarthy SN | news18
Updated:May 7, 2020, 2:46 PM IST
Killer Hornets - ಕೊರೋನಾ ಆಯ್ತು, ಅಮೆರಿಕ ಪ್ರವೇಶಿಸಿದ ಚೀನಾದ ಮಾರಕ ಕಿಲ್ಲರ್ ಕಡಜಗಳು
ದೈತ್ಯ ಕಡಜ
  • News18
  • Last Updated: May 7, 2020, 2:46 PM IST
  • Share this:
ಬೆಂಗಳೂರು(ಮೇ 07): ಚೀನಾದಲ್ಲಿ ಮೊದಲು ಕಾಣಿಸಿಕೊಂಡಿತೆನ್ನಲಾದ ನೂತನ ಕೊರೋನಾ ವೈರಸ್ ಇದೀಗ ವಿಶ್ವದ ಬೇರೆ ರಾಷ್ಟ್ರಗಳಿಗಿಂತ ಅಮೆರಿಕದಲ್ಲಿ ಅತೀ ಹೆಚ್ಚು ಹಾನಿ ಉಂಟು ಮಾಡಿದೆ. ಬರೋಬ್ಬರಿ 12 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. 75 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಅಧ್ಯಕ್ಷರು ಚೀನೀ ವೈರಸ್​ನಿಂದ ಎಂಥ ಅನಾಹುತವಾಗುತ್ತಿದೆ ಎಂದು ಹಲಬುತ್ತಿರುವಾಗಲೇ ಈಗ ಚೀನಾದ ಹುಳುವೊಂದು ಅಮೆರಿಕದ ಮೇಲೆ ದಾಳಿ ನಡೆಸಿದೆ. ಇದು ಅಂತಿಂಥ ಹುಳುವಲ್ಲ. ಮರ್ಡರ್ ಹಾರ್ನೆಟ್ ಎಂದು ಕರೆಯಲಾಗುವ ಇದು ವಾಷಿಂಗ್ಟನ್ ರಾಜ್ಯ ಪ್ರವೇಶಿಸಿದೆ.

ಮರ್ಡರ್ ಹಾರ್ನೆಟ್ ಎಂಬುದು ಕಡಜದ ಒಂದು ಪ್ರಭೇದ. ಬಹಳ ಅಪಾಯಕಾರಿಯಾಗಿರುವ ಇದು ಗಾತ್ರದಲ್ಲಿ ಎರಡೂವರೆ ಅಂಗುಲ(inch) ಇರುತ್ತದೆ. ಚೀನಾ, ತೈವಾನ್ ಹಾಗೂ ಈಶಾನ್ಯ ಏಷ್ಯನ್ ರಾಷ್ಟ್ರಗಳಲ್ಲಿ ಕಂಡುಬರುವ ಈ ದಪ್ಪ ಕಡಜ ವಾಷಿಂಗ್ಟನ್ ರಾಜ್ಯದ ಬ್ಲೇನೆಯಲ್ಲಿ ಕಾಣಿಸಿದೆ. ಹಲವು ಜನರು ತಾವು ಈ ಹುಳುವನ್ನು ನೋಡಿದ್ದಾಗಿ ಹೇಳಿದ್ದಾರೆ. ಆದರೆ, ಎರಡು ಪ್ರಕರಣವನ್ನು ಮಾತ್ರ ಅಧಿಕಾರಿಗಳು ಈವರೆಗೆ ಖಚಿತಪಡಿಸಿದ್ದಾರೆ. ಆದರೂ ಕೂಡ ಇಡೀ ಅಮೆರಿಕವೇ ಈಗ ಈ ಹುಳುವಿನ ಪ್ರವೇಶದಿಂದ ಆತಂಕಗೊಂಡಿದೆ.

ಇಷ್ಟು ಆತಂಕಗೊಳ್ಳಲು ಕಾರಣ ಏನು? ಈ ಕಡಜ ಅಷ್ಟು ಅಪಾಯಕಾರಿಯೇ? ಹೌದು. ಮೊದಲನೆಯದಾಗಿ ಇದು ಅಮೆರಿಕದ ಕೃಷಿಗಾರಿಕೆಯನ್ನೇ ನಾಶ ಮಾಡಬಹುದು. ಎರಡನೆಯದಾಗಿ ಇದು ಮಾನವ ಮೇಲೂ ದಾಳಿ ಮಾಡಬಹುದು.

ಇದನ್ನೂ ಓದಿ: What is Styrene Gas: ಆಂಧ್ರ ಅನಿಲ ದುರಂತ: ಏನಿದು ಸ್ಟೈರೀನ್ ಗ್ಯಾಸ್? ಅದರಿಂದ ಏನಪಾಯ?

ಈ ದಪ್ಪ ಕಡಜವು ಸ್ವಾಭಾವಿಕವಾಗಿ ಜೇನುಗೂಡಿನ ಮೇಲೆ ದಾಳಿ ಮಾಡುತ್ತವೆ. ಜೇನುಗೂಡನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಜೇನು ಹುಳುಗಳನ್ನ ನಿಷ್ಕ್ರಿಯಗೊಳಿಸುತ್ತವೆ. ಬೆರಳೆಣಿಕೆಯಷ್ಟು ಕಡಜಗಳು ಕೆಲವೇ ಗಂಟೆಗಳಲ್ಲಿ ಇಡೀ ಜೇನುಗೂಡನ್ನು ವಶಕ್ಕೆ ಪಡೆಯಬಲ್ಲವು. ಜೇನುಗೂಡು ತನ್ನ ಸುಪರ್ದಿಗೆ ಬಂದ ಬಳಿಕ ಕಡಜಗಳು ಈ ಸತ್ತ ಜೇನು ಹುಣಗಳನ್ನ ತನ್ನ ಮರಿಪೋಷಣೆಗೆ ಆಹಾರವಾಗಿ ಬಳಸುತ್ತವೆ. ಹೀಗೆ, ಜೇನು ಹುಳಗಳ ನಿರ್ನಾಮಕ್ಕೆ ಕಡಜ ಕಾರಣವಾಗುತ್ತದೆ.

ಕೃಷಿಗಾರಿಕೆಯಲ್ಲಿ ಪಾಲಿನೇಶನ್ ಅಥವಾ ಪರಾಗಸ್ಪರ್ಶ ಕ್ರಿಯೆ ಬಹಳ ಮುಖ್ಯ. ಪರಾಗಸ್ಪರ್ಶ ಕ್ರಿಯೆಯಲ್ಲಿ ಜೇನು ಹುಳಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಕೃಷಿ ಕ್ಷೇತ್ರಕ್ಕೆ ಈ ದೈತ್ಯ ಕಡಜ ಮಾರಕವಾಗಿ ಪರಿಣಮಿಸಬಹುದು ಎಂಬ ಆತಂಕ ಇದೆ.

ವಿಷಕಾರಿ ಹುಳು:ಈ ದಪ್ಪ ಕಡಜ ಮನುಷ್ಯನ ಮೇಲೆ ದಾಳಿ ಮಾಡಿದರೆ ಒಮ್ಮೆ ಮಾತ್ರ ಕುಟುಕುವುದಿಲ್ಲ. ಒಮ್ಮೆಗೇ ಹಲವು ಬಾರಿ ಕುಟುಕಬಲ್ಲುದು. ಪ್ರತೀ ಬಾರಿ ಕುಟುಕಿದಾಗೆಲ್ಲಾ ಇಂತಿಷ್ಟು ವಿಷ ಕಾರುತ್ತದೆ. ಆ ಮೂಲಕ ಹೆಚ್ಚು ಪ್ರಮಾಣದ ವಿಷವನ್ನು ದೇಹದೊಳಗೆ ಸೇರಿಸುತ್ತದೆ. ಈ ವಿಷ ಎಷ್ಟು ಅಪಾಯಕಾರಿ ಎಂದರೆ ಗಾಯದ ಸುತ್ತಮುತ್ತಲ ಮಾಂಸ ಖಂಡವೇ ಕರಗಿಬಿಡುತ್ತದೆ. ಹಲವು ಬಾರಿ ಇದು ಕುಟುಕಿದರೆ ವಿಷವು ರಕ್ತ ಸೇರಿಕೊಂಡು ಸಾವಿಗೂ ಕಾರಣವಾಗಬಹುದು. ಇದರ ಮುಳ್ಳೇ 6 ಮಿಲಿಮೀಟರ್ ಉದ್ದವಿರುತ್ತದೆ. ನೀವು ಎಂಥದ್ದೇ ಬಟ್ಟೆ ಹಾಕಿದ್ದರೂ ಭೇದಿಸಿ ದೇಹವನ್ನು ಚುಚ್ಚಬಲ್ಲುದು. ಜೇನುಹುಳದ ದಾಳಿಯಿಂದ ರಕ್ಷಿಸಿಕೊಳ್ಳಲು ಬಳಸುವ ಕವಚ ಕೂಡ ಕಡಜದ ಕಡಿತವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜನರು ಆತಂಕಗೊಂಡಿದ್ಧಾರೆ.

ಇದನ್ನೂ ಓದಿ: Covid Researcher Shot Dead - ಅಮೆರಿಕದಲ್ಲಿ ಕೊರೋನಾ ವೈರಸ್ ಅಧ್ಯಯನದ ಅಂತಿಮ ಹಂತದಲ್ಲಿದ್ದ ಚೀನೀ ವಿಜ್ಞಾನಿ ಹತ್ಯೆ

ಜೇನುಹುಳುವಿನಂತೆಯೇ ಕಡಜ ಕೂಡ ಸುಮ್ಮಸುಮ್ಮನೆ ಮನುಷ್ಯ ಹಾಗೂ ಇತರೆ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ. ಕೆಣಕಿದಾಗ ಮಾತ್ರ ರೌದ್ರಾವತಾರ ತಾಳುತ್ತವೆ. ಆದ್ದರಿಂದ ಅಮೆರಿಕದ ಅಧಿಕಾರಿಗಳು ಈ ಕಡಜದ ಸಹವಾಸಕ್ಕೆ ಯಾರೂ ಹೋಗಬಾರದು ಎಂದು ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.

ಅಷ್ಟಕ್ಕೂ ಈ ದೈತ್ಯ ಕಡಜ ಅಥವಾ ಕಿಲ್ಲರ್ ಹಾರ್ನೆಟ್ ಅಮೆರಿಕವನ್ನು ಹೇಗೆ ಪ್ರವೇಶಿಸಿತು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ. ವಾಷಿಂಗ್ಟನ್ ಹಡಗುದಾಣದಲ್ಲಿ ಕಂಟೇನರ್​ವೊಂದರಿಂದ ಇದು ಬಂದಿರಬಹುದು ಎಂದು ಶಂಕಿಸಲಾಗಿದೆ.

ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ

 
First published: May 7, 2020, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading