• Home
  • »
  • News
  • »
  • national-international
  • »
  • ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನೂತನ ಅಧ್ಯಕ್ಷರಾಗಿ ದಿನೇಶ್​ ಕುಮಾರ್ ಖರಾ ನೇಮಕ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನೂತನ ಅಧ್ಯಕ್ಷರಾಗಿ ದಿನೇಶ್​ ಕುಮಾರ್ ಖರಾ ನೇಮಕ

ದಿನೇಶ್ ಕುಮಾರ್ ಖರಾ

ದಿನೇಶ್ ಕುಮಾರ್ ಖರಾ

ದಿನೇಶ್​ ಕುಮಾರ್​ ಅವರನ್ನು ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ 2016 ಆಗಸ್ಟ್​​ನಲ್ಲಿ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ದಿನೇಶ್​ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಅವರ ಅವಧಿಯನ್ನು ಮತ್ತೆ ಎರಡು ವರ್ಷ ವಿಸ್ತರಿಸಲಾಯಿತು.

  • Share this:

    ನವದೆಹಲಿ(ಅ.07): ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಹಿರಿಯ ಬ್ಯಾಂಕರ್ ದಿನೇಶ್​ ಕುಮಾರ್ ಖರಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಜನೀಶ್​ ಕುಮಾರ್ ಅವರ ಸ್ಥಾನಕ್ಕೆ ದಿನೇಶ್​ ಕುಮಾರ್​ ಅವರನ್ನು ನೇಮಿಸಲಾಗಿದೆ. ರಜನೀಶ್​ ಕುಮಾರ್ ತಮ್ಮ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಿನ್ನೆಲೆ, ನೂತನ ಅಧ್ಯಕ್ಷರ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರವು ಮೂರು ವರ್ಷಗಳ ಅವಧಿಗೆ ದಿನೇಶ್​ ಕುಮಾರ್​ ಅವರನ್ನು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಅವಧಿಯು 2020ರ ಅಕ್ಟೋಬರ್ 7ರಿಂದ ಅಥವಾ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಮುಂದಿನ ಆದೇಶದವರೆಗೆ ಇರುತ್ತದೆ. ಹಣಕಾಸು ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ.


    ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಅಧ್ಯಕ್ಷರನ್ನಾಗಿ ದಿನೇಶ್​ ಕುಮಾರ್​​ ಅವರನ್ನು ನೇಮಿಸುವಂತೆ ಬ್ಯಾಂಕ್ಸ್​ ಬೋರ್ಡ್​​ ಬ್ಯೂರೋ(ಬಿಬಿಬಿ) ಕಳೆದ ತಿಂಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.


    ಎಸ್​​ಬಿಐ ಅಧ್ಯಕ್ಷರನ್ನು ಬ್ಯಾಂಕ್​​ನಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರ ತಂಡದಿಂದ ನೇಮಿಸಲಾಗುತ್ತದೆ. ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ದಿನೇಶ್​ ಕುಮಾರ್ ಅವರು 2017ರಲ್ಲಿ ಎಸ್​ಬಿಐ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸಿದ್ದರು.


    ದಿನೇಶ್​ ಕುಮಾರ್​ ಅವರನ್ನು ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ 2016 ಆಗಸ್ಟ್​​ನಲ್ಲಿ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ದಿನೇಶ್​ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಅವರ ಅವಧಿಯನ್ನು ಮತ್ತೆ ಎರಡು ವರ್ಷ ವಿಸ್ತರಿಸಲಾಯಿತು.


    ಚೀನಾದ ದುಸ್ಸಾಹಸ ತಡೆಯುವ ನಿಟ್ಟಿನಲ್ಲಿ ಭಾರತ, ಅಮೆರಿಕ ಜಪಾನ್, ಆಸ್ಟ್ರೇಲಿಯಾ ರಣತಂತ್ರ


    ಖರಾ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್​ಮೆಂಟ್​
    ಸ್ಟಡೀಸ್​ ಅಧ್ಯಯನ ಮಾಡಿದ್ದರು. ಇವರು ಎಸ್​​ಬಿಐನ ಜಾಗತಿಕ ಬ್ಯಾಂಕಿಂಗ್​ ವಿಭಾಗದ ಮುಖ್ಯಸ್ಥರಾಗಿದ್ದಾರೆ. ದಿನೇಶ್ ಕುಮಾರ್ ಬ್ಯಾಂಕೇತರ ಅಂಗಸಂಸ್ಥೆಗಳ ವ್ಯವಹಾರಗಳನ್ನೂ ಸಹ ನೋಡಿಕೊಳ್ಳುತ್ತಾರೆ.


    ದಿನೇಶ್​ ಕುಮಾರ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು ಅವರು ಎಸ್​ಬಿಐ ಫಂಡ್ಸ್​​ ಮ್ಯಾನೇಜ್​ಮೆಂಟ್​ ಪ್ರೈವೇಟ್ ಲಿಮಿಟೆಡ್​​ನ(ಎಸ್​​ಬಿಐಎಂಎಫ್​) ಎಂಡಿ ಹಾಗೂ ಸಿಇಒ ಆಗಿದ್ದರು.


    1984ರಲ್ಲಿ ಎಸ್​ಬಿಐ ಪ್ರೊಬೇಷನರಿ ಅಧಿಕಾರಿಯಾಗಿ ಸೇರ್ಪಡೆಗೊಂಡ ದಿನೇಶ್ ಕುಮಾರ್​, 5 ಸಹಾಯಕ ಬ್ಯಾಂಕ್​ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್​​ನ್ನು ಎಸ್​​​ಬಿಐನೊಂದಿಗೆ ಏಪ್ರಿಲ್ 17ರಂದು ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


    ಸದ್ಯ ದೇಶದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಬ್ಯಾಂಕಿಂಗ್ ವಲಯವು ಕೋವಿಡ್​ನಿಂದಾಗಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಾಗಿ ನೂತನ ಎಸ್​​ಬಿಐ ಅಧ್ಯಕ್ಷರು ಮುಂದೆ ಸವಾಲನ್ನು ಎದುರಿಸಬೇಕಿದೆ.

    Published by:Latha CG
    First published: