Dinesh Gunawardena: ದಿನೇಶ್ ಗುಣವರ್ದನಾ, ಶ್ರೀಲಂಕಾದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

ಲಂಕಾದ ರಾಜಕೀಯದ ಹಳೆ ತಲೆ ಎಂದೇ ಖ್ಯಾತಿ ಹೊಂದಿರುವ 73 ವರ್ಷದ ದಿನೇಶ್ ಗುಣವರ್ದನಾ. ಈ ಹಿಂದೆ ವಿದೇಶಾಂಗ ಸಚಿವ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ದಿನೇಶ್ ಗುಣವರ್ಧನಾ

ದಿನೇಶ್ ಗುಣವರ್ಧನಾ

 • Share this:
  ಕೋಲಂಬೊ: ಶ್ರೀಲಂಕಾದ ಹಿರಿಯ ರಾಜಕಾರಣಿ ಮತ್ತು ಮಾಜಿ ಗೃಹ ಸಚಿವ ದಿನೇಶ್ ಗುಣವರ್ದನಾ (Dinesh Gunawardena) ಶುಕ್ರವಾರ ಜುಲೈ 22 ರಂದು ಹೊಸ ಪ್ರಧಾನಿಯಾಗಿ ಪ್ರಮಾಣವಚನ (Sri Lanka New PM Dinesh Gunawardena) ಸ್ವೀಕರಿಸಿದ್ದಾರೆ. ಶುಕ್ರವಾರ ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್  ಗುಣವರ್ದನಾ ಅಧಿಕಾರ ಸ್ವೀಕರಿಸಿದರು. ಶ್ರೀಲಂಕಾದ ರಾಜಕೀಯದ ಹಳೆ ತಲೆ ಎಂದೇ ಖ್ಯಾತಿ ಹೊಂದಿರುವ 73 ವರ್ಷದ ದಿನೇಶ್ ಗುಣವರ್ದನಾ. ಈ ಹಿಂದೆ ವಿದೇಶಾಂಗ ಸಚಿವ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಏಪ್ರಿಲ್‌ನಲ್ಲಿ ಆಗಿನ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಗೃಹ ಸಚಿವರಾಗಿ ನೇಮಿಸಿದ್ದರು. ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಕೂಡ ಶುಕ್ರವಾರದಂದು ಹಿಂದಿನ ಸರ್ಕಾರದ ಸದಸ್ಯರನ್ನು ಒಳಗೊಂಡ ತಮ್ಮ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

  ಶ್ರೀಲಂಕಾದ ರಾಜಕೀಯದ ಧೀಮಂತ ನಾಯಕ ಎಂದೇ ಗುಣವರ್ಧನಾ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಅವರು ಸರಳ ಶೈಲಿಯ ಭಾಷಣಕ್ಕೆ ಖ್ಯಾತಿ ಹೊಂದಿದ್ದಾರೆ.

  ಇವರ ತಂದೆ ಶ್ರೀಲಂಕಾದ ಸಮಾಜವಾದದ ಪಿತಾಮಹ!
  ಅಂದಹಾಗೆ  ದಿನೇಶ್ ಗುಣವರ್ದನಾ ಉಚ್ಛಾಟಿತ ಪ್ರಧಾನಿ ಮಹಿಂದಾ ರಾಜಪಕ್ಸೆಯ ನಿಕಟವರ್ತಿಯಾಗಿದ್ದಾರೆ. ಅಮೆರಿಕಾ ಮತ್ತು ನೆದರ್​ಲ್ಯಾಂಡ್​ನಲ್ಲಿ ತಮ್ಮ ಶಿಕ್ಷಣ ಪೂರೈಸಿರುವ ದಿನೇಶ್ ಗುಣವರ್ದನಾ ಕಾರ್ಮಿಕ ಒಕ್ಕೂಟಗಳ ನಾಯಕರಾಗಿಯೂ ಮುನ್ನೆಲೆಗೆ ಬಂದಿದ್ದರು. ಅವರ ತಂದೆ ಫಿಲಿಫ್ ಗುಣವರ್ಧನಾ ಶ್ರೀಲಂಕಾದಲ್ಲಿ ಸಮಾಜವಾದದ ಪಿತಾಮಹ ಎದೇ ಪ್ರಸಿದ್ಧಿ ಹೊಂದಿದ್ದರು.

  ಇದನ್ನೂ ಓದಿ: Ranil Wickremesinghe: ಶ್ರೀಲಂಕಾದ ಹೊಸ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆ

  ಫಿಲಿಪ್ ಗುಣವರ್ಧನಾ ಅವರ ಭಾರತದ ಮೇಲಿನ ಪ್ರೀತಿ ಮತ್ತು ಸಾಮ್ರಾಜ್ಯಶಾಹಿ ಆಕ್ರಮಣದ ವಿರುದ್ಧ ಸ್ವಾತಂತ್ರ್ಯದ ಕಡೆಗೆ ಪ್ರಯತ್ನಗಳು 1920 ರ ದಶಕದ ಆರಂಭದಲ್ಲೇ USA ನಲ್ಲಿ ಪ್ರಾರಂಭವಾಗಿದ್ದವು. ಅವರು ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ವಿಕೆ ಕೃಷ್ಣ ಮೆನನ್ ಅವರ ಸಹಪಾಠಿಯಾಗಿದ್ದರು. ಅಲ್ಲಿ ಅವರು ಅಮೇರಿಕನ್ ರಾಜಕೀಯ ವಲಯಗಳಲ್ಲಿ ಸಾಮ್ರಾಜ್ಯಶಾಹಿಯಿಂದ ಸ್ವಾತಂತ್ರ್ಯಕ್ಕಾಗಿ ಪ್ರತಿಪಾದಿಸಿದ್ದರು. ನಂತರ ಲಂಡನ್‌ನಲ್ಲಿ ಇಂಪೀರಿಯಲಿಸ್ಟ್ ವಿರೋಧಿ ಲೀಗ್ ಆಫ್ ಇಂಡಿಯಾವನ್ನು ಮುನ್ನಡೆಸಿದ್ದರು. ಸದ್ಯ ಆರ್ಥಿಕವಾಗಿ ಭಾರೀ ಹಿನ್ನೆಡಎಯಲ್ಲಿರುವ ಶ್ರೀಲಂಕಾವನ್ನು ದಿನೇಶ್ ಗುಣವರ್ದನಾ ಹೇಗೆ ಮುನ್ನಡೆಸುತ್ತಾರೆ ಕಾದುನೋಡಬೇಕಿದೆ.

  Sri Lanka: ಕಿಂಗ್ ಮೇಕರ್ ಆಗ್ತಾರಾ ಸಜಿತ್? ರನಿಲ್, ರಾಜಪಕ್ಸೆಗೆ ಆಗುತ್ತಾ ಮುಖಭಂಗ?

  ಭಾರತದ ಜೊತೆ ನಿಕಟ ಸಂಪರ್ಕ
  ದಿನೇಶ್ ಗುಣವರ್ದನಾ ಅವರ ಕುಟುಂಬವು ಭಾರತದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಇಡೀ ಕುಟುಂಬವು ಭಾರತದ ಪರವಾದ ಬಲವಾದ ಒಲವು ಹೊಂದಿದೆ.

  ಈ ಹಿಂದೆ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ದೇಶದಿಂದ ಪಲಾಯನಗೈದು ಮಾಲ್ಡೀವ್ಸ್‌ನ ಮಾಲೆಯಲ್ಲಿ ಆಶ್ರಯ ಪಡೆದ ಬೆನ್ನಲ್ಲೇ ದ್ವೀಪರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಅಂದಿನ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಪಲಾಯನದ ಸುದ್ದಿ ಹೊರಬಿದ್ದ ಕೂಡಲೇ ರಾಜಧಾನಿ ಕೊಲಂಬೊದಲ್ಲಿ ಮತ್ತೆ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ಬಳಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾರಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದವು.

  ದೇಶ ಬಿಟ್ಟು ಹೋಗಿದ್ದ ಗೋಟಾಬಯ ರಾಜಪಕ್ಸ
  ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಜೊತೆಗೆ ರಾಜಕೀಯ ಬಿಕ್ಕಟ್ಟು ಸಹ ಮುಂದುವರೆದಿತ್ತು. ಜನರ ದಂಗೆಗೆ ಹೆದರಿ ದೇಶವನ್ನು ತೊರೆದು, ಹೆಂಡತಿ ಜೊತೆ ರಾತ್ರೋರಾತ್ರಿ ದೇಶ ಬಿಟ್ಟು ಓಡಿ ಹೋಗಿದ್ದ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರು ಸಿಂಗಾಪುರದಲ್ಲಿ ಆಶ್ರಯ ಪಡೆದ್ದಾರೆ ಎನ್ನಲಾಗಿದ್ದು, ಅಲ್ಲಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
  Published by:guruganesh bhat
  First published: