ಆರೋಪ ಮುಕ್ತವಾಗುವವರೆಗೂ ಮಲಯಾಳಂನ ದಿಲೀಪ್​ ಮೇಲಿನ ನಿಷೇಧ ಮುಂದುವರಿಕೆ: ಮೋಹನ್​ಲಾಲ್​

news18
Updated:July 10, 2018, 12:59 PM IST
ಆರೋಪ ಮುಕ್ತವಾಗುವವರೆಗೂ ಮಲಯಾಳಂನ ದಿಲೀಪ್​ ಮೇಲಿನ ನಿಷೇಧ ಮುಂದುವರಿಕೆ: ಮೋಹನ್​ಲಾಲ್​
news18
Updated: July 10, 2018, 12:59 PM IST
ನ್ಯೂಸ್​18 ಕನ್ನಡ 

ನಟಿಯೊಬ್ಬರನ್ನು ಅಪಹರಿಸಿದ್ದ ಆರೋಪ ಎದುರಿಸುತ್ತಿರುವ ನಟ ದಿಲೀಪ್​ ದೋಷ ಮುಕ್ತರಾಗುವ ತನಕ ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ ಮರು ಸೇರ್ಪಡೆ ಮಾಡುವುದಿಲ್ಲ ಎಂದು ಸಂಘದ ಅಧ್ಯಕ್ಷ ನಟ ಮೋಹನ್​ ಲಾಲ್​ ಹೇಳಿಕೆ ನೀಡಿದ್ದಾರೆ.

ಕೊಚ್ಚಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

 

ದಿಲೀಪ್​ ಹಾಗೂ ನಟಿ ಅಪಹರಣ ಕುರಿತಾದ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/entertainment/row-over-revoking-of-malayalam-actor-dileeps-suspension-continues-57099.html

ಈ ಹಿಂದೆ ಮೋಹನ್​ಲಾಲ್​ ಅವರೇ ದಿಲೀಪ್​ ಅವರ ಮೇಲಿದ್ದ ನಿಷೇದವನ್ನು ತೆರೆವುಗೊಳಿಸಿ, ಅವರನ್ನು ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ ಮರು ಸೇರ್ಪಡೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಸಂಘದ  ಈ ಕ್ರಮಕ್ಕೆ ರಾಜಕಾರಣಿಗಳು ಸಂಘವನ್ನು ತರಾಟೆಗೆ ತೆಗೆದುಕೊಂಡಿದ್ದರು.
Loading...

ಕಳೆದ ವರ್ಷ ಫೆಬ್ರುವರಿಯಲ್ಲಿ ನಟಿಯೊಬ್ಬರ ಅಪಹರಣ ಪ್ರಕರಣ ಪ್ರಕರಣದಲ್ಲಿ ದಿಲೀಪ್​ ಕೈವಾಡ ಇದೆ ಎಂದು ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಕರಣ ಇನ್ನೂ ನಡೆಯುತ್ತಿದ್ದು, ಆರೋಪ ಎದುರಿಸುತ್ತಿರುವಾಗಲೇ ಸಂಘಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬಾರದು ಎಂದು ರಾಜಕೀಯ ವ್ಯಕ್ತಿಗಳು ಹಾಗೂ ಕೆಲವು ಕಲಾವಿದರು ವಿರೋಧ ವ್ಯಕ್ತಪಡಿಸಿದ್ದರು.

 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ