Delhi Election Results: ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇವಿಎಂ ಬಳಕೆ ಇಲ್ಲ; ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​​

ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್​ ದೇಶದಲ್ಲಿನ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಗಮನಹರಿಸಬೇಕು. ಅಷ್ಟೇ ಅಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಯಾಕೆ ಇವಿಎಂ ಬಳಕೆ ಮಾಡುತ್ತಿಲ್ಲ ಎಂಬ ಬಗ್ಗೆ ಕೂಡ ಚಿಂತಿಸಬೇಕು

ಕಾಂಗ್ರೆಸ್​ ಹಿರಿಯ ಮುಖಂಡ ದಿಗ್ವಿಜಯ್​ ಸಿಂಗ್​

ಕಾಂಗ್ರೆಸ್​ ಹಿರಿಯ ಮುಖಂಡ ದಿಗ್ವಿಜಯ್​ ಸಿಂಗ್​

  • Share this:
ನವದೆಹಲಿ (ಫೆ.11): ತೀವ್ರ ಕುತೂಹಲ ಕೆರಳಿಸಿದ್ದ ದೇಶದ ರಾಜಧಾನಿ ದೆಹಲಿಯಲ್ಲಿ ಮತಏಣಿಕೆ ಕಾರ್ಯ ನಡೆಯುತ್ತಿದ್ದಂತೆ, ಇತ್ತ ಮತಯಂತ್ರಗಳ ಬಗ್ಗೆ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಚಿಪ್​ ಇರುವ ಯಾವುದೇ ಮಷಿನ್​ನನ್ನು ಹ್ಯಾಕ್​ ಮಾಡಲು ಸಾಧ್ಯ. ಮತಯಂತ್ರ ಕೂಡ ಇದರ ಹೊರತಾಗಿಲ್ಲ. ಅದನ್ನು ಕೂಡ ಸುಲಭವಾಗಿ ತಿರುಚಬಹುದು ಎಂಬು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್​ ದೇಶದಲ್ಲಿನ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಗಮನಹರಿಸಬೇಕು. ಅಷ್ಟೇ ಅಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಯಾಕೆ ಇವಿಎಂ ಬಳಕೆ ಮಾಡುತ್ತಿಲ್ಲ ಎಂಬ ಬಗ್ಗೆ ಕೂಡ ಚಿಂತಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಪ್ರಜಾಪ್ರಭುತ್ವ ಹೊಂದಿದ್ದ ಅತ್ಯಂತ ದೊಡ್ಡ ದೇಶ ನಮ್ಮದು. ಇಂತಹ ದೇಶದಲ್ಲಿ ದುರಾಡಳಿತ ಹೊಂದಿದ ಜನರಿಂದ ಫಲಿತಾಂಶ ಹ್ಯಾಕ್​ ಮಾಡಿ, 1.3 ಬಿಲಿಯನ್​ ಜನರ ಬಹುಮತವನ್ನು ಕದಿಯುವ ಯತ್ನ ನಡೆಸಬಾರದು ಎಂದರು.

ಇದನ್ನು ಓದಿ: Delhi Election Results; ಮುಂದುವರೆದ ಕೇಜ್ರಿವಾಲ್ ಕಮಾಲ್​; ಮೂರನೇ ಬಾರಿ ದೆಹಲಿ ಗದ್ದುಗೆಯತ್ತ ಆಮ್​ ಆದ್ಮಿ?

ಶನಿವಾರ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಆಪ್​ ಪಕ್ಷ ಮುನ್ನಡೆ ಕಾಯ್ದುಗೊಂಡಿದ್ದು, ಬಿಜೆಪಿ 15 ಸ್ಥಾನಗಳಲ್ಲಿ ಮನ್ನಡೆ ಸಾಧಿಸಿದ್ದು, ಕಾಂಗ್ರೆಸ್​ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
First published: