Digital Gold: 100 ರೂಪಾಯಿಯ ಚಿನ್ನ ಖರೀದಿಸುವುದು ಬಹಳ ಸುಲಭ; ಎಲ್ಲಿ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಡಿಜಿಟಲ್ ಚಿನ್ನದ ಒಂದು ಅನುಕೂಲ ಏನೆಂದರೆ ಅದು ಚಿನ್ನ ಭೌತಿಕವಾಗಿ ಪಡೆದುಕೊಳ್ಳುವ ಆಯ್ಕೆ ನೀಡುತ್ತದೆ. ಹೂಡಿಕೆಯ ಅವಧಿ ಮುಗಿದ ನಂತರ ಅಥವಾ ಚಿನ್ನ ಮಾರಿದಾಗಲೆಲ್ಲಾ, ಭೌತಿಕ ವಿತರಣೆ ಪಡೆಯಬಹುದಾಗಿದೆ.

ಚಿನ್ನ

ಚಿನ್ನ

  • Share this:
ಭಾರತದಲ್ಲಿ ಹಬ್ಬ ಹರಿದಿನಗಳು(Festival Season) ಆರಂಭವಾಗುತ್ತಿದ್ದಂತೆ, ಆಭರಣ ವ್ಯಾಪಾರಿಗಳು 100 ರೂ.ಗಳಷ್ಟು ಕಡಿಮೆ ದರದಲ್ಲಿ ಚಿನ್ನ(Gold) ಮಾರುತ್ತಿದ್ದಾರೆ. ಹೇಗೆ? ಆನ್‍ಲೈನ್‍ನಲ್ಲಿ(Online)..! ಡಿಜಿಟಲ್ ಚಿನ್ನ(Digital Gold)ದ ಮಾರಾಟ ನಮ್ಮ ದೇಶಕ್ಕೆ ಹೊಸದೇನಲ್ಲ. ಡಿಜಿಟಲ್ ಚಿನ್ನ ಖರೀದಿ ಹೆಚ್ಚಾಗುತ್ತಿರುವಂತೆ , ಜನರು ಕೂಡ ಇಂಟರ್‌ನೆಟ್(Internet)‌ ಮೂಲಕ ಚಿನ್ನ ಖರೀದಿಸಲು ಹೊಸ ಹೊಸ ಆಯ್ಕೆಗಳನ್ನು ಆನ್ವೇಷಿಸುತ್ತಿದ್ದಾರೆ. ಟಾಟಾ ಗ್ರೂಪ್‍(Tata group)ನ ತನಿಷ್ಕ್, ಕಲ್ಯಾಣ್ ಜುವೆಲ್ಲರ್ಸ್ ಇಂಡಿಯಾ ಲಿಮಿಟೆಡ್, ಪಿಸಿ ಜುವೆಲ್ಲರ್ಸ್ ತಮ್ಮ ವೆಬ್‍ಸೈಟ್ ಮೂಲಕ ನೇರವಾಗಿ ಅಥವಾ ಡಿಜಿಟಲ್ ಗೋಲ್ಡ್ ಫ್ಲಾಟ್‍ಫಾರ್ಮ್‍ಗಳೊಂದಿಗೆ ಟೈ ಅಪ್ ಮಾಡಿಕೊಳ್ಳುವ ಮೂಲಕ ಕನಿಷ್ಟ 100 ರೂ, ದರಕ್ಕೆ ಚಿನ್ನ ಮಾರುತ್ತಿವೆ.

ಡಿಜಿಟಲ್ ಗೋಲ್ಡ್​ ಖರೀದಿಸುವುದು ಬಹಳ ಸುಲಭ. ಅದನ್ನು ಆನ್‍ಲೈನ್‍ನಲ್ಲಿ ಖರೀದಿಸಬಹುದು ಮತ್ತು ಗ್ರಾಹಕರ ಪರವಾಗಿ ಮಾರಟಗಾರರು ವಿಮೆ ಮಾಡಿದ ವ್ಯಾಲೆಟ್‌ಗಳಲ್ಲಿ ಇಟ್ಟುಕೊಳ್ಳುತ್ತಾರೆ. ಆನ್‍ಲೈನ್‍ನಲ್ಲಿ ಚಿನ್ನ ಖರೀದಿಸಲು ನಿಮಗೆ ಅಗತ್ಯ ಇರುವುದು, ಇಂಟರ್‌ನೆಟ್‌ / ಮೊಬೈಲ್ ಬ್ಯಾಕಿಂಗ್. ನೀವು ಯಾವಾಗ , ಎಲ್ಲಿ ಬೇಕಿದ್ದರೂ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಸುರಕ್ಷತೆಯ ಖಾತರಿ

ಡಿಜಿಟಲ್ ಚಿನ್ನವನ್ನು ನೀವು ಭೌತಿಕವಾಗಿ ಖರೀದಿಸಿರುವುದಿಲ್ಲ, ಹಾಗಾಗಿ ನೀವು ಆ ಚಿನ್ನ ಕಳವಾಗುತ್ತದೆ ಅಥವಾ ಅದನ್ನಿಡಲು ದುಬಾರಿ ಲಾಕರ್ ಶುಲ್ಕ ತೆರಬೇಕು ಎಂಬ ಚಿಂತೆ ಮಾಡಬೇಕಿಲ್ಲ.

ಮನೆಯಿಂದಲೇ ಮಾರಬಹುದು

ಹೊರಗೆ ಹೋಗದೆಯೇ ಯಾವುದೇ ಸಮಯದಲ್ಲಿ ಚಿನ್ನ ಮಾರಬಹುದು ಮತ್ತು ಆ ಹಣ ನೇರವಾಗಿ ನಿಮ್ಮ ಖಾತೆಗೆ ತಲುಪುತ್ತದೆ.

ಭೌತಿಕ ಚಿನ್ನವನ್ನಾಗಿ ಬದಲಾಯಿಸಬಹುದು

ನಿಮ್ಮ ಡಿಜಿಟಲ್ ಚಿನ್ನವನ್ನು ಯಾವುದೇ ಸಮಯದಲ್ಲಿ, ಡಿಜಿಟಲ್ ಸ್ಟೋರ್ ಅಥವಾ ವೆಬ್‍ಸೈಟ್ ಮೂಲಕ ಭೌತಿಕ ರೂಪಕ್ಕೆ ಪರಿವರ್ತನೆ ಮಾಡಿಸಿಕೊಳ್ಳಬಹುದು.

100 ರೂ. ನಷ್ಟು ಕಡಿಮೆ ಬೆಲೆಗೂ ಕೊಳ್ಳಬಹುದು

ಡಿಜಿಟಲ್ ಚಿನ್ನ ಖರೀದಿಸಲು ದೊಡ್ಡ ಮೊತ್ತದ ಹಣವನ್ನೇ ಹೂಡಿಕೆ ಮಾಡಬೇಕು ಎಂದಿಲ್ಲ. ನಿಮ್ಮ ಬಜೆಟ್‍ಗೆ ತಕ್ಕಂತೆ ಚಿನ್ನ ಖರೀದಿಸಬಹುದು.

ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವ ಮನಸ್ಸಿದ್ದರೆ ಇಂದೇ ಖರೀದಿಸಿ; ಏರಿಕೆಯಾಗಿಲ್ಲ ಬಂಗಾರದ ಬೆಲೆ..!

ಟಾಟಾ ಗ್ರೂಪ್‍ನ ತನಿಷ್ಕ್‌ನಲ್ಲಿ ಡಿಜಿಟಲ್ ಚಿನ್ನ ಖರೀದಿಸುವ ವಿಧಾನ ಹೀಗಿದೆ;
1) ತನಿಷ್ಕ್‌ಗೆ ಲಾಗಿನ್ ಅಥವಾ ರಿಜಿಸ್ಟರ್ ಆಗಿ.
2) ಇಕೆವೈಸಿಯೊಂದಿಗೆ ನಿಮ್ಮಖಾತೆಯ ಸೆಟಪನ್ನು ಪೂರ್ಣಗೊಳಿಸಿ.
3) ಖರೀದಿಸುವ ದರ ಅಥವಾ ಚಿನ್ನದ ಗ್ರಾಂ ಪ್ರಮಾಣವನ್ನು ನಮೂದಿಸಿ.
4) ನಿಮ್ಮ ಪಾವತಿ ವಿಧಾನ ಆಯ್ಕೆ ಮಾಡಿ. ಖಾತೆ, ಕಾರ್ಡ್ ಅಥವಾ ವ್ಯಾಲೆಟ್ ಮುಂತಾದ ಪಾವತಿ ಆಯ್ಕೆಗಳು ನಿಮಗೆ ಲಭ್ಯ ಇರುತ್ತವೆ.

ಭಾರತದಲ್ಲಿ ಡಿಜಿಟಲ್ ಚಿನ್ನ ಮಾರುವ ಮೂರು ಮುಖ್ಯ ಮಾರಾಟಗಾರರು ಇದ್ದಾರೆ – ಅಣ್‍ಮೊಂಟ್ ಗೋಲ್ಡ್; ಎಂಎಂಟಿಸಿ- ಪಿಎಎಂಪಿ ಇಂಡಿಯಾ ಪ್ರೈವೆಟ್ ಲಿಮಿಟೆಡ್.

ಡಿಜಿಟಲ್ ಚಿನ್ನದ ಅನುಕೂಲತೆಗಳು

ಡಿಜಿಟಲ್ ಚಿನ್ನದ ಒಂದು ಅನುಕೂಲ ಏನೆಂದರೆ ಅದು ಚಿನ್ನ ಭೌತಿಕವಾಗಿ ಪಡೆದುಕೊಳ್ಳುವ ಆಯ್ಕೆ ನೀಡುತ್ತದೆ. ಹೂಡಿಕೆಯ ಅವಧಿ ಮುಗಿದ ನಂತರ ಅಥವಾ ಚಿನ್ನ ಮಾರಿದಾಗಲೆಲ್ಲಾ, ಭೌತಿಕ ವಿತರಣೆ ಪಡೆಯಬಹುದಾಗಿದೆ. ಆದರೆ ನೆನಪಿಡಿ, ಡಿಜಿಟಲ್ ಚಿನ್ನವನ್ನು ಭೌತಿಕ ರೂಪದಲ್ಲಿ ಪಡೆಯುವಾಗ ಮೇಕಿಂಗ್ ಶುಲ್ಕಗಳನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಏಕೆಂದರೆ ಅವುಗಳನ್ನು ಚಿನ್ನದ ಪ್ರಮಾಣದ ಆಧಾರದ ಮೇಲೆ ನಾಣ್ಯ ಅಥವಾ ಬಾರ್‌ಗಳ ರೂಪದಲ್ಲಿ ವಿತರಿಸಬೇಕಾಗುತ್ತದೆ. ನಾಣ್ಯದ ವಿನ್ಯಾಸವನ್ನು ಆಧರಿಸಿ ಮೇಕಿಂಗ್ ಶುಲ್ಕ ವಿಧಿಸಲಾಗುತ್ತದೆ. ಅದಲ್ಲದೆ, ಭೌತಿಕ ಚಿನ್ನವನ್ನು ಪಡೆಯುವಾಗ ಪ್ರತ್ಯೇಕ ವಿತರಣಾ ವೆಚ್ಚವನ್ನು ಕೂಡ ಭರಿಸಬೇಕಾಗುತ್ತದೆ.

ಡಿಜಿಟಲ್ ಚಿನ್ನದ ಅನಾನುಕೂಲತೆಗಳು
1) ಡಿಜಿಟಲ್ ಚಿನ್ನದ ಮೇಲೆ ಜಿಎಸ್‍ಟಿ
ಭೌತಿಕ ಚಿನ್ನವನ್ನು ಖರೀದಿಸುವಾಗ ನೀಡುವಂತೆ, ನೀವು ಡಿಜಿಟಲ್ ಚಿನ್ನ ಖರೀದಿಸುವಾಗಲೂ ಶೇ. 3 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‍ಟಿ) ಪಾವತಿಸಬೇಕಾಗುತ್ತದೆ.
2) ಆರ್‌ಬಿಐ ಅಥವಾ ಸೆಬಿಯಂತಹ ಅಧಿಕೃತ ಸರಕಾರಿ ನಿಯಂತ್ರಕ ಸಂಸ್ಥೆಯ ಕೊರತೆ.
Published by:Latha CG
First published: