ಇತರೆ ರಾಜಕೀಯ ಪಕ್ಷಗಳಿಗಿಂತ ಭಿನ್ನ ಪ್ರಣಾಳಿಕೆ - ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ ಎಎಪಿ

ಬಿಜೆಪಿ ಪ್ರಧಾನಿ ನರೇಂದ್ರಮೋದಿ ಮುಖ ಎಂದು ಹೇಳುತ್ತಿರುವುದರಿಂದ ಆಮ್ ಅದ್ಮಿ ಪಕ್ಷ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೆಸರಿನಲ್ಲಿ ಗ್ಯಾರಂಟಿ ಕಾರ್ಡ್ ಮಾಡುತ್ತಿದೆ. ಆ ಮೂಲಕ ಅದು ಕೇಜ್ರಿವಾಲ್ ನಾಮಬಲದಿಂದ ಮತ ಕೇಳಲು ಮುಂದಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡಿಸಿಎಂ ಮನೀಶ್ ಸಿಸೋಡಿಯಾ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡಿಸಿಎಂ ಮನೀಶ್ ಸಿಸೋಡಿಯಾ

  • Share this:
ನವದೆಹಲಿ(ಜ.17) : ಆಮ್‌ ಆದ್ಮಿ‌ ಪಕ್ಷ ಇತರೆ ರಾಜಕೀಯ ಪಕ್ಷಗಳಿಗಿಂತ ಸ್ವಲ್ಪ‌ ಭಿನ್ನ ಅಂತಾ ಮತ್ತೊಮ್ಮೆ‌ ಸಾಬೀತು ಪಡಿಸಲು ಮುಂದಾಗಿದೆ. ಈ ಬಾರಿ ಅದರ ಪ್ರಯೋಗ ಪ್ರಣಾಳಿಕೆ ವಿಷಯದಲ್ಲಿ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುವುದು ಸಹಜ. ಆದರೆ ಆಮ್ ಆದ್ಮಿ‌ಪಕ್ಷ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡುತ್ತಿದೆ.

ರಾಜಕಾರಣಿಗಳು, ರಾಜಕೀಯ ಪಕ್ಷಗಳು ಅಂದರೆ ಜನ ಮೂಗು ಮುರಿತಾರೆ. ಆದ್ರೆ ಸ್ವಲ್ಪ ವಿಭಿನ್ನವಾಗಿದ್ದರೆ ಕುತೂಹಲ ತೋರಿಸುತ್ತಾರೆ‌. ಅದರಿಂದಾಗಿಯೇ ಆಮ್ ಆದ್ಮಿ‌ ಪಕ್ಷ ಮೊದಲಿಂದಲೂ ಬೇರೆ ಪಕ್ಷಗಳಿಗಿಂತ ಭಿನ್ನ ಅಂತಾ ಬಿಂಬಿಸಿಕೊಳ್ಳಲು ಪ್ರಯತ್ನಿಸಿದೆ. ಈ ಪ್ರಯೋಗದ ಭಾಗವಾಗಿ ಈ ಸಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅದು ಪ್ರಣಾಳಿಕೆ ಬದಲಿಗೆ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡುತ್ತಂತೆ.

ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂಬುದನ್ನು ಹೇಳುತ್ತವೆ. ಗ್ಯಾರಂಟಿ ಕಾರ್ಡ್ ನಲ್ಲೂ‌ ಪ್ರಣಾಳಿಕೆ ರೀತಿಯಲ್ಲೇ ಮುಂದಿನ ಐದು ವರ್ಷ ನಮ್ಮ ಸರ್ಕಾರ ಏನೇನು ಮಾಡುತ್ತೇ ಎಂಬುದನ್ನೇ ಹೇಳಲಾಗುತ್ತೆ. ವಿಶೇಷ ಎನಂದ್ರೆ ದಪ್ಪ ದಪ್ಪ ಪುಸ್ತಕದ ಮಾದರಿಯ ಮತ್ತು ನೂರೆಂಟು ಕತೆ ಹೇಳುವ ಪ್ರಣಾಳಿಕೆ ಬದಲು ಗ್ಯಾರಂಟಿ ಕಾರ್ಡ್ ನಲ್ಲಿ ಬಹಳ ಚಿಕ್ಕದಾಗಿ, ಸ್ಪಷ್ಟವಾಗಿ ಪ್ರಮುಖವಾದ ವಿಷಯಗಳನ್ನಷ್ಟೇ ಉಲ್ಲೇಖಿಸಲಾಗುತ್ತದೆಯಂತೆ.

ಆಮ್ ಆದ್ಮಿ‌ ಪಕ್ಷ ಈ ಕಾರ್ಡಿಗೆ 'ಕೇಜ್ರಿವಾಲ್ ಗ್ಯಾರಂಟಿ ಕಾರ್ಡ್' ಅಂತಾ ಹೆಸರಿಟ್ಟಿದೆ. ಉದ್ದೇಶ ಇಷ್ಟೇ; ಈ‌ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುತ್ತಿಲ್ಲ. ಬದಲಿಗೆ 'ಮೋದಿ ಮುಖ ಹಾಗೂ ಕೇಂದ್ರ ಸರ್ಕಾರದ ಕೆಲಸ' ಮುಂದಿಟ್ಟುಕೊಂಡು ಮತ ಕೇಳಿ ಅಂತಾ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದಾರೆ. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮುಖ ಎಂದು ಹೇಳುತ್ತಿರುವುದರಿಂದ ಆಮ್ ಅದ್ಮಿ ಪಕ್ಷ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೆಸರಿನಲ್ಲಿ ಗ್ಯಾರಂಟಿ ಕಾರ್ಡ್ ಮಾಡುತ್ತಿದೆ. ಆ ಮೂಲಕ ಅದು ಕೇಜ್ರಿವಾಲ್ ನಾಮಬಲದಿಂದ ಮತ ಕೇಳಲು ಮುಂದಾಗಿದೆ.

ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದರೂ ದೆಹಲಿ ಹವಾಮಾನದಂತೆ ಚುನಾವಣಾ ಪ್ರಚಾರ ಕೂಡ ತಣ್ಣಗಿದೆ. ಎಲ್ಲೂ, ಯಾವ ಪಕ್ಷದಿಂದಲೂ ಅಬ್ಬರ ಕಾಣಿಸುತ್ತಿಲ್ಲ. ಈ ನಡುವೆ ಇವತ್ತು ದೆಹಲಿಯ ಶಾಖುರ್ ಬಸ್ತಿ ಕ್ಷೇತ್ರದ ಆಪ್ ಅಭ್ಯರ್ಥಿ, ಆರೋಗ್ಯ ಮಂತ್ರಿ ಸತ್ಯೇಂದ್ರ ಜೈನ್ ಅವರ ಚುನಾವಣಾ ಕಚೇರಿಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉದ್ಘಾಟಿಸಿದರು‌.‌

ಈ ನಡುವೆ ಟಿಕೆಟ್ ವಂಚಿತ ಕೋಂಡ್ಲಿ ಕ್ಷೇತ್ರದ ಹಾಲಿ ಶಾಸಕ ಮನೋಜ್ ಅವರು ಅರವಿಂದ ಕೇಜ್ರಿವಾಲ್ ಮೇಲೆ ಗುರುತರವಾದ ಆರೋಪ ಮಾಡಿದ್ದಾರೆ. ಅರವಿಂದ ಕೇಜ್ರಿವಾಲ್ ಜಾತಿ ಮತ್ತು ಹಣಕ್ಕಾಗಿ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :  ನಿರ್ಭಯಾ ಅತ್ಯಾಚಾರ ಪ್ರಕರಣ : ದೋಷಿಗಳಿಗೆ ಫೆಬ್ರವರಿ 1 ರಂದು ಗಲ್ಲು ಶಿಕ್ಷೆ

ಇನ್ನೊಂದೆಡೆ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಇವತ್ತು 57 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ನಿನ್ನೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮ‌ಗೊಂಡಿದ್ದ ಹೆಸರುಗಳನ್ನು ಇವತ್ತು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶಾಮ್ ಜಾಜು, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಬಿಡುಗಡೆ ಮಾಡಿದರು. ಈ ಪೈಕಿ 'ಭೇಠಿ ಪಡೋ ಭೇಠಿ ಬಚಾವ್' ಎಂದು ಪೋಸು ನೀಡುವ ಬಿಜೆಪಿ ಮಹಿಳೆಯರಿಗೆ ಟಿಕೆಟ್ ಕೊಟ್ಟಿರುವುದು ಕೇವಲ ನಾಲ್ಕು ಕಡೆ. ನಾಳೆ ಕಾಂಗ್ರೆಸ್ ಹುರಿಯಾಳುಗಳ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಆಡಳಿತಾರೂಢ ಪಕ್ಷ ತಾನು ಮುಂದಕ್ಕೆ ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಎಂದು ಹೇಳಿದರೆ ಕಿಮ್ಮತ್ತು ಇರುವುದಿಲ್ಲ. ಇದುವರೆಗೆ ಏನೇನು ಮಾಡಿದ್ದೀನಿ ಅಂತಾ ಹೇಳಬೇಕು, ಅದರ ಆಧಾರದ ಮೇಲೆ ಮತ ಕೇಳಬೇಕು.
First published: