ಗುವಾಹಟಿ: ವಿದ್ಯಾರ್ಥಿಗಳಿಗೆ (Students) ಪುಸ್ತಕದ ಮೇಲಿನ ಪ್ರೀತಿ ಮತ್ತು ಆಸಕ್ತಿ ಹೆಚ್ಚಿಸಲು ಎನ್‌ಜಿಒ ಒಂದು ಹೊಸ ಪ್ರಯತ್ನವನ್ನು ಸಾಕಾರಗೊಳಿಸಿದೆ. ಶಾಲಾ ಮಕ್ಕಳಿಗೆ ಮರದಲ್ಲಿ ಗ್ರಂಥಾಲಯವನ್ನು (Library) ತೆರೆಯುವ ಮೂಲಕ 'ಟ್ರೀ ಲೈಬ್ರರಿ' ಎಂಬ ಹೊಸ ಕಲ್ಪನೆಯನ್ನು ಅಸ್ಸಾಂನ ಶಾಲೆಯೊಂದರಲ್ಲಿ ಪರಿಚಯಿಸಲಾಗಿದೆ. ʼಟ್ರೀ ಲೈಬ್ರರಿ' ಎಂಬ ಒಂದು ವಿಶಿಷ್ಟ ಉಪಕ್ರಮವನ್ನು ಎನ್‌ಜಿಒ ಒಂದು ಸೆಪ್ಟೆಂಬರ್ 3ರಂದು ಆರಂಭ ಮಾಡಿದೆ. ಅಸ್ಸಾಂನ ಜೋರ್ಹತ್ ಜಿಲ್ಲೆಯ ಮಹಿಳೆಯರ (Women's) ಗುಂಪು ಹೊಸ ಪೀಳಿಗೆಯು ಪುಸ್ತಕಗಳನ್ನು (Book) ಓದುವತ್ತ ಆಕರ್ಷಿಸಲು ಮರದ ಕೆಳಗೆ ತೆರೆದ ಗ್ರಂಥಾಲಯವನ್ನು ಸ್ಥಾಪಿಸಿದೆ. ಜೋರ್ಹತ್ ಜಿಲ್ಲೆಯ ಮರಿಯಾನಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಮರಗಳ ಕೆಳಗೆ ತೆರೆದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.
ಅಸ್ಸಾಮಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳು ಲಭ್ಯ
ಮರಿಯಾನಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಗ್ರಂಥಾಲಯವು ಅಸ್ಸಾಮಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಾಮಿಕ್ಸ್, ಕಾದಂಬರಿಗಳು, ಆತ್ಮಚರಿತ್ರೆಗಳು ಮತ್ತು ಇತರ ಪುಸ್ತಕಗಳನ್ನು ಹೊಂದಿದೆ.
ಗ್ರಂಥಾಲಯದಲ್ಲಿವೆ 600 ಪುಸ್ತಕಗಳು
"ನಾವು ಶಾಲೆಯಿಂದ ಅನುಮತಿಯನ್ನು ಪಡೆದುಕೊಂಡಿದ್ದೇವೆ. ಅಲ್ಲಿಯೇ ಕಪಾಟುಗಳನ್ನು ತಯಾರಿಸಲು ಮನೆಯ ತ್ಯಾಜ್ಯ ವಸ್ತುಗಳನ್ನು ಹೆಚ್ಚಾಗಿ ಕಂಟೇನರ್‌ಗಳನ್ನು ಬಳಸಿದ್ದೇವೆ. 600 ಪುಸ್ತಕಗಳಿರುವ ಗ್ರಂಥಾಲಯವನ್ನು ಸೆ.3ರಂದು ಆರಂಭಿಸಲಾಗಿದೆ’ ಎಂದು ಎನ್ ಜಿಒ ಅಧ್ಯಕ್ಷೆ ದೀಪಿಕಾ ಪೊದ್ದಾರ್ ತಿಳಿಸಿದರು.
15,000 ರೂ. ವೆಚ್ಚದಲ್ಲಿ ʼಟ್ರೀ ಲೈಬ್ರರಿʼ ನಿರ್ಮಾಣ
ಜೆಸಿಐ ಫೆಮಿನಾ ಕಾರ್ಯದರ್ಶಿ ಶಿವಾನಿ ಅಗರ್ವಾಲ್ ಮಾತನಾಡಿ, ಇದನ್ನು ಸ್ಥಾಪಿಸಲು ಸುಮಾರು 15,000 ರೂ. ವೆಚ್ಚವಾಗಿದೆ ಎಂದು ತಿಳಿಸಿದರು. ಶಾಲೆಯ ವತಿಯಿಂದ ಗ್ರಂಥಾಲಯಕ್ಕೆ ಶಿಕ್ಷಕರನ್ನು ನಿಯೋಜಿಸಲು ಯೋಜಿಸಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಬೋಬಿನ ತಂತಿ ತಿಳಿಸಿದರು.
ಪುಸ್ತಕದ ಮೇಲಿನ ಆಸಕ್ತಿ ಹೆಚ್ಚಿಸಲು ಕ್ರಮ
ವಿದ್ಯಾರ್ಥಿಗಳಲ್ಲಿ ಪುಸ್ತಕಗಳ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ನಿರಾಸಕ್ತಿ ಇದೆ. ವಿದ್ಯಾರ್ಥಿಗಳು ಮತ್ತು ಗ್ರಂಥಾಲಯದ ನಡುವಿನ ಅಂತರವನ್ನು ಕಡಿಮೆ ಮಾಡುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಎನ ಜಿಒನ ದಿಪಿಲಾ ಪೊದ್ದಾರ್ ಹೇಳಿದರು.
ಇದನ್ನೂ ಓದಿ: Online Courses: ಕಡಿಮೆ ಅವಧಿಯ, ಕಮ್ಮಿ ಶುಲ್ಕದ ಈ ಕೋರ್ಸ್ಗಳನ್ನು ಮಾಡಿದ್ರೆ ಕೆಲಸ ಪಕ್ಕಾ ಅಂತೆ
“ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಅನುಮಾನವನ್ನು ಪರಿಹರಿಸಿಕೊಳ್ಳಲು ಇಂಟರ್ನೆಟ್, ಗೂಗಲ್ ಅನ್ನು ಬಳಸುತ್ತಾರೆ ಹಾಗೂ ವಿದ್ಯಾರ್ಥಿಗಳು ಕೂಡ ಪರಿಸರದಿಂದ ದೂರ ಹೋಗಿದ್ದಾರೆ.
ಹೀಗಾಗಿ, ಮರಗಳ ಕೆಳಗೆ ಈ ತೆರೆದ ಗ್ರಂಥಾಲಯ ಅಥವಾ ಉದ್ಯಾನ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ನಾವು ನಮ್ಮ ಮಕ್ಕಳನ್ನು ಪರಿಸರದೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ದಿಪಿಲಾ ಪೊದ್ದಾರ್ ಹೇಳಿದರು. ಶಾಲೆಯ ಅಧಿಕಾರಿಗಳು ಮತ್ತು ಸ್ಥಳೀಯರು ಎನ್ ಜಿಒ ಕೈಗೊಂಡ ವಿಶಿಷ್ಟ ಉಪಕ್ರಮದ ಬಗ್ಗೆ ಹೊಗಳಿದ್ದಾರೆ.
ಟ್ರೀ ಲೈಬ್ರರಿಗೆ ಮನಸೋತ ಮಕ್ಕಳು
"ನಾನು ಯಾವಾಗಲೂ ಶ್ರೇಷ್ಠ ವ್ಯಕ್ತಿಗಳ ಪುಸ್ತಕಗಳನ್ನು ಓದಲು ಇಷ್ಟಪಡುತ್ತೇನೆ. ಗ್ರಂಥಾಲಯದಲ್ಲಿ ಇಂತಹ ಸಾಕಷ್ಟು ಪುಸ್ತಕಗಳು ಇವೆ. ನಮಗೆ ಇಲ್ಲಿ ಓದಲು ಖುಷಿಯಾಗುತ್ತದೆ ಎಂದು 422 ವಿದ್ಯಾರ್ಥಿಗಳಿರುವ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ನಿಶಾ ಹೇಳಿದರು.
ಯೋಜನೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಪರಿಸರ ಪ್ರೇಮಿಗಳು
ಮರಗಳ ಬಳಿ ಗ್ರಂಥಾಲಯ ನಿರ್ಮಿಸಿರುವ ಬಗ್ಗೆ ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಕಲ್ಪನೆಯು ಉತ್ತಮವಾಗಿ. ಆದರೆ ಮರಗಳನ್ನು ಬಳಸಬಾರದು. ಅವರು ಅದನ್ನು ಬಿದಿರು ಅಥವಾ ಲೋಹದ ಕಂಬದ ಮೇಲೆ ಸ್ಥಾಪಿಸಬಹುದಿತ್ತು. ಪುಸ್ತಕದ ಕಪಾಟನ್ನು ಸರಿಪಡಿಸಲು ಬಳಸುವ ವಿಧಾನ ಮರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಪರಿಸರವಾದಿ ಪಬನ್ ಫುಕೋನ್ ತಿಳಿಸಿದರು.
ಇದನ್ನೂ ಓದಿ: CBSC Schools: ಕರ್ನಾಟಕದಲ್ಲಿರುವ ಟಾಪ್ 10 ಸಿಬಿಎಸ್‌ಇ ಶಾಲೆಗಳು; ಇಲ್ಲಿದೆ ಡೀಟೇಲ್ಸ್
ಒಟ್ಟಾರೆ ಈಗಿನ ವಿದ್ಯಾರ್ಥಿಗಳಿಗೆ ಪುಸ್ತಕದ ಮೇಲಿನ ಆಸಕ್ತಿ ಕಡಿಮೆಯಾಗಿದ್ದು, ಮೊಬೈಲ್ ಫೋನ್ ಗಳ ಮೇಲೆ ಹೆಚ್ಚಾಗಿದೆ. ಮಕ್ಕಳನ್ನು ಪುಸ್ತಕ ಓದುವತ್ತ ಆಕರ್ಷಿಸಲು ಉದ್ದೇಶಿಸಿರುವ ಈ ಪ್ರಯತ್ನ ವಿಭಿನ್ನ ಮತ್ತು ಉತ್ತಮವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ