Diesel Price - ವ್ಯಾಟ್ ತೆರಿಗೆ ಕಡಿತ; ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್​ಗೆ 8 ರೂ ಇಳಿಕೆ

ಶೇ. 30ರಷ್ಟಿದ್ದ ವ್ಯಾಟ್ ಅನ್ನ ಶೇ. 16.75ಕ್ಕೆ ಇಳಿಸಲಾಗಿದೆ. ಇದರಿಂದ ದೆಹಲಿಯಲ್ಲಿ ಲೀಟರ್​ಗೆ 82 ರೂ ಇರುವ ಡೀಸೆಲ್ ಬೆಲೆ 73.64ಕ್ಕೆ ಇಳಿಕೆಯಾಗಲಿದೆ. ರಾಜಧಾನಿ ನಗರದ ಉದ್ಯಮಿಗಳು ಮತ್ತು ವರ್ತಕರ ಬೇಡಿಕೆ ಮೇರೆಗೆ ವ್ಯಾಟ್ ಇಳಿಕೆಯ ಈ ಕ್ರಮ ಕೈಗೊಳ್ಳಲಾಗಿದೆ.

news18-kannada
Updated:July 30, 2020, 3:42 PM IST
Diesel Price - ವ್ಯಾಟ್ ತೆರಿಗೆ ಕಡಿತ; ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್​ಗೆ 8 ರೂ ಇಳಿಕೆ
ಪ್ರಾತಿನಿಧಿಕ ಚಿತ್ರ.
  • Share this:
ನವದೆಹಲಿ(ಜುಲೈ 30): ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಡೀಸೆಲ್ ಮೇಲೆ ಶೇ. 30ರಷ್ಟು ವ್ಯಾಟ್ ತೆರಿಗೆ ವಿಧಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ಅರ್ಧದಷ್ಟು ತಗ್ಗಿಸಿದ್ಧಾರೆ. ದೆಹಲಿಯಲ್ಲಿ ಈಗ ವ್ಯಾಟ್ ತೆರಿಗೆಯನ್ನು ಶೇ. 16.75ಕ್ಕೆ ಇಳಿಸಲಾಗಿದೆ. ಇದರಿಂದ ಡೀಸೆಲ್ ಬೆಲೆ ದೆಹಲಿಯಲ್ಲಿ ಲೀಟರ್​ಗೆ 8.36 ರೂಪಾಯಿಯಷ್ಟು ಕಡಿಮೆ ಆಗಲಿದೆ.

ಲೀಟರ್​ಗೆ 82 ರೂ ಇರುವ ಡೀಸೆಲ್ ಬೆಲೆ ಈಗ 73.64ಕ್ಕೆ ಇಳಿಕೆಯಾಗಲಿದೆ. ರಾಜಧಾನಿ ನಗರದ ಉದ್ಯಮಿಗಳು ಮತ್ತು ವರ್ತಕರ ಬೇಡಿಕೆ ಮೇರೆಗೆ ವ್ಯಾಟ್ ಇಳಿಕೆಯ ಈ ಕ್ರಮ ಕೈಗೊಳ್ಳಲಾಗಿದೆ. ಡೀಸೆಲ್ ಬೆಲೆ ಇಳಿಕೆಯಿಂದ ದೆಹಲಿಯ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಟ ಸುಶಾಂತ್‌ ಸಿಂಗ್ ಪ್ರಕರಣವನ್ನು ಸಿಬಿಐ ಗೆ ನೀಡಲು ಸಾಧ್ಯವಿಲ್ಲ; ಪಿಎಲ್‌ಐ ವಜಾ ಮಾಡಿದ ಸುಪ್ರೀಂ

ಡೀಸೆಲ್​ಗೆ ನಮ್ಮ ದೇಶದಲ್ಲಿ ಮೊದಲಿಂದಲೂ ಕಡಿಮೆ ಸುಂಕ ವಿಧಿಸಲಾಗುತ್ತಿದೆ. ಇದರಿಂದಾಗಿ ಪೆಟ್ರೋಲ್​ಗಿಂತ ಡೀಸೆಲ್ ಯಾವಾಗಲೂ ಬೆಲೆ ಕಡಿಮೆಯೇ. ಆದರೆ, ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕತೆ ಸುಧಾರಿಸಲು ಮತ್ತು ಮಾಲಿನ್ಯಕಾರಕ ಡಿಸೆಲ್​ಗೆ ಕಡಿವಾಣ ಹಾಕುವ ಉದ್ದೇಶದಿಂದ ದೆಹಲಿ ಸರ್ಕಾರ ಡೀಸೆಲ್ ಮೇಲೆ ವ್ಯಾಟ್ ತೆರಿಗೆಯನ್ನು ಶೇ. 30ರಷ್ಟು ಹೇರಲು ನಿರ್ಧರಿಸಿತ್ತು. ಇದರಿಂದ ಪೆಟ್ರೋಲ್​ಗಿಂತ ಇಲ್ಲಿ ಡೀಸೆಲ್ ದುಬಾರಿಯಾಗಿತ್ತು. ಕಳೆದ ತಿಂಗಳು 18 ದಿನಗಳಲ್ಲಿ ಪೆಟ್ರೋಲ್ ಬೆಲೆ 8.50 ರೂ ಏರಿಕೆಯಾದರೆ, ಡೀಸೆಲ್ 10.48 ರೂ ಬೆಲೆ ಹೆಚ್ಚಳ ಕಂಡಿತ್ತು. ಇದರಿಂದ ಹಲವು ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸೇರಲಾಗಿದ್ದ ಸಂಪುಟ ಸಭೆಯಲ್ಲಿ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಇಳಿಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಹೈಕೋರ್ಟ್​ನಲ್ಲಿ ದೂರು ನೀಡಿದ್ದ ಪತ್ರಕರ್ತ ಪರ್ವೆಜ್​ಗೆ ಗ್ಯಾಂಗ್ ರೇಪ್ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

ಡೀಸೆಲ್ ಮತ್ತು ಪೆಟ್ರೋಲ್​ಗೆ ಕೇಂದ್ರ ಸರ್ಕಾರ ಈಗ ಸರಿಸುಮಾರು ಒಂದೇ ಮೊತ್ತದ ತೆರಿಗೆ ವಿಧಿಸುತ್ತದೆ. ಪೆಟ್ರೋಲ್ ಮೇಲೆ ಕೇಂದ್ರ ಸುಂಕ 32.98 ರೂ ಇದೆ. ಡೀಸೆಲ್ ಮೇಲೆ 31.83 ಇದೆ. ರಾಜ್ಯ ಸರ್ಕಾರಗಳೂ ಕೂಡ ವ್ಯಾಟ್​ನಂಥ ತೆರಿಗೆಯನ್ನು ಹೆಚ್ಚುವರಿಯಾಗಿ ವಿಧಿಸುತ್ತವೆ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ.
Published by: Vijayasarthy SN
First published: July 30, 2020, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading