HOME » NEWS » National-international » DIDNT FORMALLY ANNOUNCE EXIT FROM NDA SANJAY RAUT FUMES OVER RS SEAT CHANGE WRITES TO VENKAIAH NAIDU RH

ರಾಜ್ಯಸಭೆಯಲ್ಲಿ ಸೀಟು ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗೆ ಪತ್ರ ಬರೆದ ಶಿವಸೇನೆ ನಾಯಕ ಸಂಜಯ್ ರಾವತ್

ರಾಜ್ಯಸಭೆಯಲ್ಲಿ ನನ್ನ ಆಸನವನ್ನು ಮೂರನೇ ಸಾಲಿನಿಂದ ಐದನೇ ಸಾಲಿಗೆ ಬದಲಿಸಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ಯಾರೋ ಒಬ್ಬರ ಈ ನಿರ್ಧಾರದಿಂದ ಶಿವಸೇನೆಯ ಭಾವನೆಗೆ ಧಕ್ಕೆಯಾಗಿದೆ. ಮತ್ತು ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು 2004ರಿಂದ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಅವರು ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

news18-kannada
Updated:November 20, 2019, 5:28 PM IST
ರಾಜ್ಯಸಭೆಯಲ್ಲಿ ಸೀಟು ಬದಲಾವಣೆಗೆ ಅಸಮಾಧಾನ ವ್ಯಕ್ತಪಡಿಸಿದ ಉಪರಾಷ್ಟ್ರಪತಿಗೆ ಪತ್ರ ಬರೆದ ಶಿವಸೇನೆ ನಾಯಕ ಸಂಜಯ್ ರಾವತ್
ಸಂಜಯ್ ರಾವತ್
  • Share this:
ನವದೆಹಲಿ: ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು, ರಾಜ್ಯಸಭೆಯಲ್ಲಿ ತಮ್ಮ ಆಸನ ಬದಲಿಸಿರುವುದು ಅವಮಾನಕರ ಮತ್ತು ನಮ್ಮ ಭಾವನೆಗೆ ಧಕ್ಕೆಯಾಗಿದೆ ಹಾಗೂ ಅಚ್ಚರಿ ಮೂಡಿಸಿದೆ ಎಂದು ದೂರಿದ್ದಾರೆ. ಮಹಾರಾಷ್ಟ್ರ ಅಧಿಕಾರ ಹಂಚಿಕೆ ವಿಚಾರವಾಗಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ನಡುವೆ ಬಿರುಕು ಬಿಟ್ಟ ಕಾರಣ ಆಡಳಿತರೂಢ ಬಿಜೆಪಿ ಸಂಸತ್ತಿನಲ್ಲಿ ಆಸನ ಬದಲಿಸಿದೆ ಎಂದು ಶಿವಸೇನೆ ಆರೋಪಿಸಿದೆ.

ರಾಜ್ಯಸಭೆಯಲ್ಲಿ ನನ್ನ ಆಸನವನ್ನು ಮೂರನೇ ಸಾಲಿನಿಂದ ಐದನೇ ಸಾಲಿಗೆ ಬದಲಿಸಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ಯಾರೋ ಒಬ್ಬರ ಈ ನಿರ್ಧಾರದಿಂದ ಶಿವಸೇನೆಯ ಭಾವನೆಗೆ ಧಕ್ಕೆಯಾಗಿದೆ. ಮತ್ತು ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು 2004ರಿಂದ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಅವರು ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಅಧಿಕೃತವಾಗಿ ಹೊರಬರುವ ಘೋಷಣೆ ಮಾಡುವ ಮುನ್ನವೇ ಗಮನಕ್ಕೆ ತರದೆ ಸೀಟು ಬದಲಾವಣೆ ಮಾಡುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿಯೂ ನಾನು ವಿಫಲನಾಗಿದ್ದೇನೆ. ಉದ್ದೇಶಪೂರ್ವಕವಾಗಿ, ಅವಮಾನ ಮಾಡಬೇಕು ಎಂಬ ಕಾರಣದಿಂದಲೇ ಮೂರನೇ ಸಾಲಿನಿಂದ ನನ್ನನ್ನು ಎರಡು ಸಾಲುಗಳ ಹಿಂದಕ್ಕೆ ಹಾಕಲಾಗಿದೆ ಎಂದು ರಾವತ್ ಅವರು ರಾಜ್ಯಸಭಾ ಅಧ್ಯಕ್ಷರೂ ಆಗಿರುವ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನು ಓದಿ: ದೇಶಾದ್ಯಂತ ಎನ್ಆರ್​ಸಿ ಆಗುತ್ತದೆ; ಯಾವ ಧರ್ಮೀಯರಿಗೂ ಅನ್ಯಾಯವಾಗುವುದಿಲ್ಲ: ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ

First published: November 20, 2019, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories