• Home
  • »
  • News
  • »
  • national-international
  • »
  • WhatsApp Down: ವಾಟ್ಸಪ್​​ಗೂ ಬಡಿದ ಗ್ರಹಣ, ಗ್ರೂಪ್ ಮೆಸೇಜ್​ಗಳಿಗೆ ಬ್ರೇಕ್!

WhatsApp Down: ವಾಟ್ಸಪ್​​ಗೂ ಬಡಿದ ಗ್ರಹಣ, ಗ್ರೂಪ್ ಮೆಸೇಜ್​ಗಳಿಗೆ ಬ್ರೇಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

WhatsApp Down: ಕೆಲವು ಗಂಟೆಗಳಿಂದ ವಾಟ್ಸಪ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಬಳಕೆದಾರರು ಗೊದಲಗೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ವಾಟ್ಸಪ್‌ ಡೌನ್‌ ಆಗಿದೆ.

  • Share this:

    ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಪ್‌ (WhatsApp) ವರ್ಕ್ ಆಗ್ತಾ ಇಲ್ವಾ? ಏನಿದು ವಾಟ್ಸಪ್​  ಗೂ ತಟ್ಟಿತಾ ಸೂರ್ಯಗ್ರಹಣ. ಹೌದು ಎಲ್ಲರ ಮೊಬೈಲ್‌ನಲ್ಲಿರುವ (Mobile) ವಾಟ್ಸಪ್‌ನಲ್ಲಿ ಯಾವುದೇ ಮೆಸೇಜ್‌ಗಳು ಹೋಗ್ತಾ ಇಲ್ಲ, ಬರ್ತಾ ಇಲ್ಲ ಅಂತ ಗಾಬರಿಯಾಗಬೇಡಿ. ಸುಮಾರು 1 ಗಂಟೆಯಿಂದ ವಾಟ್ಸಪ್‌ ಸ್ಥಗಿತಗೊಂಡಿದ್ದು ಇದರಿಂದ ಯಾವುದೇ ಮೆಸೇಜ್‌ಗಳು (Messages) ಸೆಂಡ್‌ ಆಗ್ತಾ ಇಲ್ಲ. ಇದರಿಂದ ಬಳಕೆದಾರರು ಗೊಂದಲದಲ್ಲಿದ್ದಾರೆ. ಇದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು ಈ ಬಗ್ಗೆ ಇದುವರೆಗೆ ವಾಟ್ಸಪ್‌ ಯಾವುದೇ ರೀತಿಯಲ್ಲೂ ಮಾಹಿತಿಯನ್ನು ತಿಳಿಸಿಲ್ಲ.ಕೆಲವೇ ಗಂಟೆಗಳಲ್ಲಿ ಈ ಸಮಸ್ಯೆ ಬಗೆಹರಿಯಬಹುದು ಎಂದು ಹೇಳಲಾಗುತ್ತಿದೆ.


    ವಾಟ್ಸಪ್​ ವರ್ಕ್​ ಆಗ್ತಿಲ್ಲ!


    ಈ ರೀತಿಯ ವಾಟ್ಸಪ್‌ಗೆ ಸಂಬಂಧಿತ ಸಮಸ್ಯೆಗಳು ಈ ಹಿಂದೆಯೂ ಹಲವಾರು ಬಾರಿ ಆಗಿತ್ತು. ಆದರೆ ಕೆಲವು ಗಂಟೆಗಳ ಬಳಿಕ ಸರಿಪಡಿಸುತ್ತಿದ್ದರು. ಇದೀಗ ಈ ವರ್ಷವೂ ಹಲವಾರು ಅಪ್ಡೇಟ್‌ಗಳನ್ನು ಮಾಡಿದ ವಾಟ್ಸಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ.


    ಆದರೆ ಇಂದು ಈ ರೀತಿ ಸಮಸ್ಯೆ ಯಾಕಾಗಿದೆ ಎಂದು ಎಲ್ಲರ ಮನದಲ್ಲೂ ಪ್ರಶ್ನೆಯನ್ನು ಮೂಡಿಸಿದೆ.


    ಇದನ್ನೂ ಓದಿ: ನಿಮ್ಮ ಮೊಬೈಲ್​ನಲ್ಲಿದ್ದ ಕಾಂಟಾಕ್ಟ್​​ ಡೀಲಿಟ್ ಆಗಿದ್ಯಾ? ಹೀಗ್ ರಿಕವರಿ ಮಾಡಿಕೊಳ್ಳಿ!


    ಏನೆಲ್ಲಾ ಸಮಸ್ಯೆಗಳಾಗುತ್ತಿವೆ?


    ಕೆಲವು ಗಂಟೆಗಳಿಂದ ವಾಟ್ಸಪ್‌ ಸ್ಥಗಿತಗೊಂಡಿದೆ. ಇದರ ಬಗ್ಗೆ ಕೆಲವು ಬಳಕೆದಾರರು ತಿಳಿದಿಲ್ಲದಿರುವುದರಿಂದ ಕೆಲವೊಬ್ಬರು ತಮ್ಮ ಫೋನ್‌ಗಳನ್ನು ರೀಸ್ಟಾರ್ಟ್‌ ಮಾಡಿದ್ದಾರೆ, ಇನ್ನು ಕೆಲವರು ನೆಟವರ್ಕ್‌ ಸಮಸ್ಯೆ ಎಂದು ಏನೇನೋ ಹರಸಾಹಸ ಪಡ್ತಿದ್ದಾರೆ.


    ಈ ವಾಟ್ಸಪ್‌ ಸ್ಥಗಿತವಾಗಿದ್ದರಿಂದ ಯಾವುದೇ ರೀತಿಯ ಪರ್ಸನಲ್‌, ಗ್ರೂಪ್‌ಗಳಿಗೆ ಮೆಸೇಜ್‌ಗಳು ಸೆಂಡ್‌ ಆಗುತ್ತಿಲ್ಲ.


    ಇದರ ಜೊತೆಗೆ ವಿಡಿಯೋ ಕಾಲ್‌, ವಾಯ್ಸ್‌ ಕಾಲ್‌ ಇದನ್ನು ಮಾಡಲಾಗುತ್ತಿಲ್ಲ.


    ವಾಟ್ಸಪ್‌ ಪದೇ ಪದೇ ತನ್ನ ಕಾರ್ಯವೈಖರಿಯನ್ನು ಸ್ಥಗಿತಗೊಳಿಸುತ್ತಿದೆ. ಇದರಿಂದ ವಾಟ್ಸಪ್‌ನ ಮೇಲೆ ಪ್ರಶ್ನೆಗಳು ಹುಟ್ಟಲು ಕಾರಣವಾಗಿದೆ.


    ಇದರಿಂದ ಬಳಕೆದಾರರು ವಾಟ್ಸಪ್‌ನಲ್ಲಿ ಪರದಾಟವನ್ನು ಪಡ್ತಾ ಇದ್ದಾರೆ. ಈ ರೀತಿಯ ತೊಂದರೆ ವಾಟ್ಸಪ್‌ನ ಪದೇ ಪದೇ ಅಪ್ಡೇಟ್‌ನಿಂದವೋ ಅಥವಾ ಏನಾದರು ವಾಟ್ಸಪ್‌ನಲ್ಲಿ ಅಕ್ರಮ ವ್ಯವಹಾರಗಳಗಿವೆಯಾ ಎಂದು ಜನರು ತಮ್ಮಲ್ಲಿಯೇ ಪ್ರಶ್ನೆಗಳನ್ನು ಸೃಷ್ಟಿಮಾಡಿಕೊಂಡಿದ್ದಾರೆ.


    ಈ ಸಮಸ್ಯೆ ಕುರಿತು ಮೆಟಾದ ಪ್ರತಿಕ್ರಿಯೆ


    "ಸಂದೇಶ ಕಳುಹಿಸಲು ಕೆಲವು ಜನರು ಪ್ರಸ್ತುತ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಆದಷ್ಟು ಶೀಘ್ರವೇ ಎಲ್ಲರಿಗೂ ವಾಟ್ಸಾಪ್ ಅನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್ ಮಾಲೀಕತ್ವ ಹೊಂದಿರುವ ಮೆಟಾ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.


    ಯುಕೆ ಬಳಕೆದಾರರಿಗೂ ವಾಟ್ಸಪ್ ಡೌನ್


    ಮೆಟಾ ಒಡೆತನದಲ್ಲಿರುವ ವಾಟ್ಸಪ್ ಬಳಕೆದಾರರು ಮಂಗಳವಾರ 8:00 BST ಗಿಂತ ಮೊದಲು ಸಮಸ್ಯೆಗಳನ್ನು ವರದಿ ಮಾಡಲು ಪ್ರಾರಂಭಿಸಿದರು. ಅರ್ಧ ಗಂಟೆಯೊಳಗೆ 12,000 ಕ್ಕೂ ಹೆಚ್ಚು ವರದಿಗಳನ್ನು ಪೋಸ್ಟ್ ಮಾಡಲಾಗಿದೆ. ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅನೇಕ ಜನರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ.


    ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!


    ವಾಟ್ಸಾಪ್‌ ಸುಮಾರು ಎರಡು ಬಿಲಿಯನ್ ಜಾಗತಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದು ಯುಕೆ ಯಲ್ಲಿ ಅತ್ಯಂತ ಜನಪ್ರಿಯ ಸಂದೇಶ ರವಾನೆ ವೇದಿಕೆಗಳಲ್ಲಿ ಒಂದಾಗಿದೆ. ಡೌನ್ ಡೆಟೆಕ್ಟರ್ ಮಾಹಿತಿಯಂತೆ ಈ ಸಮಯಕ್ಕೆ ವಾಟ್ಸಾಪ್ ಚಾಟ್ ಸಾಧ್ಯವಾಗುತ್ತಿಲ್ಲ ಎಂದು ಸರಿ ಸುಮಾರು 75,000 ಕ್ಕೂ ಅಧಿಕ ದೂರುಗಳು ಬಂದಿವೆ.


    ಇದಿಷ್ಟು ಈಗಿನ ತಂತ್ರಜ್ಞಾನದಲ್ಲಾದ ಅಪ್ಡೇಟ್‌ ಆಗಿದೆ. ಈ ವಾಟ್ಸಪ್‌ ಇತ್ತೀಚಿನ ದಿನಗಳಲ್ಲಿ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಆಗಿತ್ತು. ಆದರೆ ಇಂದು ಜನರೆಲ್ಲರಿಗೆ ಸ್ಥಗಿತಗೊ:ಳಿಸಿ ಆತಂಕಗೊಳಿಸಿದೆ.

    Published by:Harshith AS
    First published: