ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಜ್ರ ನಾಪತ್ತೆ ; ಸಿಬಿಐ ತನಿಖೆಗೆ ಅರ್ಚಕರಿಂದಲೇ ಒತ್ತಾಯ

news18
Updated:May 22, 2018, 1:19 PM IST
ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಜ್ರ ನಾಪತ್ತೆ ;  ಸಿಬಿಐ ತನಿಖೆಗೆ ಅರ್ಚಕರಿಂದಲೇ ಒತ್ತಾಯ
news18
Updated: May 22, 2018, 1:19 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಮೇ.22) : ಜಗತ್ತಿನ ಶ್ರೀಮಂತ ದೇವರು ತಿರುಪತಿ ತಿರುಮಲ ವೆಂಕಟೇಶ್ವರನ ಸನ್ನಿಧಿಯಲ್ಲಿ ಕೋಲಾಹಲ ಎಬ್ಬಿಸಿದೆ. ಸಂಸ್ಕೃತ ಶ್ಲೋಕಗಳ ಬದಲು ಆರೋಪ-ಪ್ರತ್ಯಾರೋಪಗಳು ಜೋರಾಗಿ ಸದ್ದು ಮಾಡುತ್ತಿವೆ.  ಪುರಾತನ ಕಾಲದ ವಜ್ರ ವೈಢುರ್ಯಗಳು ನಾಪತ್ತೆಯಾಗಿದೆ. ಸಿಬಿಐ ತನಿಖೆ ಆಗಬೇಕು ಎನ್ನುವ ಗಂಭೀರ ಆರೋಪ ಅರ್ಚಕರಿಂದಲೇ ಹೊರಬಿದ್ದಿದೆ.

ಏಳುಬೆಟ್ಟಗಳ ಒಡೆಯನ ಸನ್ನಿಧಿಯಲ್ಲಿ ಈಗ ಎಲ್ಲವೂ ಗೋವಿಂದಮಯ.. ಪುರಾತನ ಒಡವೆಗಳು ಗೋವಿಂದ. ಹಳೆಯ ತಲೆಗಳು ಗೋವಿಂದ, ಅಕ್ರಮಗಳು, ಆರೋಪಗಳು, ಅಧಿಕಾರದ ದಾಹದಿಂದ ಜನರ ನಂಬಿಕೆಯೂ ಎಲ್ಲವೂ ಗೋವಿಂದಮಯವಾಗುತ್ತಿವೆ.  ಇದಕ್ಕೆಲ್ಲಾ ಕಾರಣ ಹಿರಿಯ ಅರ್ಚಕ ರಮಣ ದೀಕ್ಷಿತಲು ಅವರಿಗೆ ಟಿಟಿಡಿ ಕೊಟ್ಟ ಗೇಟ್​ಪಾಸ್​ ನೀಡಿದೆ.

ಎಲ್ಲಾ ಕೌಟುಂಬಿಕ ಅರ್ಚಕರು 65 ವರ್ಷಕ್ಕೆ ನಿವೃತ್ತಿಯಾಗಬೇಕು ಅಂತ ಟಿಟಿಡಿ ಆದೇಶ ಹೊರಡಿಸಿದೆ. ಜೊತೆಗೆ 69 ವರ್ಷದ ರಮಣ ದೀಕ್ಷಿತುಲು ಬದಲು ಮುಖ್ಯ ಅರ್ಚಕರಾಗಿ ಟಿಟಿಡಿಯವರು ವೇಣುಗೋಪಾಲ ದೀಕ್ಷಿತಲುರನ್ನ ನಿನ್ನೆಯಷ್ಟೇ ನೇಮಕ ಮಾಡಿದೆ. ಇದರಿಂದ ಸಿಟ್ಟಿಗೆದ್ದಿರುವ ಅರ್ಚಕ ವರ್ಗ ಟಿಟಿಡಿಯನ್ನೇ ಮಾಹಿತಿ ಹಕ್ಕು ಕಾಯ್ದೆಯಡಿ ತರಬೇಕು. ಅಕ್ರಮಗಳ ತನಿಖೆ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಜತೆಗೆ ಒಂದಷ್ಟು ಗಂಭೀರ ಆರೋಪ ಮಾಡಿದ್ದಾರೆ.

 ಆರೋಪಗಳು

ತಿರುಪತಿ ತಿರುಮಲ ದೇವಸ್ಥಾನದ ಪುರಾತನ ಒಡವೆಗಳು ನಾಪತ್ತೆ ಆಗಿವೆ
Loading...

ದೇವಸ್ಥಾನದಲ್ಲಿದ್ದ ಪುರಾತನ ಕಾಲದ  ವಜ್ರದ ಆಭರಣ ಕಣ್ಮರೆಯಾಗಿದೆ

ಕೆಲ ತಿಂಗಳ ಹಿಂದೆ ಜಿನೆವಾದಲ್ಲಿ  500 ಕೋಟಿಗೆ ವಜ್ರ ಹರಾಜು ಹಾಕಲಾಗಿದೆ

ಇದು ವೆಂಕಣ್ಣ ದೇವರ ಪ್ಲಾಟಿನಂ ನೆಕ್​ಲೇಸ್​ನಲ್ಲಿದ್ದ ವಜ್ರದಂತೇ ಇದೆ

ಕೆಲವು ಪತ್ರಿಕೆಗಳಲ್ಲಿ ಹರಾಜು ಹಾಕಿದ ವಜ್ರ ನೋಡಿದಾಗ ನನಗೆ ಅನುಮಾನ ಬಂತು

ಹಲವು ತಿಂಗಳಿನಿಂದ ದೇವರಿಗೆ ಆ ಪ್ಲಾಟಿನಂ ನೆಕ್​ಲೆಸ್​ ಹಾಕಲು ಅವಕಾಶವೇ ಕೊಟ್ಟಿಲ್ಲ

ತೀರಾ ಇತ್ತೀಚಿನ ಆಭರಣಗಳಿಂದಷ್ಟೇ ಮೂಲ ದೇವರ ಅಲಂಕಾರ ಮಾಡಲಾಗ್ತಿದೆ

1996ರಿಂದಲೂ ಹಲವು ಹಳೆಯ, ಪುರಾತನ ಆಭರಣಗಳು ನಾಪತ್ತೆಯಾಗಿವೆ

ಆಗಮ ಶಾಸ್ತ್ರದ ವಿರುದ್ಧವಾಗಿ ಪುರಾತನ ದೇವಸ್ಥಾನಗಳನ್ನೂ ಕೆಡವಿ ಕಲ್ಲುಗಳ ಸಾಗಾಟ ಮಾಡಿದ್ದಾರೆ

ಹೀಗಾಗಿ  22 ವರ್ಷಗಳಿಂದ ತಿರುಪತಿ ತಿರುಮಲಗೆ ಬಂದ ಎಲ್ಲಾ ಖರ್ಚು-ಆದಾಯಗಳನ್ನೆಲ್ಲಾ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯ ಅರ್ಚಕ ರಮಣ ದೀಕ್ಷಿತಲು ಆಗ್ರಹಿಸಿದ್ದಾರೆ. ಅರ್ಚಕರ ಆರೋಪ ನಿಜನಾ ಸುಳ್ಳಾ  ಎನ್ನುವುದರ ಬಗ್ಗೆ ತನಿಖೆ ನಡೆದರೆ ತಿರುಪತಿ ತಿರುಮಲ ದೇಗುಲದ ವಿವಾದ ಹೊಸ ರೂಪ ಪಡೆಯೋದಂತೂ ಸತ್ಯ.
First published:May 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626