• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sakshi Dhoni: ಧೋನಿ ಮನೆಯಲ್ಲಿ ಇಷ್ಟೆಲ್ಲಾ ಪ್ರಾಬ್ಲಮ್ ಆಗ್ತಿದ್ಯಂತೆ! ಸರ್ಕಾರಕ್ಕೆ ಪತ್ರ ಬರೆದು ಸಾಕ್ಷಿ ಧೋನಿ ಹೇಳಿದ್ದೇನು?

Sakshi Dhoni: ಧೋನಿ ಮನೆಯಲ್ಲಿ ಇಷ್ಟೆಲ್ಲಾ ಪ್ರಾಬ್ಲಮ್ ಆಗ್ತಿದ್ಯಂತೆ! ಸರ್ಕಾರಕ್ಕೆ ಪತ್ರ ಬರೆದು ಸಾಕ್ಷಿ ಧೋನಿ ಹೇಳಿದ್ದೇನು?

ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಸಿಂಗ್

ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಸಿಂಗ್

ಜನ ಸಾಮಾನ್ಯರಿಗೆ ಮಾತ್ರನಾ ಈ ಪವರ್ ಪ್ರಾಬ್ಲೆಮ್ (Power Problem) ಅಂದುಕೊಳ್ಳಬೇಡಿ. ಶ್ರೀಮಂತರು (Rich), ಗಣ್ಯ ವ್ಯಕ್ತಿಗಳನ್ನೂ (Celebrities) ಈ ಪವರ್ ಪ್ರಾಬ್ಲಮ್ ಬಿಟ್ಟಿಲ್ಲ. ಇದಕ್ಕೆ ಖ್ಯಾತ ಕ್ರಿಕೆಟಿಗ (Cricketer) ಮಹೇಂದ್ರ ಸಿಂಗ್ ಧೋನಿ (M.S. Dhoni) ಪತ್ನಿ, ಸಾಕ್ಷಿ ಸಿಂಗ್ (Sakshi Singh) ಅವರೇ ಸಾಕ್ಷಿ!

ಮುಂದೆ ಓದಿ ...
  • Share this:

ಜಾರ್ಖಂಡ್: ಎಲ್ಲೆಡೆ ಬೇಸಿಗೆ (Summer) ಅಬ್ಬರ ಮುಂದುವರೆದಿದೆ. ಜನರು ಸೆಖೆಯಿಂದ ಬಳಲುವಂತಾಗಿದೆ. ಹೋಗ್ಲಿ ಫ್ಯಾನ್ (Fan) ಹಾಕೊಂಡು ಧಗೆ ಕಡಿಮೆ ಮಾಡಿಕೊಳ್ಳೋಣ, ಎಸಿ (AC) ಹಾಕಿ ತಣ್ಣಗೆ (Cool) ಇರೋಣ ಅಂದ್ರೆ ಈ ಪವರ್ (Power) ಅದೆಲ್ಲಿ ಹೋಗುತ್ತೋ ಗೊತ್ತಿಲ್ಲ. ರೈತರಂತೂ (Farmer) ಜಮೀನಿಗೆ ನೀರು ಹಾಕೋದಕ್ಕೂ ಕರೆಂಟ್ (Current) ಇಲ್ಲದೇ ಒದ್ದಾಡುತ್ತಾ ಇದ್ದಾರೆ. ಜನ ಸಾಮಾನ್ಯರಿಗೆ ಮಾತ್ರನಾ ಈ ಪವರ್ ಪ್ರಾಬ್ಲೆಮ್ (Power Problem) ಅಂದುಕೊಳ್ಳಬೇಡಿ. ಶ್ರೀಮಂತರು (Rich), ಗಣ್ಯ ವ್ಯಕ್ತಿಗಳನ್ನೂ (Celebrities) ಈ ಪವರ್ ಪ್ರಾಬ್ಲಮ್ ಬಿಟ್ಟಿಲ್ಲ. ಇದಕ್ಕೆ ಖ್ಯಾತ ಕ್ರಿಕೆಟಿಗ (Cricketer) ಮಹೇಂದ್ರ ಸಿಂಗ್ ಧೋನಿ (M.S. Dhoni) ಪತ್ನಿ, ಸಾಕ್ಷಿ ಸಿಂಗ್ (Sakshi Singh) ಅವರೇ ಸಾಕ್ಷಿ!


 ಎಂ.ಎಸ್. ಧೋನಿ ಮನೆಯಲ್ಲೂ ಪವರ್ ಪ್ರಾಬ್ಲಮ್!


ಮಹೇಂದ್ರ ಸಿಂಗ್ ಧೋನಿಯವರ ಜಾರ್ಖಂಡ್‌ನ ರಾಂಚಿಯ ನಿವಾಸದಲ್ಲಿ ಪವರ್ ಪ್ರಾಬ್ಲಮ್ ಇದೆಯಂತೆ. ಪ್ರತಿ ದಿನ ಲೋಡ್‌ ಶೆಡ್ಡಿಂಗ್ ಇದ್ದು, ವಿದ್ಯುತ್ ಇಲಾಖೆಯವರು ಯಾವಾಗ ಅಂದರೆ ಆವಾಗ ಪವರ್ ತೆಗೆಯುತ್ತಾರಂತೆ. ಇದರಿಂದ ಧೋನಿ ಪತ್ನಿ ಸಾಕ್ಷಿ ಸಿಂಗ್‌ಗೆ ಬಹಳ ಪ್ರಾಬ್ಲೆಮ್ ಆಗುತ್ತಿದೆಯಂತೆ.


ಜಾರ್ಖಂಡ್ ಸರ್ಕಾರಕ್ಕೆ ಧೋನಿ ಪತ್ನಿ ಪತ್ರ


ಇಷ್ಟು ವರ್ಷಗಳಿಂದ ಈ ಸಮಸ್ಯೆ ಏಕೆ ಇತ್ತು ಎಂದು ಸಾಕ್ಷಿ ಸಿಂಗ್ ಜಾರ್ಖಂಡ್​ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ವಿದ್ಯುತ್​ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.


 ಇದನ್ನೂ ಓದಿ: Twitter Sale: ಹಠ ಬಿಡದೇ ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್, 3.36 ಲಕ್ಷ ಕೋಟಿ ರೂಪಾಯಿಗೆ ಸೇಲ್!


 ಟ್ವೀಟ್ ಮಾಡಿದ ಸಾಕ್ಷಿ ಧೋನಿ


ಜಾರ್ಖಂಡ್‌ನ ತೆರಿಗೆ ಪಾವತಿದಾಳಾಗಿರುವ ನನಗೆ ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗುತ್ತಿದೆ.  ಜಾರ್ಖಂಡ್‌ನಲ್ಲಿ ಇಷ್ಟು ವರ್ಷಗಳಿಂದ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ತಿಳಿಯಲು ನಾನು ಬಯಸುತ್ತೇನೆ ಎಂದು ಸಾಕ್ಷಿ ಧೋನಿ ಟ್ವೀಟ್ ಮಾಡುವ ಮೂಲಕ ಸರ್ಕಾರವನ್ನು ಕೇಳಿದ್ದಾರೆ. ನಾನು ಮನೆಯಲ್ಲಿ ಅನಗತ್ಯವಾಗಿ ವಿದ್ಯುತ್ ಬಳಸದೇ, ಪ್ರಜ್ಞಾ ಪೂರ್ವಕವಾಗಿ ವಿದ್ಯುತ್ ಉಳಿಸುತ್ತೇನೆ. ಆದರೂ ನಮಗೇಕೆ ಈ ತೊಂದರೆ ಅಂತ ಬೇಸರದಿಂದಲೇ ಸಾಕ್ಷಿ ಪ್ರಶ್ನಿಸಿದ್ದಾರೆ.



ಜಾರ್ಖಂಡ್‌ನಲ್ಲಿ ಹೆಚ್ಚಾಗುತ್ತಿದೆ ವಿದ್ಯುತ್ ಸಮಸ್ಯೆ


ಜಾರ್ಖಂಡ್‌ನಲ್ಲಿ ವಿದ್ಯುತ್ ಕಡಿತದ ಸಮಸ್ಯೆ ನಿರಂತರವಾಗಿ ಕಂಡು ಬರುತ್ತಿದೆ. ಇದರಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಸಿಗುತ್ತಿಲ್ಲ. ರಾಜಧಾನಿ ರಾಂಚಿಯಲ್ಲೂ ಇದೆ ಸಮಸ್ಯೆಯಾಗಿದೆ. ಇಲ್ಲಿನ ಜನರು ಪ್ರತಿದಿನ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದಾಗಿ ಬಿಸಿಲಿನ ತಾಪದಲ್ಲಿ ಬಳಲುತ್ತಿದ್ದಾರೆ. ಭಾನುವಾರವೂ ರಾಜಧಾನಿಯ ಹಲವೆಡೆ ಮೂರ್ನಾಲ್ಕು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸೋಮವಾರವೂ ಹೆಚ್ಚು ಕಡಿಮೆ ಅದೇ ಸ್ಥಿತಿ ಆಗಿತ್ತು. ಹೀಗಾಗಿ ಇದರಿಂದ ಬೇಸರಗೊಂಡಿದ್ದ ಸಾಕ್ಷಿ ಧೋನಿ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.


ಜಾರ್ಖಂಡ್‌ನಲ್ಲಿ ಸುಡುತ್ತಿದೆ ಬಿರು ಬಿಸಿಲು


ಜಾರ್ಖಂಡ್ ರಾಜ್ಯದ ಬಹುತೇಕ ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಕಂಡು ಬರುವುದರೊಂದಿಗೆ ಬಿಸಿಗಾಳಿಯೂ ಇದೆ. ಏಪ್ರಿಲ್ 28 ರವರೆಗೆ ಗಿರ್ಧಿ, ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್, ರಾಂಚಿ, ಬೊಕಾರೊ, ಕೊಡೆರ್ಮಾ, ಪಲಮು, ಗರ್ವಾ, ಛತ್ರ ಜಿಲ್ಲೆಗಳಲ್ಲಿ ಬಿಸಿಗಾಳಿ ಮುನ್ಸೂಚನೆ ಇದೆ.


ಇದನ್ನೂ ಓದಿ: Covid Vaccine: ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ, ಆದ್ರೆ ಪಕ್ಕದವನಿಗೆ ಇನ್ನೂ ವ್ಯಾಕ್ಸಿನೇಷನ್ ಆಗಿಲ್ಲ; ಹಾಗಿದ್ರೆ ನಿಮಗೇ ಅಪಾಯ!


ದೇಶದ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ


ಏಪ್ರಿಲ್ 18 ರಂದು ದೇಶದಲ್ಲಿರುವ ಕಲ್ಲಿದ್ದಲು ದಾಸ್ತಾನು ಕುರಿತಾಗಿ ಕೇಂದ್ರ ವಿದ್ಯುಚ್ಛತ್ತಿ ಪ್ರಾಧಿಕಾರ ವರದಿ ನೀಡಿದ್ದು, ಇದರ ಪ್ರಕಾರ ದೇಶದ 173 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ 100 ರಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ.

Published by:Annappa Achari
First published: