ಯೆಸ್ ಬ್ಯಾಂಕ್ ಸಂಸ್ಥಾಪಕರಿಗೆ DHFL​ನಿಂದ 600 ಕೋಟಿ ಲಂಚ: ಸಿಬಿಐ ಆರೋಪ; ಮುಂಬೈನ 7 ಕಡೆ ದಾಳಿ

ರಾಣಾ ಕಪೂರ್

ರಾಣಾ ಕಪೂರ್

ಡಿಎಚ್​ಎಫ್​ಎಲ್ ಮತ್ತು ಯೆಸ್ ಬ್ಯಾಂಕ್ ಮಧ್ಯೆ ಹಣಕಾಸು ಅವ್ಯವಹಾರಕ್ಕೆ ಕ್ರಿಮಿನಲ್ ಸಂಚು ನಡೆದಿತ್ತು. ಡಿಎಚ್​ಎಫ್​ಎಲ್ ಸಂಸ್ಥೆಗೆ ಯೆಸ್ ಬ್ಯಾಂಕ್ ಮೂಲಕ ಅಕ್ರಮವಾಗಿ ಹಣಕಾಸು ಸಹಾಯ ಒದಗಿಸಲಾಗಿದೆ ಮತ್ತು ಅದಕ್ಕೆ ಪ್ರತಿಯಾಗಿ ಕಪೂರ್ ಕುಟುಂಬದವರಿಗೆ ವಿವಿಧ ರೂಪಗಳಲ್ಲಿ ಅನುಕೂಲ ಮಾಡಿಕೊಡಲಾಗಿದೆ ಎಂಬುದು ಸಿಬಿಐ ಆರೋಪ.

ಮುಂದೆ ಓದಿ ...
  • News18
  • 2-MIN READ
  • Last Updated :
  • Share this:

ಮುಂಬೈ(ಮಾ. 09): ಯೆಸ್ ಬ್ಯಾಂಕ್​ನ ಒಂದೊಂದೇ ಕರ್ಮಕಾಂಡಗಳು ಬಿಚ್ಚಿಕೊಳ್ಳುತ್ತಿವೆ. ಯೆಸ್ ಬ್ಯಾಂಕ್​ನ ಕೆಲ ಅವ್ಯವಹಾರಗಳೇ ಅದರ ಇಂದಿನ ದುಸ್ಥಿತಿಗೆ ಕಾರಣ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಲಂಚ ಪ್ರಕರಣ ತಲೆ ಎತ್ತಿದೆ. ಯೆಸ್ ಬ್ಯಾಂಕ್​ನ ಸಹ-ಸಂಸ್ಥಾಪಕ ರಾಣಾ ಕಪೂರ್ ಅವರ ಕುಟುಂಬದವರು ಡಿಎಚ್​ಎಫ್​ಎಲ್ ಸಂಸ್ಥೆಯಿಂದ 600 ಕೋಟಿ ರೂ ಲಂಚ ಪಡೆದಿದ್ದರು ಎಂದು ಸಿಬಿಐ ಆರೋಪಿಸಿದೆ. ತಾನು ಸಲ್ಲಿಸಿರುವ ಎಫ್​ಐಆರ್​ನಲ್ಲಿ ಸಿಬಿಐ ಈ ಆರೋಪ ಮಾಡಿದೆ. ಈ ಸಂಬಂಧ ಮುಂಬೈನಲ್ಲಿ ರಾಣಾ ಕಪೂರ್ ಮತ್ತವರ ಕುಟುಂಬ ಸದಸ್ಯರಿಗೆ ಸೇರಿದ 7 ಸ್ಥಳಗಳಲ್ಲಿ ಸಿಬಿಐ ಇಂದು ರೇಡ್ ಮಾಡಿದೆ.


ಸಿಬಿಐ ಆರೋಪ ಏನು?


ಡಿಎಚ್​ಎಫ್​ಎಲ್ ಪ್ರೊಮೋಟರ್ ಕಪಿಲ್ ವಾಧವಾನ್ ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮಧ್ಯೆ ಹಣಕಾಸು ಅವ್ಯವಹಾರಕ್ಕೆ ಕ್ರಿಮಿನಲ್ ಸಂಚು ನಡೆದಿತ್ತು. ಡಿಎಚ್​ಎಫ್​ಎಲ್ ಸಂಸ್ಥೆಗೆ ಯೆಸ್ ಬ್ಯಾಂಕ್ ಮೂಲಕ ಅಕ್ರಮವಾಗಿ ಹಣಕಾಸು ಸಹಾಯ ಒದಗಿಸಲಾಯಿತು ಮತ್ತು ಅದಕ್ಕೆ ಪ್ರತಿಯಾಗಿ ಕಪೂರ್ ಕುಟುಂಬದವರಿಗೆ ವಿವಿಧ ರೂಪಗಳಲ್ಲಿ ಅನುಕೂಲ ಮಾಡಿಕೊಡಲಾಗಿದೆ ಎಂಬುದು ಸಿಬಿಐನ ಆರೋಪವಾಗಿದೆ.


ಇದನ್ನೂ ಓದಿ: ಲಕ್ನೋದಲ್ಲಿ ಹಾಕಲಾಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಬ್ಯಾನರ್ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ


ಯೆಸ್ ಬ್ಯಾಂಕ್ ಮತ್ತು ಡಿಎಚ್​ಎಫ್​ಎಲ್ ಮಧ್ಯೆ ಅಕ್ರಮ ವ್ಯವಹಾರ ರೂಪುಗೊಂಡಿದ್ದು 2018, ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಎನ್ನಲಾಗಿದೆ. ಹಗರಣಗಳಿಂದ ಕಂಗೆಟ್ಟಿದ್ದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿ (ಡಿಎಚ್​ಎಫ್​ಎಲ್) ಸಂಸ್ಥೆಯಲ್ಲಿ ಯೆಸ್ ಬ್ಯಾಂಕ್ 3,700 ರೂ ಹಣ ಹೂಡಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ ಯೆಸ್ ಬ್ಯಾಂಕ್​ನ ರಾಣಾ ಕಪೂರ್ ಕುಟುಂಬ ಸದಸ್ಯರ ಕಂಪನಿಗಳಿಗೆ ವಿವಿಧ ರೀತಿಯಲ್ಲಿ ಒಟ್ಟು 600 ಕೋಟಿ ರೂ ಮೊತ್ತದಷ್ಟು ಲಂಚಗಳನ್ನು ನೀಡಿತು. DoIT ಅರ್ಬನ್ ವೆಂಚರ್ಸ್ ಸಂಸ್ಥೆಯ ಮೇಲೆ ಸಾಲದ ರೂಪದಲ್ಲಿ ಲಂಚ ನೀಡಲಾಯಿತು ಎಂದು ಸಿಬಿಐ ತನ್ನ ಎಫ್​ಐಆರ್​ನಲ್ಲಿ ಆರೋಪ ಮಾಡಿದೆ.


ಸಾವಿರಾರು ಕೋಟಿ ಮೊತ್ತದಷ್ಟು ಕೆಟ್ಟ ಸಾಲಗಳಿಂದ ಕಂಗೆಟ್ಟಿದ್ದ ಯೆಸ್ ಬ್ಯಾಂಕನ್ನು ಆರ್​ಬಿಐ ಕಳೆದ ಗುರುವಾರ ಸೂಪರ್​ಸೀಡ್ ಮಾಡಿತ್ತು. ಯೆಸ್ ಬ್ಯಾಂಕ್​ನ ವಿವಿಧ ಖಾತೆಗಳ ಮೇಲೆ ನಿರ್ಬಂಧಗಳನ್ನ ಹೇರಿತು. ಒಬ್ಬ ಖಾತೆದಾರರು ಒಂದು ತಿಂಗಳಲ್ಲಿ ವಿತ್​ಡ್ರಾ ಮಾಡಿಕೊಳ್ಳಬಹುದಾದ ಹಣದ ಮೊತ್ತವನ್ನು 50 ಸಾವಿರಕ್ಕೆ ಸೀಮಿತಗೊಳಿಸಿದೆ. ಯೆಸ್ ಬ್ಯಾಂಕ್​ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಎಸ್​ಬಿಐನ ಮಾಜಿ ಸಿಎಫ್​ಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸೂಚಿಸಲಾಗಿದೆ. ಆರ್​ಬಿಐನಿಂದ ಮುಂದಿನ ಸೂಚನೆ ಸಿಗುವವರೆಗೂ ಯೆಸ್ ಬ್ಯಾಂಕ್ ಯಾವುದೇ ಹೊಸ ಸಾಲ ಅಥವಾ ಮುಂಡಗವನ್ನಾಗಲೀ ನೀಡುವಂತಿಲ್ಲ. ಯಾವುದೇ ಹೂಡಿಕೆ ಮಾಡುವಂತಿಲ್ಲ. ಯಾವುದೇ ಮರುಪಾವತಿ ಮಾಡುವಂತಿಲ್ಲ ಇತ್ಯಾದಿ ನಿರ್ಬಂಧಗಳನ್ನ ಹಾಕಿದೆ.


ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಇನ್ನಷ್ಟು ಅಗ್ಗ; ಜನವರಿ 11ರಿಂದೀಚೆ ಐದೂವರೆ ರೂ ಬೆಲೆ ಇಳಿಕೆ


ಕಳೆದ ವಾರ ಆರ್​ಬಿಐನಿಂದ ಸೂಪರ್​ಸೀಡ್ ಆದ ಬಳಿಕ ಯೆಸ್ ಬ್ಯಾಂಕ್​ನ ಷೇರುಗಳು ಪ್ರಪಾತಕ್ಕೆ ಕುಸಿದಿದ್ದವು. ಆದರೆ, ಎಸ್​ಬಿಐ ಸಂಸ್ಥೆ ಯೆಸ್ ಬ್ಯಾಂಕ್​ನಲ್ಲಿ ಶೇ. 49 ರಷ್ಟು ಪಾಲು ಖರೀದಿಸಲು ನಿರ್ಧರಿಸಿದ ಬಳಿ ಷೇರು ಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ ಚೇತರಿಸಿಕೊಂಡಿದೆ.


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

top videos


    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು