Dharma Chakra Day: ಜಗತ್ತು ಎದುರಿಸುತ್ತಿರುವ ಸವಾಲುಗಳಿಗೆ ಬುದ್ಧನ ಸಂದೇಶಗಳಿಂದ ಪರಿಹಾರ; ಪ್ರಧಾನಿ ನರೇಂದ್ರ ಮೋದಿ

Dharma Chakra Day: ಇಂದು ಇಡೀ ಜಗತ್ತು ನಾನಾ ರೀತಿಯ ವಿಚಿತ್ರವಾದ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಎದುರಿಸಲು ಬುದ್ಧನ ಸಂದೇಶಗಳು ಸಹಕಾರಿಯಾಗಲಿವೆ. ಬುದ್ಧನ ಸಂದೇಶಗಳು ಹಿಂದೆ, ಇಂದು ಮತ್ತು ಮುಂದೆಯೂ ಪ್ರಸ್ತುತವಾಗಿರಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Sushma Chakre | news18-kannada
Updated:July 4, 2020, 10:38 AM IST
Dharma Chakra Day: ಜಗತ್ತು ಎದುರಿಸುತ್ತಿರುವ ಸವಾಲುಗಳಿಗೆ ಬುದ್ಧನ ಸಂದೇಶಗಳಿಂದ ಪರಿಹಾರ; ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ (ಜು. 4): ಭಗವಾನ್ ಬುದ್ಧ ಶಾಂತಿಯನ್ನು ಪ್ರತಿಪಾದಿಸಿದ್ದಾರೆ. ನಾವು ಈ ದಿನ ನಮ್ಮ ಗುರುಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ಬುದ್ಧ ಇಡೀ ಜಗತ್ತಿಗೆ ನೀಡಿರುವ ಶಾಂತಿಯ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕು. ನಿಮಗೆ ನೀವೇ ದಾರಿದೀಪವಾಗಿ ಎಂಬ ಬುದ್ಧನ ಸಂದೇಶವನ್ನು ನಾವು ಯಾರೂ ಮರೆಯುವಂತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಬುದ್ಧ ಪೂರ್ಣಿಮೆ ಪ್ರಯುಕ್ತ ಇಂದು ಧರ್ಮಚಕ್ರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಬೌದ್ಧ ಸಮಿತಿ ಸಹಯೋಗದಲ್ಲಿ ನಡೆಯುತ್ತಿರುವ ಧರ್ಮಚಕ್ರ ದಿನಾಚರಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಬೌದ್ಧ ಧರ್ಮ ಜನರಿಗೆ, ಬಡವರಿಗೆ, ಮಹಿಳೆಯರಿಗೆ, ಅಹಿಂಸೆಗೆ ಗೌರವ ನೀಡುವುದನ್ನು ಕಲಿಸುತ್ತದೆ. ಇದು ಸರ್ವಕಾಲಕ್ಕೂ ಅನ್ವಯವಾಗುವ ಸಂದೇಶವಾಗಿದೆ. ಭರವಸೆ ಮತ್ತು ಗುರಿ ಯಾವ ರೀತಿ ಒಂದಕ್ಕೊಂದು ಸಂಬಂಧಪಟ್ಟಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನನಗೆ 21ನೇ ಶತಮಾನದ ಬಗ್ಗೆ ಬಹಳ ನಿರೀಕ್ಷೆಗಳಿವೆ. ನಮ್ಮ ದೇಶದಲ್ಲಿರುವ ಯುವ ಸಮುದಾಯ ದೇಶದ ದೊಡ್ಡ ಶಕ್ತಿಯಾಗಿ ಬೆಳೆಯಲಿದ್ದಾರೆ. ತಮ್ಮ ಗುರಿಯನ್ನು ಮುಟ್ಟಲು ಬುದ್ಧನ ಸಂದೇಶಗಳನ್ನು ಅನುಸರಿಸುವುದು ಕೂಡ ಮುಖ್ಯ ಎಂದು ಈ ಮೂಲಕ ಯುವಪೀಳಿಗೆಗೆ ನಾನು ಹೇಳಲು ಇಚ್ಛಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Mumbai Rain: ಮಹಾರಾಷ್ಟ್ರದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಮುಂಬೈ ಸುತ್ತಮುತ್ತ ರೆಡ್ ಅಲರ್ಟ್​ ಘೋಷಣೆ

ಖುಷಿನಗರ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲಾಗುವುದು ಎಂದು ಕೆಲವು ದಿನಗಳ ಹಿಂದೆ ಸಂಪುಟ ಸಭೆಯಲ್ಲಿ ಚರ್ಚಿಸಿ, ಘೋಷಿಸಲಾಗಿದೆ. ಇದರಿಂದಾಗಿ ಅನೇಕ ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಅನುಕೂಲವಾಗಲಿದೆ. ಇಂದು ಇಡೀ ಜಗತ್ತು ನಾನಾ ರೀತಿಯ ವಿಚಿತ್ರವಾದ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಎದುರಿಸಲು ಬುದ್ಧನ ಸಂದೇಶಗಳು ಸಹಕಾರಿಯಾಗಲಿವೆ. ಬುದ್ಧನ ಸಂದೇಶಗಳು ಹಿಂದೆ, ಇಂದು ಮತ್ತು ಮುಂದೆಯೂ ಪ್ರಸ್ತುತವಾಗಿರಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೋನಾ ವೈರಸ್​​ನಿಂದ ಗುಣಮುಖರಾದವರು ಮತ್ತು ಕೊರೋನಾ ವಾರಿಯರ್ಸ್​ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಕೂಡ ಬುದ್ಧ ಪೂರ್ಣಿಮೆಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಧರ್ಮಚಕ್ರ ದಿನಾಚರಣೆಯನ್ನು ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು 30 ಲಕ್ಷ ಬುದ್ಧನ ಅನುಯಾಯಿಗಳು ವಿಶ್ವಾದ್ಯಂತ ನೇರಪ್ರಸಾರದ ಮೂಲಕ ವೀಕ್ಷಿಸಿದ್ದಾರೆ.
Published by: Sushma Chakre
First published: July 4, 2020, 10:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading