DGCA: ಆಗಸ್ಟ್​ 31ರವರೆಗೆ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧ ವಿಸ್ತರಣೆ

ಗತ್ತಿನ ಅನೇಕ ರಾಷ್ಟ್ರಗಳಲ್ಲಿ ಡೆಲ್ಟಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಈ ಕ್ರಮ ಅನಿವಾರ್ಯವಾಗಿದ್ದು, ಮತ್ತೊಂದು ತಿಂಗಳು ಕಾಲ ಈ ನಿರ್ಬಂಧ ಮುಂದುವರೆಸಲಾಗುವುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಶದಲ್ಲಿ ಅಂತರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ಸರ್ಕಾರ ವಿಧಿಸಿದ್ದ ನಿರ್ಬಂಧವನ್ನು ಸರ್ಕಾರ ಆಗಸ್ಟ್​ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಡೈರೆಕ್ಟರ್​ ಜನರಲ್​ ಆಫ್​​ ಸಿವಿಲ್​ ಏವಿಯೇಷನ್​ (ಡಿಜಿಸಿಎ) ತಿಳಿಸಿದೆ. ಕೋವಿಡ್ ಹಿನ್ನಲೆಯಲ್ಲಿ ಕಳೆದ ಮಾರ್ಚ್​ 31ರಿಂದ ದೇಶದಲ್ಲಿ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲೆ ನಿಷೇಧ ವಿಧಿಸಲಾಗಿತ್ತು. ಜು. 31ರವರೆಗೆ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧವನ್ನು ಸರ್ಕಾರ ವಿಧಿಸಿತ್ತು. ಆದರೆ, ಇದೀಗ ದೇಶದಲ್ಲಿ ಕೋವಿಡ್​ ಮೂರನೇ ಅಲೆ ಆತಂಕ ಮೂಡಿದೆ. ಈ ನಡುವೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಡೆಲ್ಟಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಈ ಕ್ರಮ ಅನಿವಾರ್ಯವಾಗಿದ್ದು, ಮತ್ತೊಂದು ತಿಂಗಳು ಕಾಲ ಈ ನಿರ್ಬಂಧ ಮುಂದುವರೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಈ ನಿರ್ಬಂಧ ಕೇವಲ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಮಾತ್ರ ಅನ್ವಯವಾಗಲಿದ್ದು, ಕಾರ್ಗೋ ವಿಮಾನಗಳಿಗೆ ಹಾಗೂ ನಿಯಂತ್ರಕ ಸಂಸ್ಥೆಗಳಿಂದ ಅನುಮೋದಿಸಿದ ವಿಮಾನಗಳಿಗೆ ಅನ್ವಯವಾಗುವುದಿಲ್ಲ. ಸೋಂಕು ಪ್ರಕರಣದ ಆಧಾರದ ಮೇಲೆ ಅಂತರಾಷ್ಟ್ರೀಯ ನಿಗದಿತ ವಾಣಿಜ್ಯ ವಿಮಾನಗಳನ್ನು ಆಯ್ದ ಮಾರ್ಗದ ಮೂಲಕ ಹಾರಾಟಕ್ಕೆ ಅನುಮತಿಸಬಹುದಾಗಿದೆ ಎಂದು ಕೂಡ ಇದೇ ವೇಳೆ ಡಿಜಿಸಿಎ ತಿಳಿಸಿದೆ.

    ಇದನ್ನು ಓದಿ: ಭೂಕಂಪಕ್ಕೆ ಅಕ್ಷರಶಃ ನಲುಗಿದ ಅಲಸ್ಕಾ ಜನ! ಜನರ ಉಳಿವಿಗಾಗಿ ಪ್ರಾರ್ಥನೆ

    ಜಗತ್ತಿನ ಅನೇಕ ದೇಶಗಳಲ್ಲಿ ಕೋವಿಡ್ ಸೋಂಕು ಏರಿಕೆ ಕಾಣುತ್ತಿದೆ. ಈ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ನಡೆಸಲಾಗಿದೆ. ವಿದೇಶಿ ವಿಮಾನ ಹಾರಾಟಕ್ಕೆ ಅವಕಾಶ ನೀಡಿದರೆ, ದೇಶದಲ್ಲಿ ಇಳಿಕೆ ಕಂಡಿರುವ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನಲೆ ಡಿಜಿಸಿಎ ಈ ತೀರ್ಮಾನ ನಡೆಸಿದೆ. ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದವರೆದಿದ್ದರೂ ದೇಶಿಯ ವಿಮಾನಗಳ ಹಾರಾಟ ಎಂದಿನಂತೆ ಸಾಗಲಿದೆ ಎಂದಿದ್ದಾರೆ.

    ದೇಶದಲ್ಲಿ ತಗ್ಗಿದ್ದ ಕೊವೀಡ್​ ಸೋಂಕು ಪ್ರಕರಣ ನಿಧಾನವಾಗಿ ಏರಿಕೆ ಕಾಣುತ್ತಿದೆ. ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದ್ದು, ಡೆಲ್ಟಾ ಸೋಂಕು ಆತಂಕ ಮೂಡಿಸಿದೆ. ಈಗಾಗಲೇ ಆಗಸ್ಟ್​- ಸೆಪ್ಟೆಂಬರ್​ ವೇಳೆಗೆ ಮೂರನೇ ಅಲೆ ಕೋವಿಡ್​ ಸೋಂಕು ಹೆಚ್ಚ ಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: