Narendra Modi: ಅಭಿವೃದ್ಧಿ ಮಾಡಿರೋದು ಚುನಾವಣೆಗಾಗಿ ಅಲ್ಲ, ಜನರಿಗಾಗಿ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು (Development Projects) ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ ಬದಲಾಗಿ ಜನರ ಒಳಿತಿಗಾಗಿ ಇವೆ ಎಂದು ಹೇಳಿದರು.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ದೆಹಲಿ(ಜೂ.12): ಮೋದಿ ಸರ್ಕಾರ 8 ವರ್ಷದ ಸಂಭ್ರಮದಲ್ಲಿದೆ. ಈ ನಿಮಿತ್ತ ಬಿಜೆಪಿ (BJP) ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರಾಜ್ಯಸಭಾ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವಿನ ನಗು ಬೀರಿದ್ದು ಬಹಳಷ್ಟು ಪಕ್ಷದ ಹಿರಿಯ ನಾಯಕರು ಬಿಜೆಪಿಗೆ ಸೇರಿಕೊಳ್ಳುತ್ತಿರುವುದನ್ನು ಕಾಣಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು (Development Projects) ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ ಬದಲಾಗಿ ಜನರ ಒಳಿತಿಗಾಗಿ ಇವೆ ಎಂದು ಹೇಳಿದರು. ನವಸಾರಿ ಜಿಲ್ಲೆಯ ಚಿಖ್ಲಿ ತಾಲೂಕಿನ ಖುದ್ವೇಲ್ ಗ್ರಾಮದಲ್ಲಿ ಶುಕ್ರವಾರ ನಡೆದ ಗುಜರಾತ್ (Gujarat) ಗೌರವ್ ಅಭಿಯಾನದ ಕಾರ್ಯಕ್ರಮದಲ್ಲಿ ಜನರೇ ನಮ್ಮನ್ನು ಚುನಾವಣೆ (Election) ಗೆಲ್ಲುವಂತೆ ಮಾಡುತ್ತಾರೆ ಎಂದು ಹೇಳಿದರು.

ನಾವು ಕೆಲಸ ಮಾಡುವಾಗ, ಮುಂಬರುವ ಚುನಾವಣೆಗಳ ಕಾರಣದಿಂದ ನಾವು ಮಾಡುತ್ತೇವೆ ಎಂದು ಕೆಲವರು ಅಪಹಾಸ್ಯ ಮಾಡುತ್ತಾರೆ. ನಮ್ಮ ಅಧಿಕಾರಾವಧಿಯಲ್ಲಿ ನಾವು ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದ ಒಂದು ವಾರವನ್ನು ನಮಗೆ ತೋರಿಸಿ ಎಂದು ಸವಾಲೆಸೆದಿದ್ದಾರೆ.

ಟೀಕೆಗಳನ್ನು ನೆನಪಿಸಿಕೊಂಡ ಮೋದಿ

2018 ರಲ್ಲಿ ನಾನು ಈ ಯೋಜನೆಯನ್ನು ಘೋಷಿಸಿದಾಗ, ಕೆಲವರು 2019 ರಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಹಾಗಾಗಿ ಮೋದಿ ಸಾಹೇಬ್ ನಮಗೆ ಕನಸುಗಳನ್ನು ತೋರಿಸಲು ಬಂದಿದ್ದಾರೆ ಎಂದು ಮೊದಲಿಸಿದ್ದರು. ಆದರೆ ಇಂದು, ನಾವು ಅವುಗಳನ್ನು ಸುಳ್ಳೆಂದು ಸಾಬೀತುಪಡಿಸಿದ್ದೇವೆ. ನಾವು ಮನೆಗಳಿಗೆ ನೀರು ತಲುಪಿಸಿದ್ದೇವೆ ಎನ್ನುವುದರ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

ಜನರಿಗೆ ಒಳ್ಳೆಯದನ್ನು ಮಾಡಲು ಬಂದಿದ್ದೇವೆ

ನಾವು ಚುನಾವಣೆಗಳನ್ನು ಗೆಲ್ಲಲು ಇದನ್ನು ಮಾಡುವುದಿಲ್ಲ. ನಾವು ಜನರಿಗೆ ಒಳ್ಳೆಯದನ್ನು ಮಾಡಲು ಬಂದಿದ್ದೇವೆ. ಜನರು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡುತ್ತಾರೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: Amit Shah: ಆದ್ಯತೆಯಲ್ಲಿ ರೇಪ್, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಅಮಿತ್ ಶಾ ಸೂಚನೆ

ಮೋದಿ ಅವರು ಗುಜರಾತ್‌ಗೆ ತಮ್ಮ ದಿನದ ಭೇಟಿಯ ಸಂದರ್ಭದಲ್ಲಿ 3,050 ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿದರು.

ಮೋದಿ ಉದ್ಘಾಟಿಸಿದ ಯೋಜನೆಗಳಲ್ಲಿ ನವಸಾರಿಯಲ್ಲಿ ಜಿಎಂಇಆರ್‌ಎಸ್ ವೈದ್ಯಕೀಯ ಕಾಲೇಜು, ಸುಮಾರು 4.5 ಲಕ್ಷ ಜನರನ್ನು ಒಳಗೊಂಡಿರುವ ವಲ್ಸಾದ್ ಜಿಲ್ಲೆಯ ಕಪ್ರಡಾ ಮತ್ತು ಧರಮ್‌ಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಅಸ್ತೋಲ್ ನೀರು ಸರಬರಾಜು ಯೋಜನೆ ಸೇರಿವೆ.

ಆದಿವಾಸಿ ಸಮುದಾಯಕ್ಕಾಗಿ ಈ ಕೆಲಸ

ಶುದ್ಧ ಕುಡಿಯುವ ನೀರಿನ ಹಕ್ಕು ಆದಿವಾಸಿ ಸಮುದಾಯದವರಿಗೂ ಇದೆ ಎಂದು ಅವರು ಒತ್ತಿ ಹೇಳಿದರು. ಅವರಿಗಾಗಿಯೇ ನಾನು ಈ ಅಭಿಯಾನಗಳನ್ನು ಕೈಗೆತ್ತಿಕೊಂಡಿದ್ದೇನೆ, ಚುನಾವಣೆ ಗೆಲ್ಲಲು ಅಲ್ಲ ಎಂದು ಮೋದಿ ಹೇಳಿದ್ದಾರೆ.

ಇಡೀ ಜಗತ್ತು ಕೋವಿಡ್ -19 ನಿಂದ ತತ್ತರಿಸಿದೆ. ಆದರೆ 200 ಕೋಟಿ ಡೋಸ್‌ಗಳ ದೊಡ್ಡ ಲಸಿಕೆ ವ್ಯಾಪ್ತಿಯನ್ನು ಒದಗಿಸಿದ್ದು ಭಾರತ ಮಾತ್ರ ಎಂದು ಪ್ರಧಾನಿ ಹೇಳಿದರು. ದೂರದ ಕಾಡಿನಲ್ಲಿ ವಾಸಿಸುವವರನ್ನು ಕಾಳಜಿ ವಹಿಸುವುದು ನಮ್ಮ ಸಂಸ್ಕೃತಿಯಲ್ಲಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: Congressಗೆ ದಿಕ್ಕು ದೆಸೆ ಇಲ್ಲದಂತಾಗಿದೆ, ಬೇರೆ ಬೇರೆ ಪಕ್ಷದ ನಾಯಕರು BJP ಸೇರುತ್ತಿದ್ದಾರೆ ಎಂದ ಸಚಿವ ರಾಮುಲು

ಬುಡಕಟ್ಟು ಜನಾಂಗದವರಾಗಿದ್ದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಅಮರಸಿಂಹ ಚೌಧರಿ ಅವರನ್ನು ಹೆಸರಿಸದೆ, “ಗುಜರಾತ್‌ನಲ್ಲಿ ಈ ಪ್ರದೇಶ, ಈ ಆದಿವಾಸಿ ಪ್ರದೇಶದಿಂದ ಮುಖ್ಯಮಂತ್ರಿ ಇದ್ದ ಕಾಲವಿತ್ತು. ಅವರ ಸ್ವಂತ ಹಳ್ಳಿಯಲ್ಲಿ ನೀರಿನ ಟ್ಯಾಂಕ್ ಇರಲಿಲ್ಲ. ಒಂದೂವರೆ ವರ್ಷದಲ್ಲಿ ಒಣಗುವ ಕೈಪಂಪುಗಳನ್ನು ಅಳವಡಿಸುತ್ತಿದ್ದರು. ನಾನು ಗುಜರಾತ್‌ನ ಜವಾಬ್ದಾರಿಯನ್ನು ವಹಿಸಿಕೊಂಡಾಗ, ನಾನು ಅವರ ಹಳ್ಳಿಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿದೆ ಎಂದಿದ್ದಾರೆ.
Published by:Divya D
First published: