ಪಕ್ಷ ವಿರೋಧಿ ಚಟುವಟಿಕೆ; ಕೇರಳ ಜೆಡಿಎಸ್​ ಘಟಕ ವಿಸರ್ಜಿಸಿದ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಸಿಕೆ ನಾನು ರಾಜ್ಯ ಘಟಕವನ್ನು ಬಲಪಡಿಸುವ ಬದಲು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದು, ಪಕ್ಷ ರಚಿಸಿದ ಪ್ರಮುಖ ಸಮಿತಿಗಳನ್ನು ಸಂಪರ್ಕಿಸಿಲ್ಲ

  • Share this:

ಬೆಂಗಳೂರು (ಅ.12) ಪಕ್ಷ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ ಹಿನ್ನಲೆ ಕೇರಳದ ಜೆಡಿಎಸ್​ ಘಟಕವನ್ನು ವಿಸರ್ಜಿಸಲಾಗಿದೆ. ಈ ಕುರಿತು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಕೇರಳದ ಜೆಡಿಎಸ್​ ರಾಜ್ಯ ಘಟಕ ಅಧ್ಯಕ್ಪರಾಗಿರುವ ಸಿಕೆ ನಾನು,  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಕುರಿತು ಕಾರಣಕೇಳಿ ನೋಟಿಸ್​ ಕೂಡ ಜಾರಿ ಮಾಡಲಾಗಿತ್ತು. ಆದರೆ, ಇದಕ್ಕೆ ಅವರಿಂದ ಉತ್ತರ ಬಂದಿಲ್ಲ. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಸಚಿವ ಮ್ಯಾಥ್ಯು ಟಿ ಥಾಮಸ್​ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಜೆಡಿಎಸ್​ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿರುವ ಬಿಎಂ ಫಾರೂಖ್​​ ಸೆ.24ರಂದು ಕಾರಣ ಕೇಳಿ ಸಿಕೆ ನಾನು ಅವರಿಗೆ ನೋಟಿಸ್​ ಜಾರಿ ಮಾಡಿದ್ದರು. ಈ ನೋಟಿಸ್​ಗೆ ಉತ್ತರಿಸದ ಅವರು ಯಾವುದೇ ನಿರ್ದೇಶನಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದರು.


ಸಿಕೆ ನಾನು ರಾಜ್ಯ ಘಟಕವನ್ನು ಬಲಪಡಿಸುವ ಬದಲು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದು, ಪಕ್ಷ ರಚಿಸಿದ ಪ್ರಮುಖ ಸಮಿತಿಗಳನ್ನು ಸಂಪರ್ಕಿಸಿಲ್ಲ ಎಂದರು


ಇದೇ ವೇಳೆ ಜೋಸ್​ ತೆಟ್ಟಾಯಿ, ಜಮೀಲ ಪ್ರಕಾಶಂ ಅವರನ್ನು ಉಪಾಧ್ಯಕ್ಷರನ್ನಾಗಿ , ಬೆನ್ನಿ ಮೂಂಜೇಲಿ, ವಿ. ಮುರುಗದಾಸ್​, ಬಿಕೈ ಜೋಸೆರ್ಫ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

top videos
    First published: