ಬಂಗಾಳದಲ್ಲಿ ಬಿಜೆಪಿ ಪ್ರಭಾವ ತಡೆಯಲು ಟಿಎಂಸಿಯೊಂದಿಗೆ ಕೈ ಜೋಡಿಸಲು ಸಿಪಿಐ(ಎಂ), ಕಾಂಗ್ರೆಸ್​ಗೆ ಮಮತಾ ಬ್ಯಾನರ್ಜಿ ಆಹ್ವಾನ

ರಫೇಲ್​ ಒಪ್ಪಂದ ಸಂಬಂಧ ನಾವು ಮೌನವಾಗಿದ್ದು ನನ್ನ ಬಳಿ ಯಾವುದೇ ದಾಖಲಾತಿಗಳು ಇಲ್ಲದ ಕಾರಣಕ್ಕೆ. ಹಾಗೆಂದ ಮಾತ್ರಕ್ಕೆ ನಾನು ಕಾಂಗ್ರೆಸ್​ಅನ್ನು ವಿರೋಧಿಸುತ್ತಿದ್ದೇನೆ ಎಂದಲ್ಲ ಎಂದು ಸ್ಪಷ್ಟನೆ ನೀಡಿದರು.

HR Ramesh | news18
Updated:June 26, 2019, 10:17 PM IST
ಬಂಗಾಳದಲ್ಲಿ ಬಿಜೆಪಿ ಪ್ರಭಾವ ತಡೆಯಲು ಟಿಎಂಸಿಯೊಂದಿಗೆ ಕೈ ಜೋಡಿಸಲು ಸಿಪಿಐ(ಎಂ), ಕಾಂಗ್ರೆಸ್​ಗೆ ಮಮತಾ ಬ್ಯಾನರ್ಜಿ ಆಹ್ವಾನ
ಮಮತಾ ಬ್ಯಾನರ್ಜಿ
  • News18
  • Last Updated: June 26, 2019, 10:17 PM IST
  • Share this:
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಭಾವ ತಡೆಗಟ್ಟಲು ಸಿಪಿಐ(ಎಂ), ಕಾಂಗ್ರೆಸ್​ ಮತ್ತು ಟಿಎಂಸಿ ಕೈ ಜೋಡಿಸಬೇಕು ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿ ಭಾರತದ ಸಂವಿಧಾನ ಬದಲಿಸುತ್ತದೆ ಎಂಬ ಆತಂಕ ನನಗಿದೆ. ಅದಕ್ಕಾಗಿ ಬಿಜೆಪಿ ಹಿಮ್ಮೆಟ್ಟಿಸಲು ಎಡ ಪಕ್ಷ ಮತ್ತು ಕಾಂಗ್ರೆಸ್​ ಜೋಡಿಸಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಎಡ ಪಕ್ಷ ಮತ್ತು ಕಾಂಗ್ರೆಸ್​ನೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಲು ಸುತಾರಾಂ ಒಪ್ಪಿರಲಿಲ್ಲ. ಆದರೆ, ಇದೀಗ ಮೊದಲ ಬಾರಿಗೆ ಅವರೇ ಈ ಪಕ್ಷಗಳೊಂದಿಗೆ ಮೈತ್ರಿಯಾಗುವ ಬಗ್ಗೆ ಮಾತನಾಡಿರುವುದು ಆಶ್ಚರ್ಯ ಮೂಡಿಸಿದೆ.
ರಫೇಲ್ ಒಪ್ಪಂದದ ವಿಚಾರವಾಗಿ ಟಿಎಂಸಿ ಮೌನವಾಗಿದೆ ಎಂದು ಕಾಂಗ್ರೆಸ್​ ನಾಯಕರು ಆಪಾದಿಸಿದ್ದಾರೆ. ಈ ವಿಚಾರವಾಗಿಯೂ ಮಾತನಾಡಿದ ಮಮತಾ ಬ್ಯಾನರ್ಜಿ, ರಫೇಲ್​ ಒಪ್ಪಂದ ಸಂಬಂಧ ನಾವು ಮೌನವಾಗಿದ್ದು ನನ್ನ ಬಳಿ ಯಾವುದೇ ದಾಖಲಾತಿಗಳು ಇಲ್ಲದ ಕಾರಣಕ್ಕೆ. ಹಾಗೆಂದ ಮಾತ್ರಕ್ಕೆ ನಾನು ಕಾಂಗ್ರೆಸ್​ಅನ್ನು ವಿರೋಧಿಸುತ್ತಿದ್ದೇನೆ ಎಂದಲ್ಲ ಎಂದು ಸ್ಪಷ್ಟನೆ ನೀಡಿದರು.

ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಟಿಎಂಸಿಯಲ್ಲಿ ಶೇ.0.9 ಭ್ರಷ್ಟ ರಾಜಕಾರಣಿಗಳು ಇದ್ದಾರೆ. ಆದರೆ, ಅಷ್ಟೇ ಪ್ರಮಾಣದ ಪ್ರಾಮಾಣಿಕ ರಾಜಕಾರಣಿಗಳು ರಾಜ್ಯದಲ್ಲಿ ಇದ್ದಾರೆ. ಬಹುಶಃ ಭಾರತದ ಎಲ್ಲ ರಾಜ್ಯಗಳಿಗಿಂತ ಬಂಗಾಳದಲ್ಲಿ ಪ್ರಾಮಾಣಿಕರು ಇದ್ದಾರೆ ಎಂದು ಹೇಳಿದರು.

ಇದನ್ನು ಓದಿ: ರಾಹುಲ್​ ಗಾಂಧಿ ಪ್ರಧಾನಿ ಆಸೆಗೆ ಮತ್ತೊಮ್ಮೆ ತಣ್ಣೀರು ಎರಚಿದ ಮಮತಾ ಬ್ಯಾನರ್ಜಿನಮ್ಮಲ್ಲಿ ಲೋಕಾಯುಕ್ತ ಇದೆ. ನಿಮ್ಮ ಬಳಿ ಯಾವುದೇ ದೂರುಗಳಿದ್ದರೂ, ನೇರವಾಗಿ ಲೋಕಾಯುಕ್ತ ಬಳಿಗೆ ಹೋಗಿ. ಈಗಾಗಲೇ 6,741 ದೂರುಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಭಷ್ಟಾಚಾರದ ವಿರುದ್ಧ ಘೋಷಣೆ ಕೂಗಿದಾಗ ಹೀಗೆ ಹೇಳಿದರು.

ಬಂಗಾಲದ ಕಾಂಗ್ರೆಸ್​ ಅಧ್ಯಕ್ಷ ಸೋಮೆನ್ ಮಿತ್ರ ಅವರು ಈ ವಿಚಾರವಾಗಿ ಮಾತನಾಡಿ, ನಾವು ಬ್ಯಾನರ್ಜಿ ಅವರ ಹೇಳಿಕೆ ಮತ್ತು ಸಲಹೆಯಂತೆ ನಡೆಯುತ್ತಿಲ್ಲ. ವಿಧಾನಸಭೆಯಲ್ಲಿ ಬ್ಯಾನರ್ಜಿ ಮಾತಿಗೆ ಯಾವ ಅರ್ಥವೂ ಇಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಬ್ಯಾನರ್ಜಿ ಅವರು ತಾವು ಆರ್​ಎಸ್​ಎಸ್​ ಜೊತೆಗೆ ಇದ್ದೇವೆ ಎಂದು ಹೇಳಿದ್ದರು. ಆನಂತರ ಅಪ್ರಸ್ತುತವಾದವರ ಜೊತೆ ಸೇರುವುದಿಲ್ಲ ಎಂದು ಹೇಳಿದ್ದರು. ಇದೀಗ ಅದೇ ಅಪ್ರಸ್ತುತವಾದವರ ಜೊತೆಗೆ ಕೈಜೋಡಿಸಲು ಮುಂದಾಗಿದ್ದಾರೆ. ಬ್ಯಾನರ್ಜಿ ಸ್ಪಷ್ಟವಾಗಿ ಮಾತನಾಡಬೇಕು ಎಂದು ಹೇಳಿದ್ದಾರೆ.

ಸಿಪಿಐ (ಎಂ) ನಾಯಕ ಹನ್ನಾನ್​ ಮೊಲ್ಹಾ ಮಾತನಾಡಿ, ಹೀಗೆ ಮಾತನಾಡುವ ಮುನ್ನ ಅವರು ಯೋಚಿಸಬೇಕಿತ್ತು. ಮಮತಾ ಬ್ಯಾನರ್ಜಿ ಸ್ವಾರ್ಥ ನಾಯಕಿ. ಈಗ ಅವರು ಹೀಗೆ ಮಾತನಾಡುತ್ತಿರುವುದು ತಮ್ಮ ಅನುಕೂಲಕ್ಕಾಗಿ ಎಂದು ಹೇಳಿದ್ದಾರೆ.First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ