One Kidney Village: ಅಫ್ಘಾನ್​ನಲ್ಲಿ ನಿಂತಿಲ್ಲ ‘ತಾಲಿಬಾನ್​‘ ಅಟ್ಟಹಾಸ? ಹೆಂಡ್ತಿ, ಮಕ್ಕಳನ್ನ ಸಾಕಲು ಕಿಡ್ನಿ ಮಾರ್ತಿದ್ದಾರೆ ಜನ  

ಅಫ್ಘಾನಿಸ್ತಾನವು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿ ಹೋಗಿದೆ. ತಮ್ಮ ಕುಟುಂಬವನ್ನು ಪೋಷಿಸಲು, ದೇಶದಲ್ಲಿ ಹಲವಾರು ಜನರು ತಮ್ಮ ಅಂಗಾಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಅಫ್ಥಾನಿಸ್ತಾನದ ಜನ

ಅಫ್ಥಾನಿಸ್ತಾನದ ಜನ

  • Share this:
ಅಫ್ವಾನಿಸ್ತಾನವನ್ನು (Afghanistan) ಆಗಸ್ಟ್ 2021 ರಲ್ಲಿ ತಾಲಿಬಾನ್ (Taliban) ಸ್ವಾಧೀನಪಡಿಸಿಕೊಂಡ ಬಳಿಕ ಅಲ್ಲಿನ ಜನರ ಪರಿಸ್ಥಿತಿ ಹೇಗಾಗಿದೆ ಗೊತ್ತಾ? ಅಫ್ಘಾನಿಸ್ತಾನವು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿ ಹೋಗಿದೆ. ತಮ್ಮ ಕುಟುಂಬವನ್ನು (Family) ಪೋಷಿಸಲು, ದೇಶದಲ್ಲಿ ಹಲವಾರು ಜನರು ತಮ್ಮ ಅಂಗಾಗಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಪಶ್ಚಿಮ ನಗರವಾದ ಹೆರಾತ್‌ನಲ್ಲಿ ಹಲವರು ತಮ್ಮ ಕಿಡ್ನಿ ಮಾರಾಟ ಮಾಡಿ ತಮ್ಮ ಬದುಕು ನಡೆಸುತ್ತಿದ್ದಾರೆ. ಹಣಕ್ಕಾಗಿ ಕಿಡ್ನ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ 12ಕ್ಕೂ ಹೆಚ್ಚು ಮಂದಿ ತಮ್ಮ ಕಿಡ್ನಿ ಮಾರಾಟ ಮಾಡಿದ್ದಾರೆ. ಹೀಗಾಗಿ ಈ ಪ್ರದೇಶಕ್ಕೆ ‘ ಒಂದು ಕಿಡ್ನಿ ಗ್ರಾಮ‘(One Kidney Village) ಅಂತಾನೆ ಕರೆಯಲಾಗುತ್ತಿದೆ. ಇಲ್ಲಿ ಹಲವರು ಒಂದು ಕಿಡ್ನಿ ಮಾರಿ ಒಂದೇ ಕಿಡ್ನಿಯಲ್ಲಿ ಬದುಕುತ್ತಿದ್ದಾರೆ. ನಿಜಕ್ಕೂ ಇಂತಹ ಸ್ಥಿತಿ ಯಾರಿಗೂ ಬರಬಾರದು ಎನಿಸುವಂತಿದೆ ಈ ಇಲ್ಲಿನ ಜನರ ಪರಿಸ್ಥಿತಿ.

ಅಫ್ಘಾನಿಸ್ತಾನದಲ್ಲಿ ತಾಂಡವವಾಡ್ತಿದೆ ಬಡತನ

ತಾಲಿಬಾನ್​ ಅಫ್ಘಾನಿಸ್ತಾನವನ್ನು ವಶಪಡಿಕೊಂಡ ಬಳಿಕ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಆಗಿಬಿಟ್ಟಿದೆ. ಅಫ್ಘಾನಿಸ್ತಾನದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಜನರು ಕೆಲಸವಿಲ್ಲದೆ ಸಾಲದ ಹೊರೆಯಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಹೆಂಡತಿ, ಮಕ್ಕಳನ್ನು ಸಾಕಲು ಹೆಣಗಾಡುತ್ತಿರುವಾಗ. ನೂರುದ್ದೀನ್ ಎಂಬಾತ ನಮ್ಮ ಕುಟುಂಬ ಸಾಕಲು ನಮಗೆ ಕಿಡ್ನಿ ಮಾರಾಟ ಮಾಡೋದನ್ನ ಬಿಟ್ರಿ ಬೇರೆ ದಾರಿಯೇ ಇಲ್ಲ ಎಂದು ಇರಾನ್‌ನ ಗಡಿಗೆ ಸಮೀಪವಿರುವ ಎಎಫ್‌ಪಿಗೆ ತಿಳಿಸಿದ್ದಾರೆ. ಈ ಕಿಡ್ನಿ ಮಾರಾಟ ವಿಚಾರ ಪಶ್ಚಿಮ ನಗರವಾದ ಹೆರಾತ್‌ನಲ್ಲಿ ಎಷ್ಟು ವ್ಯಾಪಕವಾಗಿ ಹರಡಿದೆ ಅಂದ್ರೆ  ‘ಒಂದು ಕಿಡ್ನಿ ಗ್ರಾಮ‘ ಎಂದೇ ಅಡ್ಡ ಹೆಸರನ್ನು ಪಡೆದುಕೊಂಡಿದೆ..

"ಕುಟುಂಬ ಸಾಕಲು ನನಗೆ ಬೇರೆ ಆಯ್ಕೆ ಇರಲಿಲ್ಲ"

ಆರು ತಿಂಗಳ ಹಿಂದೆ ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನಿಸ್ತಾನವು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದೆ. ದೇಶವನ್ನು ಬೆಂಬಲಿಸಿದ ವಿದೇಶಿ ನೆರವು ಹಿಂತಿರುಗಲು ನಿಧಾನವಾಗಿದೆ, ಕಠಿಣವಾದ ಇಸ್ಲಾಮಿಸ್ಟ್‌ಗಳು ವಿದೇಶದಲ್ಲಿರುವ ಅಫ್ಘಾನ್ ಆಸ್ತಿಗಳನ್ನು ಕೂಡ ಕಡಿತಗೊಂಡಿದ್ದಾರೆ. 32 ವರ್ಷದ ನೂರುದ್ದೀನ್​ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ. ತಾನಿಬಾನ್​ ದೇಶವನ್ನ ವಶಪಡಿಸಿಕೊಂಡ ಬಳಿಕ ಆತನ ಸಂಬಳದಲ್ಲಿ 3000 ಕಡಿತಗೊಳಿಸಲು ಆರಂಭಿಸಿದ್ದಾರೆ. ಬಳಿಕ ಆತನ ಕೆಲಸವನ್ನೇ ಬಿಟ್ಟಿದ್ದಾನೆ.

ಇದನ್ನೂ ಓದಿ: Ukraine-Russia: ಭಾರತದ ಹುಡುಗಿಯರನ್ನು ರಷ್ಯಾ ಸೈನಿಕರು ಎಲ್ಲಿಗೋ ಕರ್ಕೊಂಡು ಹೋಗ್ತಿದಾರೆ, ಅವರೇನಾದ್ರು ಅಂತ ಗೊತ್ತಿಲ್ಲ!

‘ಶೂಗಳಿಗೆ ಪಾಲಿಸ್​ ಮಾಡ್ತಿದ್ದರೆ ಮಕ್ಕಳು‘

ಅಫ್ಘಾನಿಸ್ತಾನದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುವಂತಾಗಿದೆ. ಹೀಗಾಗಿ ಇಲ್ಲಿ ಜನ ಸಾವಿನಿಂದ ಸಾಯುವ ಬದಲುಕ ಕಿಡ್ನಿಯನ್ನ ಮಾರಿಯಾದ್ರು ಇರುವಷ್ಟು ದಿನ ಬದುಕೋಣ ಅಂತ ನಿರ್ಧರಿಸಿ ಬಿಟ್ಟಿದ್ದಾರೆ. ಮನೆಗಳಿಗೆ ಸರಿಯಾದ ಭದ್ರತೆ ಇಲ್ಲ, ಇನ್ನು ಕಿಡ್ನಿ ಮಾರಿರೋ ವ್ಯಕ್ತಿ ಹೇಳ್ತಾರೆ. ನನಗೆ ಕಿಡ್ನಿ ಮಾರಿದ ಮೇಲೆ ಹೆಚ್ಚು ಕೆಲಸ ಮಾಡಲು ಆಗ್ತಿಲ್ಲ. ಭಾರದ ವಸ್ತು ಎತ್ತುವಂತಿಲ್ಲ. ಇದೀಗ ನಾನು ನನ್ನ 12 ವರ್ಷದ ಮಗನನ್ನು ಅವಲಂಬಿಸಿದ್ದೇನೆ ಎಂದು. ಅಲ್ಲದೆ ನನ್ನ ಮಗ ದಿನಕ್ಕೆ 70 ಸೆಂಟ್ಸ್‌ಗೆ ಶೂಗಳಿಗೆ ಪಾಲಿಶ್ ಮಾಡ್ತಾನೆ ಇದರಿಂದಲೇ ನಮ್ಮ ಜೀವನ ನಡೆಸುತ್ತಿರೋದಾಗಿ ತಮ್ಮ ಕಷ್ಟದ ಬದುಕನ್ನು ವಿವರಿಸಿದ್ದಾರೆ. .

1,500 ಡಾಲರ್​ಗೆ ಒಂದು ಕಿಡ್ನಿ ಮಾರಾಟ

ನೂರುದ್ದಿನ್ ತನ್ನ ಕಿಡ್ನಿಯನ್ನು 1,500 ಡಾಲರ್​ಗಳಿಗೆ ಕಿಡ್ನಿ ಮಾರಾಟ ಮಾಡಿರೋದಾಗಿ ಹೇಳಿದ್ರು. ಮತ್ತೊಬ್ಬ ಮಹಿಳೆ ನಾನು ನನ್ನ ಕಿಡ್ನಿಯನ್ನು 2,50,000ಕ್ಕೆ ಅಫ್ಘಾನಿಗಳಿಗೆ (ಸುಮಾರು $2,500) ಮಾರಿದೆ ಎಂದು ಹೇಳಿದ್ದಾಳೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಂಗಾಗಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಕಾನೂನುಬಾಹಿರವಾಗಿದೆ. ಆದ್ರೆ ಅಫ್ಘಾನಿಸ್ತಾನದಲ್ಲಿ ಅಭ್ಯಾಸವು ಅನಿಯಂತ್ರಿತವಾಗಿದೆ.

ಇದನ್ನೂ ಓದಿ: Ukraineನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾದ ಕೇಂದ್ರ; ಗಡಿ ದೇಶಕ್ಕೆ ಈ 4 ಕೇಂದ್ರ ಸಚಿವರು

ಅಂಗಾಗಳನ್ನು ಹೇಗೆ ದಾನ ಮಾಡಬಹುದು ಅಥವಾ ಮಾರಾಟ ಮಾಡಬಹುದು ಎಂಬುದನ್ನು ನಿಯಂತ್ರಿಸಲು ಯಾವುದೇ ಕಾನೂನು ಇಲ್ಲ, ಆದರೆ ದಾನಿಗಳ ಒಪ್ಪಿಗೆ ಅಗತ್ಯ ಅಷ್ಟೆ ಎಂದು ಮಜಾರ್-ಐನಲ್ಲಿರುವ ಆಸ್ಪತ್ರೆಯ ಮಾಜಿ ಉನ್ನತ ಶಸ್ತ್ರಚಿಕಿತ್ಸಕ ಪ್ರೊಫೆಸರ್ ಮೊಹಮ್ಮದ್ ವಕಿಲ್ ಮತೀನ್ ಹೇಳಿದ್ದಾರೆ.
Published by:Pavana HS
First published: