HOME » NEWS » National-international » DESI CEO WANTS HIS EMPLOYEES TO KILL WORK RELATED CHATS POST 6 PM WINS TWITTERS RESPECT STG LG

ಸಂಜೆ 6 ಗಂಟೆ ಬಳಿಕ ಆಫೀಸ್​ ಕೆಲಸಕ್ಕೆ ಸಂಬಂಧಿಸಿದ ಮಾತು ಬೇಡವೆಂದ ಸಿಇಒ ನಿತಿನ್ ಕಾಮತ್; ಟ್ವಿಟ್ಟರ್‌ನಲ್ಲಿ ಮೆಚ್ಚುಗೆಯ ಮಹಾಪೂರ

ತನ್ನ ಈ ನಿರ್ಧಾರದಿಂದ ನೌಕರರ ಕೆಲಸದ ಹೊರೆ ಕಡಿಮೆ ಮಾಡುತ್ತದೆ ಮತ್ತು ಅವರಿಗೆ ಬರ್ನ್ಡ್‌ ಔಟ್‌ ಮತ್ತು ಬ್ರೈನ್‌ ಫೆಡ್‌ ಆಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಆಶಿಸಿದ್ದಾರೆ.

news18-kannada
Updated:May 12, 2021, 2:55 PM IST
ಸಂಜೆ 6 ಗಂಟೆ ಬಳಿಕ ಆಫೀಸ್​ ಕೆಲಸಕ್ಕೆ ಸಂಬಂಧಿಸಿದ ಮಾತು ಬೇಡವೆಂದ ಸಿಇಒ ನಿತಿನ್ ಕಾಮತ್; ಟ್ವಿಟ್ಟರ್‌ನಲ್ಲಿ ಮೆಚ್ಚುಗೆಯ ಮಹಾಪೂರ
ಸಿಇಒ ನಿತಿನ್ ಕಾಮತ್
  • Share this:
ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸ್ಪಷ್ಟ ಸಮತೋಲನ ಕಾಪಾಡಿಕೊಳ್ಳುವುದು ನಿಮ್ಮ ಯೋಗಕ್ಷೇಮಕ್ಕೆ ಬಹಳ ಮುಖ್ಯ. ಆದರೂ, ಕೋವಿಡ್ - 19 ಸಾಂಕ್ರಾಮಿಕ ಸಮಯದಲ್ಲಿ, ನಾವು ಈ ರಂಗದಲ್ಲಿ ಹೊಸ ಸವಾಲನ್ನು ಎದುರಿಸಿದ್ದೇವೆ. ನಾವು ವರ್ಕ್ ಫ್ರಮ್‌ ಹೋಂ ಮಾಡುತ್ತಿರುವುದರಿಂದ ಬಹುತೇಕರ ವೈಯಕ್ತಿಕ ಮತ್ತು ವೃತ್ತಿಪರ ಸ್ಥಳಗಳ ಸ್ಪಷ್ಟ ವ್ಯತ್ಯಾಸವು ಮಸುಕಾಗಿದೆ. ಇದು ಸಕಾರಾತ್ಮಕ ಬದಲಾವಣೆಯಾಗಿ ಪ್ರಾರಂಭವಾದಾಗ ಮತ್ತು ಸಾಂಕ್ರಾಮಿಕದಲ್ಲಿ ಸುರಕ್ಷಿತ ಸ್ಥಳದಿಂದ ಕೆಲಸ ಮಾಡುವ ಆರಾಮವನ್ನು ನಮಗೆ ನೀಡಿದ್ದರೂ, ಶೀಘ್ರದಲ್ಲೇ ಕೆಲಸದ ಒತ್ತಡ, ಅವಧಿ ಹೆಚ್ಚಾಗಿ ಹಲವರಿಗೆ ಕಷ್ಟಕರವಾದವು. ವರ್ಕ್ ಫ್ರಮ್‌ ಹೋಂ ಸೆಟಪ್‌ನಲ್ಲಿನ ಕೆಲಸದ ಹೊರೆ ಅತಿಯಾಗಿದೆ ಎಂದು ಜನರು ದೂರಿದ್ದಾರೆ ಮತ್ತು ಇದು ಅವರ ಮಾನಸಿಕ ಸ್ವಾಸ್ಥ್ಯಕ್ಕೆ ಧಕ್ಕೆ ತಂದಿದೆ.

ಕಂಪನಿಗಳಿಗೂ ಸಹ ಕೆಲಸದ ಹೊರೆಯ ಸಮತೋಲನವನ್ನು ಕಾಯ್ದುಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವಾಗ ಈ ಬದಲಾವಣೆಯು ಸುಲಭವಲ್ಲ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಸಮತೋಲನ ಮತ್ತು ವ್ಯತ್ಯಾಸವನ್ನು ಕಂಡುಕೊಳ್ಳಲು ತನ್ನ ಉದ್ಯೋಗಿಗಳಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ಭಾರತದ ಹಣಕಾಸು ಸೇವೆಗಳ ಕಂಪನಿ ಜೆರೋಧಾ ಸಂಜೆ 6 ಗಂಟೆಯ ಬಳಿಕ ಹಾಗೂ ರಜಾ ದಿನಗಳಲ್ಲಿ ತನ್ನ ಕೆಲಸ-ಸಂಬಂಧಿತ ಚ್ಯಾಟ್‌ ಅಥವಾ ಮಾತುಕತೆಯನ್ನು ಬಂದ್‌ ಮಾಡಲು ನಿರ್ಧರಿಸಿದೆ. ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ತೆಗೆದುಕೊಂಡ ನಿರ್ಧಾರವನ್ನು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ತನ್ನ ಈ ನಿರ್ಧಾರದಿಂದ ನೌಕರರ ಕೆಲಸದ ಹೊರೆ ಕಡಿಮೆ ಮಾಡುತ್ತದೆ ಮತ್ತು ಅವರಿಗೆ 'ಬರ್ನ್ಡ್‌ ಔಟ್‌' ಮತ್ತು 'ಬ್ರೈನ್‌ ಫೆಡ್‌' ಆಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಆಶಿಸಿದ್ದಾರೆ.

ಮಲ್ಟಿಟಾಸ್ಕಿಂಗ್‌ನಿಂದ ನೋವುಂಟಾಗುವುದಲ್ಲದೆ ಮೆದುಳಿಗೆ ಹಾನಿಯಾಗಬಹುದು ಎಂದು ಕಾಮತ್ ತಮ್ಮ ಟ್ವೀಟ್ ಥ್ರೆಡ್‌ನಲ್ಲಿ ಒತ್ತಿ ಹೇಳಿದ್ದಾರೆ. ಅದಕ್ಕಾಗಿಯೇ ಅವರು ಕೆಲಸದ ಮೇಲಿನ ಭಾರವನ್ನು ಕಡಿತಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇನ್ನು, ಸಿಇಒ ನಿತಿನ್ ಕಾಮತ್ ಅವರ ನಿರ್ಧಾರಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆಯನ್ನು ನೀಡಿದ್ದಾರೆ. ಅಲ್ಲದೆ, ಇದೇ ರೀತಿ ಉದ್ಯೋಗಿಗಳ ಕೆಲಸದ ಹೊರೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದೇ ರೀತಿಯ ಕ್ರಮಗಳ ಬಗ್ಗೆ ಯೋಚಿಸುವಂತೆ ಇತರ ಕಂಪನಿಗಳನ್ನು ಸಹ ಹಲವರು ಟ್ವೀಟ್‌ಗಳ ಮೂಲಕ ಆಗ್ರಹಿಸಿದ್ದಾರೆ. ಕಾಮತ್ ಅವರ ಟ್ವೀಟ್‌ಗೆ ಕೆಲವು ಪ್ರತಿಕ್ರಿಯೆಗಳು ಹೀಗಿದೆ ನೋಡಿ..
Youtube Video

ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಸಹ, ಜಗತ್ತು ಕಚೇರಿಯಲ್ಲೇ ಸಂಪೂರ್ಣವಾಗಿ ಕೆಲಸ ಮಾಡಲು ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹಲವರು ನಂಬುತ್ತಾರೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಶೀಘ್ರದಲ್ಲೇ ಹೈಬ್ರಿಡ್ ಸೆಟಪ್‌ಗೆ ಸ್ಥಳಾಂತರಗೊಳ್ಳಲಿದ್ದು, ಕೆಲವು ಉದ್ಯೋಗಿಗಳು ಕಚೇರಿಗಳಿಗೆ ಬರುತ್ತಾರೆ ಮತ್ತು ಇತರರು ಮನೆಯಿಂದ ಕೆಲಸ ಮಾಡುತ್ತಾರೆ ಎಂದು ಕೆಲ ಕಂಪನಿಗಳು ಹೇಳಿಕೊಂಡಿವೆ.
Published by: Latha CG
First published: May 12, 2021, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories