Afghanista: ತಾಲಿಬಾನ್ ಹೊಸ ಸರ್ಕಾರ ರಚನೆಯ ಬೆನ್ನಲ್ಲೆ ಅಫ್ಘಾನ್ ಉಪ ಪ್ರಧಾನಿ ಮುಲ್ಲಾ ಬರದಾರ್ ಬಂಡಾಯ

Pakistan ಪಾಕಿಸ್ತಾನವು ಅಫ್ಘಾನಿಸ್ತಾನದ ಸೇನೆಯನ್ನು ಹಾಗೂ ಗುಪ್ತಚರವನ್ನು ಪರೋಕ್ಷವಾಗಿ ನಿಯಂತ್ರಿಸಲು ತೊಡಗಿದ  ನಂತರ ಅಫ್ಘಾನಿಸ್ತಾನದ ಆರ್ಥಿಕತೆಯನ್ನು ನಿಯಂತ್ರಿಸಲು ಹವಣಿಸುತ್ತಿದೆ. ಗುರುವಾರ, ಪಾಕಿಸ್ತಾನವು ಅಫ್ಘಾನಿಸ್ತಾನಕ್ಕಾಗಿ ತನ್ನ ಆರ್ಥಿಕ ಯೋಜನೆಗಳನ್ನು ಘೋಷಿಸಿದೆ ಮತ್ತು ಪಾಕಿಸ್ತಾನದ ರೂಪಾಯಿಗಳಲ್ಲಿ ತಾಲಿಬಾನ್ ಜೊತೆ ದ್ವಿಪಕ್ಷೀಯ ವ್ಯಾಪಾರವನ್ನು ನಡೆಸಲು ನಿರ್ಧರಿಸಿದೆ.

ಅಫ್ಘಾನ್ ಉಪ ಪ್ರಧಾನಿ ಮುಲ್ಲಾ ಬರದಾರ್

ಅಫ್ಘಾನ್ ಉಪ ಪ್ರಧಾನಿ ಮುಲ್ಲಾ ಬರದಾರ್

 • Share this:
  Afghanistan: ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರದಾರ್ (Mullah Abdul Ghani Baradar) ಅವರು ತಾಲಿಬಾನ್ ಸರ್ಕಾರದ ಪ್ರಸ್ತುತ ಅಧಿಕಾರ ರಚನೆ ಹಾಗೂ ಒಂದಷ್ಟು ಪ್ರಮುಖ ನಾಯಕರು ಮತ್ತು ಮುಖವಾಣಿಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಬರದಾರ್ ಕಳೆದ ವಾರ ಹಕ್ಕಾನಿಗಳೊಂದಿಗೆ (Haqqanis) ವಾಗ್ವಾದಕ್ಕಿಳಿದ್ದರು, ನಂತರ ಅವರು ಕಂದಹಾರ್ (Kandhar)​  ತೆರಳಿದ್ದರು.

  ಹಮೀದ್ ಕರ್ಜಾಯ್ (Hamid Karzai) ಮತ್ತು ಅಬ್ದುಲ್ಲಾ ಅಬ್ದುಲ್ಲಾ ಅವರಂತಹ ತಾಲಿಬಾನ್ ಅಲ್ಲದ ಮುಖಗಳನ್ನು ಹಂಗಾಮಿ ಸರ್ಕಾರದಲ್ಲಿ ಸೇರಿಸಿಕೊಳ್ಳುವುದಾಗಿ ದೋಹಾ ತಂಡವು (Doha team) ಭರವಸೆ ನೀಡಿದ್ದರಿಂದ ಅವರು ಅತೃಪ್ತರಾಗಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.

  ಈ ಹಿಂದೆ ಅಫ್ಘಾನ್ ಸರ್ಕಾರ ರಚನೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ತಾಲಿಬಾನ್‌ನ ದೋಹಾ ತಂಡವು ಪಾಕಿಸ್ತಾನದ ವಿರುದ್ಧ ಅಸಮಾಧಾನಗೊಂಡಿತ್ತು ಮತ್ತು ಐಎಸ್‌ಐ ಮುಖ್ಯಸ್ಥ ಫೈಜ್ ಹಮೀದ್ ಅವರ ಪಾತ್ರವನ್ನು ಹಕ್ಕಾನಿಗಳಿಗೆ ನಿಯೋಜಿಸಲಾಗಿತ್ತು ಎಂದು ಸಿಎನ್ಎನ್ ನ್ಯೂಸ್ 18 (CNN News18 ) ಖಚಿತಪಡಿಸಿತ್ತು.

  ಸಿಎನ್ಎನ್-ನ್ಯೂಸ್ 18 ರೊಂದಿಗಿನ ವಿಶೇಷ ಸಂದರ್ಶನದಲ್ಲಿ, ತಾಲಿಬಾನ್ ವಕ್ತಾರ ಮೊಹಮ್ಮದ್ ಸುಹೇಲ್ ಅವರು ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲು "ತುರ್ತು ಸ್ಥಿತಿ" ಯಲ್ಲಿ ಅಫ್ಘಾನಿಸ್ತಾನದ ಪ್ರಸ್ತುತ ಸರ್ಕಾರವನ್ನು ರಚಿಸಲಾಗಿದೆ ಎಂದು ಹೇಳಿದ್ದರು.

  ಸರ್ಕಾರ ರಚನೆಯಲ್ಲಿ ಪಾಕಿಸ್ತಾನದ ಆಪಾದಿತ ಪಾತ್ರದ ಬಗ್ಗೆ, ಶಾಹೀನ್ ಹೇಳಿದರು, "ನಾವು ನೆರೆಯ ಮತ್ತು ಪ್ರಾದೇಶಿಕ ದೇಶಗಳೊಂದಿಗೆ ಸಂಬಂಧ ಹೊಂದಿದ್ದೇವೆ. ಆದ್ದರಿಂದ, ಅಫ್ಘಾನಿಸ್ತಾನದ ನಿರ್ಮಾಣದಲ್ಲಿ ನಾವು ಅವರ ಸಹಕಾರವನ್ನು ಬಯಸುತ್ತೇವೆ ಆದರೆ ಅದು ನಮ್ಮ ಆಂತರಿಕ ವಿಷಯಗಳಲ್ಲಿ ಅವರ ಹಸ್ತಕ್ಷೇಪ ಮಾಡಬೇಕು ಎಂಬುದು ಅರ್ಥವಲ್ಲ. ಅದು ನಮ್ಮ ನೀತಿಯಲ್ಲ, ನಮ್ಮ ನೀತಿ ಸ್ಪಷ್ಟವಾಗಿದೆ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ” ಎಂದು ಖಾರವಾಗಿ ನುಡಿದಿದ್ದರು.

  ಪಾಕಿಸ್ತಾನ ಐಎಸ್‌ಐನ ಹಮೀದ್ ಸೆಪ್ಟೆಂಬರ್ 11 ರಂದು ರಷ್ಯಾ, ಚೀನಾ, ಇರಾನ್ ಮತ್ತು ತಜಕಿಸ್ತಾನದ ಗುಪ್ತಚರ ಮುಖ್ಯಸ್ಥರನ್ನು ಭೇಟಿಯಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮತ್ತು "ಬದಲಾಗುತ್ತಿರುವ ಹೊಸ ಪ್ರಪಂಚದ" ಕುರಿತು ಮಾಹಿತಿ ನೀಡಿದ್ದರು ಎಂದು ಮೂಲಗಳು CNN-News18 ಗೆ ತಿಳಿಸಿವೆ.


  Pakistan ಪಾಕಿಸ್ತಾನವು ಅಫ್ಘಾನಿಸ್ತಾನದ ಸೇನೆಯನ್ನು ಹಾಗೂ ಗುಪ್ತಚರವನ್ನು ಪರೋಕ್ಷವಾಗಿ ನಿಯಂತ್ರಿಸಲು ತೊಡಗಿದ  ನಂತರ ಅಫ್ಘಾನಿಸ್ತಾನದ ಆರ್ಥಿಕತೆಯನ್ನು ನಿಯಂತ್ರಿಸಲು ಹವಣಿಸುತ್ತಿದೆ. ಗುರುವಾರ, ಪಾಕಿಸ್ತಾನವು ಅಫ್ಘಾನಿಸ್ತಾನಕ್ಕಾಗಿ ತನ್ನ ಆರ್ಥಿಕ ಯೋಜನೆಗಳನ್ನು ಘೋಷಿಸಿದೆ ಮತ್ತು ಪಾಕಿಸ್ತಾನದ ರೂಪಾಯಿಗಳಲ್ಲಿ ತಾಲಿಬಾನ್ ಜೊತೆ ದ್ವಿಪಕ್ಷೀಯ ವ್ಯಾಪಾರವನ್ನು ನಡೆಸಲು ನಿರ್ಧರಿಸಿದೆ.


  ಇದನ್ನೂ ಓದಿ: Congress: ಕಾಂಗ್ರೆಸ್​ Vs ಕಾಂಗ್ರೆಸ್​; ಇನ್ನೂ ಪುಟಿದೇಳದ ಕೇಂದ್ರ ನಾಯಕತ್ವ: ದುಸ್ಥಿತಿಯಲ್ಲಿ ಹಳೆಯ ಪಕ್ಷ

  ಈ ಮಧ್ಯೆ, ಹಕ್ಕಾನಿ ನೆಟ್ ವರ್ಕ್ ನ ನಾಯಕ ಅನಸ್ ಹಕ್ಕಾನಿ ಅಧಿಕಾರ ಹಂಚಿಕೆಯ ಕುರಿತಾಗಿ ಉಂಟಾದ ಜಗಳದಲ್ಲಿ ಆತ ಸಾವನ್ನಪ್ಪಿದ್ದಾನೆ ಎಂಬ ವದಂತಿಗಳ ನಡುವೆ ತಾನು ಜೀವಂತವಾಗಿದ್ದೇನೆ ಎಂದು ಸೆಪ್ಟೆಂಬರ್ 13 ರಂದು ಬರದಾರ್ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದರು. ಅಧ್ಯಕ್ಷೀಯ ಅರಮನೆಯಲ್ಲಿ ಎದುರಾಳಿ ತಾಲಿಬಾನ್ ಬಣಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಬರದಾರ್ ಗಾಯಗೊಂಡರು ಎಂದು ವರದಿಗಳು ಹೊರಬಂದಿದ್ದವು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: