ಫೇಸ್​ಬುಕ್​ನಲ್ಲಿ ಅಮ್ಮ ಕಳಿಸಿದ ಕೋಪದ ಇಮೋಜಿ ನೋಡಿದ ಮಗಳಿಗೆ ಹೃದಯಾಘಾತ​!

ತನ್ನ ತಾಯಿ ತನ್ನ ವಿಡಿಯೋ ನೋಡಿ ಕೋಪಿಸಿಕೊಂಡು ನೂರಾರು ಇಮೋಜಿಗಳನ್ನು ಕಳುಹಿಸಿದ್ದನ್ನು ನೋಡಿದ ಶಬೀನಾ ಫೇಸ್​ಬುಕ್​ನಲ್ಲಿ ತಾಯಿಯನ್ನು ಬ್ಲಾಕ್​ ಮಾಡಿದ್ದರು.

Sushma Chakre | news18-kannada
Updated:September 19, 2019, 11:18 AM IST
ಫೇಸ್​ಬುಕ್​ನಲ್ಲಿ ಅಮ್ಮ ಕಳಿಸಿದ ಕೋಪದ ಇಮೋಜಿ ನೋಡಿದ ಮಗಳಿಗೆ ಹೃದಯಾಘಾತ​!
ಪ್ರಾತಿನಿಧಿಕ ಚಿತ್ರ.
  • Share this:
ಸಾಮಾಜಿಕ ಜಾಲತಾಣಗಳು ಇಂದಿನ ಪೀಳಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಾಟ್ಸಾಪ್​, ಫೇಸ್​ಬುಕ್, ಟ್ವಿಟ್ಟರ್​, ಇನ್​ಸ್ಟಾಗ್ರಾಂಗಳು ಸಾಕಷ್ಟು ಜನರ ಅವಿಭಾಜ್ಯ ಅಂಗದಂತಾಗಿವೆ. ಬಹಳ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದ ಬ್ರಿಟನ್​ನ ಮಹಿಳೆಯೊಬ್ಬರು ತನ್ನ ತಾಯಿ ಫೇಸ್​ಬುಕ್​ನಲ್ಲಿ ಕೋಪದ ಇಮೋಜಿ ಕಳುಹಿಸಿದರು ಎಂಬ ಕಾರಣಕ್ಕೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಬೀನಾ ಮಿಯಾಹ್​ ಎಂಬ 33 ವರ್ಷದ ಮಹಿಳೆಗೆ ಆತಂಕ ಮತ್ತು ಒತ್ತಡದ ಸಮಸ್ಯೆಯಿತ್ತು. ತನ್ನ ಒಂಟಿತನವನ್ನು ಕಳೆಯಲು ಸೋಷಿಯಲ್ ಮೀಡಿಯಾದಲ್ಲಿ ಅವರು ಹೆಚ್ಚು ಸಕ್ರಿಯರಾಗಿದ್ದರು. ಆಕೆ ಸರ್ಕಸ್​​ಗೆ ಹೋದಾಗ ತೆಗೆದ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿದ್ದರು. ಅದನ್ನು ನೋಡಿದ ಆಕೆಯ ತಾಯಿ ಲೈಕ್ ಬಟನ್ ಒತ್ತುವ ಬದಲು ಕೋಪದ ಇಮೋಜಿಯನ್ನು ಒತ್ತಿದ್ದರು. ಅವರ ಐಪಾಡ್​ನ ಸಮಸ್ಯೆಯಿಂದ ನೂರಾರು ಆ್ಯಂಗ್ರಿ ಇಮೋಜಿಗಳು ಸೆಂಡ್​ ಆಗಿದ್ದವು.

ತನ್ನ ತಾಯಿ ತನ್ನ ವಿಡಿಯೋ ನೋಡಿ ಕೋಪಿಸಿಕೊಂಡು ನೂರಾರು ಇಮೋಜಿಗಳನ್ನು ಕಳುಹಿಸಿದ್ದನ್ನು ನೋಡಿದ ಶಬೀನಾ ಫೇಸ್​ಬುಕ್​ನಲ್ಲಿ ತಾಯಿಯನ್ನು ಬ್ಲಾಕ್​ ಮಾಡಿದ್ದರು. ತಾಯಿ ಫೋನ್​ ಮಾಡಿ ತನ್ನ ಐಪಾಡ್​ ಸಮಸ್ಯೆಯನ್ನು ಹೇಳಲು ಪ್ರಯತ್ನಿಸಿದರೂ ಶಬೀನಾ ಪೋನ್ ರಿಸೀವ್ ಕೂಡಲೇ ಅಮ್ಮನಿಗೆ ಬೈಯ್ದು ಫೋನ್ ಇಟ್ಟಿದ್ದರು. ಬೇರೆ ಮನೆಯಲ್ಲಿ ವಾಸಿಸುತ್ತಿದ್ದ ಶಬೀನಾಳ ತಾಯಿ ಬೆಳಗ್ಗೆ ಮಗಳನ್ನು ಸಮಾಧಾನ ಮಾಡಲು ಆಕೆಯ ಮನೆಗೆ ಬಂದಾಗ ಶಬೀನಾ ತನ್ನ ರೂಮಿನ ಹಾಸಿಗೆ ಮೇಲೆ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು.

ಬೆಂಗಳೂರು ಇಂಜಿನಿಯರ್​ ನೂತನ ಆವಿಷ್ಕಾರ; ಹೆಲ್ಮೆಟ್​, ಜಾಕೆಟ್​ಗೂ ಬಂತು ಎಸಿ!

ಹಿಂದಿನ ದಿನ ಸಂಜೆ ನಡೆದ ಗಲಾಟೆಯಿಂದ ಮತ್ತಷ್ಟು ಒತ್ತಡಕ್ಕೊಳಗಾಗಿದ್ದ ಶಬೀನಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತನ್ನ ಮಗಳ ಜೊತೆ ಜಗಳವಾಡಿದ ನಂತರ ಆಕೆಯೊಂದಿಗೆ ಮಾತನಾಡಲು ಎಷ್ಟೇ ಬಾರಿ ಕರೆ ಮಾಡಿದರೂ ಆಕೆ ಸ್ವೀಕರಿಸಿರಲಿಲ್ಲ. ಇದರಿಂದ ಬೇಸರಗೊಂಡ ಆಕೆಯ ತಾಯಿ ತಾವೇ ಖುದ್ದಾಗಿ ಮಗಳ ಮನೆಗೆ ಬಂದಿದ್ದರು. ಆದರೆ, ಅಷ್ಟರಲ್ಲಾಗಲೇ ಮಗಳು ಮತ್ತೆಂದೂ ಮಾತನಾಡಲಾಗದ ಸ್ಥಿತಿ ತಲುಪಿದ್ದರು.

First published: September 19, 2019, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading