HOME » NEWS » National-international » DEPRESSED OVER POWER BILL FARMER IN BIHARS ROHTAS DISTRICT ENDS LIFE STG LG

ಹೆಚ್ಚು ವಿದ್ಯುತ್​​​ ​ಬಿಲ್​​ನಿಂದ ಖಿನ್ನತೆಗೆ ಒಳಗಾದ ರೈತ ಆತ್ಮಹತ್ಯೆಗೆ ಶರಣು

ನಮ್ಮ ಉಳಿದ ನಾಲ್ಕು ಹೆಣ್ಣುಮಕ್ಕಳ ವಿವಾಹದ ಬಗ್ಗೆ ನನ್ನ ಪತಿ ಈಗಾಗಲೇ ಚಿಂತಿತರಾಗಿದ್ದರು. ಹೆಚ್ಚು ವಿದ್ಯುತ್ ಬಿಲ್‌ನಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ಅವರ ಪತ್ನಿ ದಾರಿಗಾಂವ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

news18-kannada
Updated:February 13, 2021, 1:29 PM IST
ಹೆಚ್ಚು ವಿದ್ಯುತ್​​​ ​ಬಿಲ್​​ನಿಂದ ಖಿನ್ನತೆಗೆ ಒಳಗಾದ ರೈತ ಆತ್ಮಹತ್ಯೆಗೆ ಶರಣು
ಸಾಂದರ್ಭಿಕ ಚಿತ್ರ
  • Share this:
ಬಿಹಾರ(ಫೆ.13):  ದೇಶದಲ್ಲಿ ಬಹುತೇಕ ವಸ್ತುಗಳಿಗೆ ಬೆಲೆ ಏರಿಕೆ ಆಗುತ್ತಲೇ ಇದೆ. ಇದೇ ರೀತಿ ವಿದ್ಯುತ್ ಬಿಲ್ ಬಗ್ಗೆ ಖಿನ್ನತೆಗೆ ಒಳಗಾದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ನೌಗೆನ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಈ ಘಟನೆಯ ನಂತರ ರೈತನ 14 ವರ್ಷ ವಯಸ್ಸಿನ ಮಗಳು ಸಹ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ಸಮಯೋಚಿತ ವೈದ್ಯಕೀಯ ಸಹಾಯದಿಂದಾಗಿ ಅಪ್ರಾಪ್ತ ಬಾಲಕಿಯನ್ನು ಉಳಿಸಲಾಗಿದೆ. 48 ವರ್ಷದ ಮೃತರಿಗೆ ಆರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಇಬ್ಬರು ವಿವಾಹಿತರು ಎಂದು ತಿಳಿದುಬಂದಿದೆ.

"ನಮ್ಮ ಉಳಿದ ನಾಲ್ಕು ಹೆಣ್ಣುಮಕ್ಕಳ ವಿವಾಹದ ಬಗ್ಗೆ ನನ್ನ ಪತಿ ಈಗಾಗಲೇ ಚಿಂತಿತರಾಗಿದ್ದರು. ಹೆಚ್ಚು ವಿದ್ಯುತ್ ಬಿಲ್‌ನಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ಅವರ ಪತ್ನಿ ದಾರಿಗಾಂವ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ರಾಯಚೂರು: ಆಸ್ತಿಗಾಗಿ ವ್ಯಕ್ತಿಯನ್ನು ಕೊಲೆಮಾಡಿ ಸುಟ್ಟಿದ್ದ ಆರೋಪಿಗಳ ಬಂಧನ

ರೈತನು ಪೂರ್ವಜರ ಸ್ವಲ್ಪ ಜಮೀನನ್ನು ಹೊಂದಿದ್ದರು. ಅದರಲ್ಲಿ ತರಕಾರಿಗಳನ್ನು ಬೆಳೆಸುತ್ತಿದ್ದನು ಮತ್ತು ವಿದ್ಯುತ್ ಪಂಪ್ ಸೆಟ್ ಅನ್ನು ಬಳಸುತ್ತಿದ್ದರು ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಉಮೇಶ್ ಕುಮಾರ್ ಮಾತನಾಡಿದ್ದಾರೆ.

2010 ರಲ್ಲಿ ರೈತ ವಿದ್ಯುತ್ ಸಂಪರ್ಕವನ್ನು ತೆಗೆದುಕೊಂಡಿದ್ದಾನೆ ಎಂದು ದಕ್ಷಿಣ ಬಿಹಾರ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಎಸ್‌ಬಿಪಿಡಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮ್ ಕುಮಾರ್ ಪ್ರವೀಣ್ ಹೇಳಿದ್ದಾರೆ. "ಅವರು 2014 ರಲ್ಲಿ 10,000 ರೂ., 2020 ರಲ್ಲಿ 10,000 ರೂ. ಮತ್ತು ಫೆಬ್ರವರಿ ಮೊದಲ ವಾರದಲ್ಲಿ 5,000 ರೂ. ಹಣ ಡೆಪಾಸಿಟ್‌ ಮಾಡಿದ್ದರು. ಮತ್ತು 23,000 ರೂ. ಬಾಕಿ ಉಳಿಸಿಕೊಂಡಿದ್ದರು. ಆದರೆ ಅವರ ಸಂಪರ್ಕ ಚಾಲನೆಯಲ್ಲಿದೆ. ಈ ಮೊತ್ತಕ್ಕಾಗಿ ಒಬ್ಬರು ತನ್ನ ಜೀವನವನ್ನು ಹೇಗೆ ಕೊನೆಗೊಳಿಸಬಹುದು” ಎಂದು ಪ್ರವೀಣ್ ಹೇಳಿದರು.
ಈ ಸಂಬಂಧ ಮುಂದಿನ ಕ್ರಮಕ್ಕಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಂದ ವಿವರವಾದ ವರದಿಯನ್ನು ಕೋರಿದ್ದೇನೆ ಎಂದು ರೋಹ್ತಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಕುಮಾರ್ ಹೇಳಿದ್ದಾರೆ.
Published by: Latha CG
First published: February 13, 2021, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories