ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಹಿನ್ನೆಲೆ, ಬಿಜೆಪಿ ಸಂಸದರಿಗೆ ಕಟ್ಟುನಿಟ್ಟಿನ ವಿಪ್

ಸೋಮವಾರದಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. ಇದಕ್ಕೆ ಅನುಮೋದನೆ ಪಡೆಯುವುದನ್ನು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದೆ.

Vijayasarthy SN | news18
Updated:December 8, 2019, 8:27 PM IST
ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಹಿನ್ನೆಲೆ, ಬಿಜೆಪಿ ಸಂಸದರಿಗೆ ಕಟ್ಟುನಿಟ್ಟಿನ ವಿಪ್
ಅಮಿತ್​ ಶಾ
  • News18
  • Last Updated: December 8, 2019, 8:27 PM IST
  • Share this:
ನವದೆಹಲಿ(ಡಿ. 08): ಸೋಮವಾರದಿಂದ ಬುಧವಾರದವರೆಗೆ ಲೋಕಸಭೆ ಅಧಿವೇಶನಕ್ಕೆ ಹಾಜರಾಗಬೇಕು ಎಂದು ತನ್ನ ಎಲ್ಲಾ ಸಂಸದರಿಗೆ ಬಿಜೆಪಿ ಕಟ್ಟುನಿಟ್ಟಿನ ವಿಪ್ ಜಾರಿಗೊಳಿಸಿದೆ. ಬಹಳ ಮುಖ್ಯವಾದ ಕೆಲ ಶಾಸನಗಳ ಪ್ರಕ್ರಿಯೆ ಇರುವುದರಿಂದ ಡಿ. 9ರಿಂದ ಮೂರು ದಿನಗಳವರೆಗೆ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಉಪಸ್ಥಿತರಿರಬೇಕು ಎಂದು ವಿಪ್​ನಲ್ಲಿ ಸೂಚಿಸಲಾಗಿದೆ.

“ಡಿಸೆಂಬರ್ 9, ಸೋಮವಾರದಿಂದ ಡಿ. 11, ಮಂಗಳವಾರದವರೆಗೆ ಲೋಕಸಭೆಯಲ್ಲಿ ಬಹಳ ಮಹತ್ವದ ಕೆಲ ಶಾಸನಗಳ ಚರ್ಚೆಯಾಗಲಿದೆ. ಅದರ ಮಂಡನೆಯಾಗಿ ಅನುಮೋದನೆಯ ಅಗತ್ಯವಿದೆ ಎಂದು ಈ ಮೂಲಕ ಲೋಕಸಭೆಯ ಎಲ್ಲಾ ಬಿಜೆಪಿ ಸದಸ್ಯರಿಗೂ ಮಾಹಿತಿ ನೀಡಲಾಗುತ್ತಿದೆ. ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಸದನದಲ್ಲಿ ಸಕರಾತ್ಮಕವಾಗಿ ಹಾಜರಾಗಿ ಸರ್ಕಾರವನ್ನು ಬೆಂಬಲಿಸಬೇಕೆಂದು ಕೋರಿಕೊಳ್ಳಲಾಗಿದೆ” ಎಂದು ಥ್ರೀ ಲೈನ್ ವಿಪ್ ಹೊರಡಿಸಲಾಗಿದೆ.

ಇದನ್ನೂ ಓದಿ: ಹೈದರಾಬಾದ್ ಎನ್​ಕೌಂಟರ್ ಪ್ರಕರಣ: ತನಿಖೆಗೆ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಎರಡು ಅರ್ಜಿ

ಸೋಮವಾರ ಕೇಂದ್ರ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದ್ಧಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆ ರೂಪಿಸಲಾಗಿದೆ. ಈ ಮಸೂದೆಯ ಬಗ್ಗೆ ವಿಪಕ್ಷಗಳು ಬಹಳ ಗಂಭೀರವಾದ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿವೆ. ಮಸೂದೆಗೆ ತಡೆಯೊಡ್ಡಲು ಸಾಕಷ್ಟು ಪ್ರಯತ್ನಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಮಸೂದೆಗೆ ಅನುಮೋದನೆ ಪಡೆಯುವುದನ್ನು ಬಹಳ ಗಂಭೀರವಾಗಿ ಪರಿಗಣಿಸಿ ತಮ್ಮ ಶಾಸಕರಿಗೆ ಮೂರು ಗೆರೆಯ ವಿಪ್ ಹೊರಡಿಸಿದೆ.

ಏನಿದು ಥ್ರೀ ಲೈನ್ ವಿಪ್?

ಪಕ್ಷವು ತನ್ನ ಶಾಸಕರಿಗೆ ಹೊರಡಿಸುವ ವಿಪ್​ಗಳಲ್ಲಿ ಮೂರು ವಿಧವಿವೆ. ಒನ್​ಲೈನ್, ಟೂ ಲೈನ್ ಮತ್ತು ಥ್ರೀ ಲೈನ್ ವಿಪ್ ಇವೆ. ಒನ್ ಲೈನ್ ವಿಪ್​ನಲ್ಲಿ ವೋಟ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ ಪಕ್ಷದ ಸದಸ್ಯರು ಸಭೆಗೆ ಹಾಜರಾಗಲೇಬೇಕು ಎಂಬ ಆದೇಶವೇನಿರುವುದಿಲ್ಲ. ಟೂ ಲೈನ್ ವಿಪ್​ನಲ್ಲಿ ಎಲ್ಲಾ ಸದಸ್ಯರು ಸಭೆಗೆ ಹಾಜರಾಗಲೇಬೇಕು ಎಂಬ ಆದೇಶ ಇರುತ್ತದೆಯೇ ವಿನಃ ಹೀಗೇ ಮತದಾನ ಮಾಡಬೇಕು ಎಂಬ ನಿರ್ದಿಷ್ಟ ಸೂಚನೆ ಇರುವುದಿಲ್ಲ. ಥ್ರೀ ಲೈನ್ ವಿಪ್​ನಲ್ಲಿ ಸದಸ್ಯರು ಸಭೆಗೆ ಹಾಜರಾಗಬೇಕು ಹಾಗೂ ಹೀಗೇ ಮತದಾನ ಮಾಡಬೇಕು ಎಂಬ ಕಟ್ಟಪ್ಪಣೆ ಇರುತ್ತದೆ. ಇದನ್ನು ಉಲ್ಲಂಘಿಸಿದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಸಾಧ್ಯವಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: December 8, 2019, 8:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading