• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Dibrugarh Bridge: 58 ವರ್ಷಗಳಷ್ಟು ಹಳೆಯ ಸೇತುವೆಯನ್ನು ಮುರಿಯಲು ನಿರ್ಧಾರ! ಹೊಸ ರೂಪದಲ್ಲಿ ನಿರ್ಮಾಣವಾಗಲಿದೆಯಂತೆ ಬ್ರಿಡ್ಜ್​

Dibrugarh Bridge: 58 ವರ್ಷಗಳಷ್ಟು ಹಳೆಯ ಸೇತುವೆಯನ್ನು ಮುರಿಯಲು ನಿರ್ಧಾರ! ಹೊಸ ರೂಪದಲ್ಲಿ ನಿರ್ಮಾಣವಾಗಲಿದೆಯಂತೆ ಬ್ರಿಡ್ಜ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

1965 ರಲ್ಲಿ ನಿರ್ಮಿಸಲಾದ ಅಸ್ಸಾಂನ ದಿಬ್ರುಗಢ್ ಠಾಣಾ ಚರಾಲಿಯಲ್ಲಿರುವ 58 ವರ್ಷ ಹಳೆಯದಾದ ಮಂಕೋಟ್ಟಾ ರೈಲ್ ಓವರ್ ಬ್ರಿಡ್ಜ್ ಕೆಡವುವ ಪ್ರಕ್ರಿಯೆ ಆರಂಭಗೊಂಡಿದೆ.

  • Share this:

1965 ರಲ್ಲಿ ನಿರ್ಮಿಸಲಾದ ಅಸ್ಸಾಂನ (Assan) ದಿಬ್ರುಗಢ್ (Dibrugarh) ಠಾಣಾ ಚರಾಲಿಯಲ್ಲಿರುವ 58 ವರ್ಷ ಹಳೆಯದಾದ ಮಂಕೋಟ್ಟಾ ರೈಲ್ ಓವರ್ ಬ್ರಿಡ್ಜ್ ಕೆಡವುವ ಪ್ರಕ್ರಿಯೆ ಆರಂಭಗೊಂಡಿದೆ. ಪುರಾತನ ಸೇತುವೆ ಕೆಡವುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ದಿಬ್ರುಗಢ್ ಶಾಸಕರಾದ ಪ್ರಶಾಂತ್ ಫುಕಾನ್ ವಹಿಸಿದ್ದು ಹಳೆಯ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ಪುನಃ ಸುಸಜ್ಜಿತವಾಗಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


ಸುಸಜ್ಜಿತವಾಗಿ ಹೊಸ ಸೇತುವೆ ನಿರ್ಮಾಣ


ಹಳೆಯ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ಇನ್ನಷ್ಟು ಎತ್ತರದಲ್ಲಿ ನಿರ್ಮಿಸಲಾಗುತ್ತದೆ ಎಂದು ಶಾಸಕರು ತಿಳಿಸಿದ್ದು, ಹೊಸ ಮಾರ್ಗಸೂಚಿಗಳ ಪ್ರಕಾರ, ರೈಲ್ವೇ ಮಾರ್ಗದ ವಿದ್ಯುದ್ದೀಕರಣಕ್ಕಾಗಿ ರೈಲ್ ಓವರ್ ಬ್ರಿಡ್ಜ್‌ನ ಎತ್ತರವು ರೈಲು ಮಾರ್ಗದಿಂದ 6.5 ಮೀಟರ್ ಇರಬೇಕು ಹಾಗಾಗಿ ಹಳೆಯ ಸೇತುವೆಯನ್ನು ಕೆಡವಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.


ಸೇತುವೆಯ ನಿರ್ಮಾಣಕ್ಕೆ ಎರಡು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿರುವ ಶಾಸಕರು, ಓವರ್‌ಬ್ರಿಡ್‌ನ ಕೆಳಗೆ ವಿದ್ಯುತ್ ರೈಲ್ವೇಯ ಲೈನ್ ಅನ್ನು ಸಾಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ChatGPT ಬಳಸಿಕೊಂಡು 100ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ದಾಖಲೆ ಸೃಷ್ಟಿಸಿದ ಲೇಖಕ!


ಜನರ ಪ್ರಯಾಣಕ್ಕಾಗಿ ಸರ್ವೀಸ್ ರಸ್ತೆ ನಿರ್ಮಾಣ


ಈ ಹಿಂದೆ ಹಳೆಯ ರೈಲ್ ಓವರ್ ಬ್ರಿಡ್ಜ್ ಎತ್ತರ 5.2 ಮೀಟರ್ ಇತ್ತು. 1965 ರಲ್ಲಿ ನಿರ್ಮಿಸಲಾದ ಸೇತುವೆಯು ದಿಬ್ರುಗರ್ ಪಟ್ಟಣದ ಐತಿಹಾಸಿಕ ಸೇತುವೆಯಾಗಿದ್ದು ಅದು ಥಾನಾ ಚರಾಲಿ ಚೌಕಿಡಿಂಘಿಯನ್ನು ಸಂಪರ್ಕಿಸುತ್ತದೆ. ಸೇತುವೆ ನಿರ್ಮಾಣ ಸಮಯದಲ್ಲಿ ಪ್ರಯಾಣಿಕರ ಹಾಗೂ ಪಾದಾಚಾರಿಗಳ ಅನುಕೂಲಕ್ಕಾಗಿ ಸೇತುವೆಯ ಎರಡೂ ಬದಿಗಳಲ್ಲಿ ಎರಡು ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.


ಇದನ್ನು ಜನರು ಓಡಾಟಕ್ಕಾಗಿ ಬಳಸಬಹುದು ಎಂದು ಶಾಸಕರು ತಿಳಿಸಿದ್ದಾರೆ. ಟ್ರಾಫಿಕ್ ಚಲನೆಯನ್ನು ಎರಡು ಮಾರ್ಗಗಳಾಗಿ ವಿಭಜಿಸಲಾಗುತ್ತದೆ ಎಂದು ತಿಳಿಸಿರುವ ಪ್ರಶಾಂತ್, ಜನರ ಓಡಾಟಕ್ಕಾಗಿ ತೊಂದರೆಯಾಗದಂತೆ ಸೇತುವೆಯ ನಿರ್ಮಾಣ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.


ಸಾಂದರ್ಭಿಕ ಚಿತ್ರ


ಹಳೆಯ ಸೇತುವೆಯಾದರೂ ಜನರ ಮನದಲ್ಲಿ ವಿಶೇಷ ಸ್ಥಾನ ಸಂಪಾದಿಸಿದೆ


ದಿಬ್ರುಗರ್ ಸೇತುವೆಯನ್ನು 1965 ರಲ್ಲಿ ನಿರ್ಮಿಸಲಾಗಿದ್ದು ಜನರ ಹೃದಯದಲ್ಲಿ ಈ ಸೇತುವೆಗೆ ವಿಶೇಷ ಸ್ಥಾನವಿದೆ ಎಂದು ಶಾಸಕರು ತಿಳಿಸಿದ್ದು ಸೇತುವೆಯನ್ನು ಕೆಡವುತ್ತಿರುವ ಈ ಸಮಯದಲ್ಲಿ ನಾನು ಕೂಡ ಭಾವುಕನಾಗಿರುವೆ ಎಂದು ತಿಳಿಸಿದ್ದಾರೆ. ಗತಕಾಲದ ನೆನಪುಗಳು ಮತ್ತು ಸಂಬಂಧಗಳ ಸಂಕೇತವಾದ ದಿಬ್ರುಗರ್ ಟೌನ್ ಮೇಲ್ಸೇತುವೆಯು ಸ್ಥಳೀಯ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.


ಹಳೆಯದರ ಜಾಗದಲ್ಲಿ ಹೊಸದನ್ನು ನಿರ್ಮಿಸಬೇಕು ಎಂದಾದಲ್ಲಿ ಹಳತನ್ನು ಕೆಡವಲೇಬೇಕು ಹಾಗಾಗಿ ಕೊಂಚ ಬೇಸರವಾದರೂ ಇನ್ನಷ್ಟು ಸುಸಜ್ಜಿತ ಸೇತುವೆಯ ನಿರ್ಮಾಣವನ್ನು ಜನರಿಗೆ ಒದಗಿಸಲಾಗುತ್ತದೆ ಎಂಬ ಸಂತೋಷವಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ. ಹಳೆಯ ಸೇತುವೆಯನ್ನು ರಾಮ್‌ಧಾರಿ ಶರ್ಮ ಹೆಸರಿನ ಕಾಂಟ್ರಾಕ್ಟರ್ ನಿರ್ಮಿಸಿದ್ದರು ಆ ಸಮಯದಲ್ಲಿ ಒಂದು ಇಟ್ಟಿಗೆಯ ಬೆಲೆ ಕೇವಲ 15 ಪೈಸೆಯಾಗಿತ್ತು ಎಂಬುದು ಪ್ರಶಾಂತ್ ಮಾತಾಗಿದೆ.


ಹಲವು ಚಿತ್ರಗಳನ್ನು ಚಿತ್ರೀಕರಿಸಲಾಗಿದೆ


ಜಯಂತ ಹಜಾರಿಕಾ ಅವರ ಪ್ರಸಿದ್ಧ ಗೀತೆ “ಕ್ಷುರಾತ್ ಮೊಗೊನ್ ಭೋಯಲ್ ರಾತಿ” ಅನ್ನು 1974 ರಲ್ಲಿ ದಿಬ್ರುಗಢ್ ಓವರ್ ಬ್ರಿಡ್ಜ್ ಮೇಲೆ ಚಿತ್ರಿಸಲಾಗಿದೆ. ಖ್ಯಾತ ನಿರ್ದೇಶಕ ಡ್ಯೂಟಿ ಬರುವಾ ಅವರ 'ಬ್ರಿಸ್ಟಿ' ಚಲನಚಿತ್ರವನ್ನು ದಿಬ್ರುಗಢದಲ್ಲಿನ ಇದೇ ಸೇತುವೆಯ ಮೇಲೆ ಚಿತ್ರೀಕರಿಸಲಾಗಿದ್ದು ಹೆಸರಾಂತ ನಟರಾದ ಬಿಜು ಫುಕಾನ್, ಬಿಷ್ಣು ಖಾರ್ಕೋಟಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು ಎಂಬುದು ವಿಶೇಷವಾಗಿದೆ.
ನಾಲ್ಕು ತಿಂಗಳ ಕಾಲ ರೈಲುಗಳ ಚಾಲನೆ ಬಂದ್


ಠಾಣಾ ಚರಾಲಿಯಲ್ಲಿ ಮಂಕೋಟ್ಟಾ ರೋಡ್ ಓವರ್ ಬ್ರಿಡ್ಜ್ (ROB) ಅನ್ನು ಕಿತ್ತುಹಾಕಲು ಮತ್ತು ಮರುನಿರ್ಮಾಣ ಮಾಡಲು ಮತ್ತು ಮರು-ವಿದ್ಯುತೀಕರಣ ಕಾರ್ಯಕ್ಕಾಗಿ ದಿಬ್ರುಗಢ್ ಟೌನ್ ರೈಲು ನಿಲ್ದಾಣಕ್ಕೆ (DBRT) ರೈಲುಗಳ ಚಲನೆಯನ್ನು ಭಾನುವಾರದಿಂದ ನಾಲ್ಕು ತಿಂಗಳವರೆಗೆ ಮುಚ್ಚಲಾಗಿದೆ.


ರೈಲ್ವೆ ಪ್ರಾಧಿಕಾರವು TSK (ತಿನ್ಸುಕಿಯಾ) ವಿಭಾಗದ DBRT (ದಿಬ್ರುಗಢ್ ಟೌನ್) ನಿಲ್ದಾಣದಲ್ಲಿ ನಾಲ್ಕು ತಿಂಗಳ ಕಾಲ 0/6-7 ಮತ್ತು RE ಗಾಗಿ ಮಂಕೋಟಾ ROB (ಥಾನಾ ಚರಲಿ ಓವರ್ ಬ್ರಿಡ್ಜ್) ಅನ್ನು ಕಿತ್ತುಹಾಕಲು ಮತ್ತು ಮರುನಿರ್ಮಾಣ ಮಾಡಲು ನಾಲ್ಕು ತಿಂಗಳ ಟ್ರಾಫಿಕ್ ಮತ್ತು ಪವರ್ ಬ್ಲಾಕ್ ಅನ್ನು ಅನುಮೋದಿಸಿದೆ.

First published: