ಮಹಿಳೆ ಎದುರು ಪ್ಯಾಂಟ್​ ಬಿಚ್ಚಿನಿಂತ ಅಮೆಜಾನ್​ ಡೆಲಿವರಿ ಏಜೆಂಟ್​; ವಶೀಕರಣ ಮಾಡಿ ರೇಪ್​?

ಮಹಿಳೆಯೋರ್ವಳು ಅಮೆಜಾನ್​ನಲ್ಲಿ ಕೆಲ ವಸ್ತುಗಳನ್ನು ಆರ್ಡರ್​ ಮಾಡಿದ್ದರು. ಐದು ಚಿಕ್ಕ ಚಿಕ್ಕ ಬಾಕ್ಸ್​ಗಳಲ್ಲಿ ಅದನ್ನು ಸೋಮವಾರ ಡೆಲಿವರಿ ಮಾಡಲಾಗಿತ್ತು. ಆದರೆ ವಸ್ತುಗಳು ಸರಿ ಇಲ್ಲ ಎನ್ನುವ ಕಾರಣಕ್ಕೆ ಮಹಿಳೆ ಅವುಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದರು.

news18-kannada
Updated:October 10, 2019, 11:54 AM IST
ಮಹಿಳೆ ಎದುರು ಪ್ಯಾಂಟ್​ ಬಿಚ್ಚಿನಿಂತ ಅಮೆಜಾನ್​ ಡೆಲಿವರಿ ಏಜೆಂಟ್​; ವಶೀಕರಣ ಮಾಡಿ ರೇಪ್​?
ಅಮೇಜಾನ್​
  • Share this:
ನವದೆಹಲಿ (ಅ.10): ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಕ್ಕೆ ಪ್ರಯತ್ನಪಟ್ಟ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ಅಮೆಜಾನ್​ ಡೆಲಿವರಿ ಏಜೆಂಟ್​ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಚಾರ ಸದ್ಯ ಭಾರೀ ಸಂಚಲನ ಸೃಷ್ಟಿಸಿದೆ.

ನೊಯ್ಡಾದಲ್ಲಿ ಈ ಘಟನೆ ನಡೆದಿದ್ದು, 43 ವರ್ಷದ ಮಹಿಳೆ ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಸಂತ್ರಸ್ತೆ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅಮೆಜಾನ್​ನಲ್ಲಿ ಕೆಲ ವಸ್ತುಗಳನ್ನು ಆರ್ಡರ್​ ಮಾಡಿದ್ದರು. ಐದು ಚಿಕ್ಕ ಚಿಕ್ಕ ಬಾಕ್ಸ್​ಗಳಲ್ಲಿ ಅದನ್ನು ಸೋಮವಾರ ಡೆಲಿವರಿ ಮಾಡಲಾಗಿತ್ತು. ಆದರೆ ವಸ್ತುಗಳು ಸರಿ ಇಲ್ಲ ಎನ್ನುವ ಕಾರಣಕ್ಕೆ ಮಹಿಳೆ ಅವುಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದರು.

ಮಂಗಳವಾರ ಇದನ್ನು ಹಿಂಪಡೆಯಲು ಅಮೆಜಾನ್​ ಏಜೆಂಟ್​ ಬಂದಿದ್ದ. ಈತ ನಾಲ್ಕು ಬಾಕ್ಸ್​​ಗಳನ್ನು ಮಾತ್ರ ಹಿಂಪಡೆಯಲು ಒಪ್ಪಿದ್ದ. ಈ ವಿಚಾರಕ್ಕೆ ಮಹಿಳೆ ಹಾಗೂ ಆತನ ನಡುವೆ ಜಗಳ ಏರ್ಪಟ್ಟಿತ್ತು. ನಂತರ ಈ ಬಗ್ಗೆ ಅಮೆಜಾನ್​ಗೆ ಆಕೆ ದೂರು ನೀಡಿದ್ದಳು.

ಮರುದಿನ ಮತ್ತದೇ ಏಜೆಂಟ್​ ಬಂದಿದ್ದ. ಈ ವೇಳೆ ಸಿಟ್ಟಾದ ಮಹಿಳೆ ಬೇರೆ ಏಜೆಂಟ್​ ಬಂದರೆ ಮಾತ್ರ ವಸ್ತುವನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. ನಂತರ ಮನೆ ಒಳಗೆ ನುಗ್ಗಿದ ಏಜೆಂಟ್​ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲ, ಸಂತ್ರಸ್ತೆ ಎದುರು ಪ್ಯಾಂಟ್​ ಬಿಚ್ಚಿ ನಿಂತಿದ್ದ. ಅಲ್ಲದೆ, ಆತ ವಶೀಕರಣ ಮಾಡಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಮೋದಿ ಉಪನಾಮೆಗಳೆಲ್ಲಾ ಕಳ್ಳರು ಎಂದಿದ್ದ ರಾಹುಲ್ ಗಾಂಧಿ; ಮಾನಹಾನಿ ಪ್ರಕರಣ ಸಂಬಂಧ ಇಂದು ನ್ಯಾಯಾಲಯಕ್ಕೆ ಹಾಜರಿ

ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಿತ್ರ ಎಂದರೆ, ಆರೋಪಿ ಸಂತ್ರಸ್ತೆ ಬಳಿ ಭೂಪೆಂದ್ರ ಪಾಲ್​ ಎಂದು ಗುರುತಿಸಿಕೊಂಡಿದ್ದ. ಆದರೆ, ರಿಜಿಸ್ಟರ್​ ಬುಕ್​ನಲ್ಲಿ ಆತ ಬೆರೆಯದೇ ಹೆಸರನ್ನು ಬರೆದಿದ್ದ ಎನ್ನಲಾಗಿದೆ.

First published: October 10, 2019, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading