ಚಿಕಿತ್ಸೆ ಮುಗಿಸಿಕೊಂಡು ಅಮೆರಿಕದಿಂದ ಭಾರತಕ್ಕೆ ಮರಳಿದ ಹಣಕಾಸು ಸಚಿವ ಅರುಣ್ ಜೇಟ್ಲಿ

ಜೇಟ್ಲಿ (66) ಅವರು ಅನಾರೋಗ್ಯ ಕಾರಣದಿಂದ ನಾರ್ಥ್​ ಬ್ಲಾಕ್​ನಲ್ಲಿರುವ ತಮ್ಮ ಆಫೀಸ್​ಗೆ ಬರುವುದನ್ನು ಕಳೆದ ವರ್ಷದ ಏಪ್ರಿಲ್​ನಲ್ಲೇ ಕೊನೆಗೊಳಿಸಿದ್ದರು. ಅದರ ಮರುತಿಂಗಳೇ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾದರು. ಆನಂತರ ಆಗಸ್ಟ್​ನಲ್ಲಿ ತಮ್ಮ ಕಚೇರಿ ಬಂದರಾದರೂ ಜನವರಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದರು.

HR Ramesh | news18
Updated:February 9, 2019, 5:09 PM IST
ಚಿಕಿತ್ಸೆ ಮುಗಿಸಿಕೊಂಡು ಅಮೆರಿಕದಿಂದ ಭಾರತಕ್ಕೆ ಮರಳಿದ ಹಣಕಾಸು ಸಚಿವ ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
  • News18
  • Last Updated: February 9, 2019, 5:09 PM IST
  • Share this:
ನವದೆಹಲಿ: ಅನಾರೋಗ್ಯ ಕಾರಣದಿಂದ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಹಣಕಾಸು ಸಚಿವ ಅರುಣ್​ ಜೇಟ್ಲಿ ಇಂದು ಭಾರತಕ್ಕೆ ಮರಳಿದ್ದಾರೆ. ತಾಯ್ನಾಡಿಗೆ ವಾಪಸ್ಸಾಗಿರುವುದು ಸಂತೋಷವಾಗಿದೆ ಎಂದು  ಭಾರತಕ್ಕೆ ಬಂದ ತಕ್ಷಣ ಮೊದಲ ಬಾರಿಗೆ ಟ್ವಿಟ್ ಮಾಡಿದ್ದಾರೆ. ಚಿಕಿತ್ಸೆ ಕಾರಣದಿಂದ ಕಳೆದ ವಾರ ಅರುಣ್​ ಜೇಟ್ಲಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಮಾಡಲು ಸಾಧ್ಯವಾಗಿರಲಿಲ್ಲ. ಇವರ ಬದಲಿಗೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್​ ಆಯವ್ಯಯ ಮಂಡಿಸಿದ್ದರು. ಲೋಕಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಬಾಕಿ ಇರುವಂತೆ ಜೇಟ್ಲಿ ದೇಶಕ್ಕೆ ವಾಪಸ್ಸಾಗಿದ್ದಾರೆ.ಇದನ್ನು ಓದಿ: ಅರುಣ್ ಜೇಟ್ಲಿ ಮನದಾಳದ ಮಾತು

ಜೇಟ್ಲಿ (66) ಅವರು ಅನಾರೋಗ್ಯ ಕಾರಣದಿಂದ ನಾರ್ಥ್​ ಬ್ಲಾಕ್​ನಲ್ಲಿರುವ ತಮ್ಮ ಆಫೀಸ್​ಗೆ ಬರುವುದನ್ನು ಕಳೆದ ವರ್ಷದ ಏಪ್ರಿಲ್​ನಲ್ಲೇ ಕೊನೆಗೊಳಿಸಿದ್ದರು. ಅದರ ಮರುತಿಂಗಳೇ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾದರು. ಆನಂತರ ಆಗಸ್ಟ್​ನಲ್ಲಿ ತಮ್ಮ ಕಚೇರಿ ಬಂದರಾದರೂ ಜನವರಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದರು.ಜೇಟ್ಲಿ ಅನುಪಸ್ಥಿತಿಯಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಜವಾಬ್ದಾರಿಯನ್ನು ಕೇಂದ್ರ ಸಚಿವ ಪಿಯೂಷ್​ ಗೋಯೆಲ್ ನಿಭಾಯಿಸಿದ್ದರು. ಚುನಾವಣೆ ವರ್ಷದ  ಮಧ್ಯಂತರ ಬಜೆಟ್​ ಅನ್ನು ಮಂಡಿಸಿದ್ದರು. ಈ ಬಜೆಟ್​ನಲ್ಲಿ ಸಣ್ಣ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ 75 ಸಾವಿರ ಕೋಟಿಯ ಯೋಜನೆ ಮತ್ತು 5 ಲಕ್ಷದವರೆಗೆ ಸಂಬಳ ಪಡೆಯುವ ವೇತನದಾರರನ್ನು ತೆರಿಗೆಮುಕ್ತಗೊಳಿಸಿ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಣೆ ಮಾಡಿದ್ದರು.

First published:February 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading