ದೆಹಲಿ: ಶ್ರದ್ಧಾ ವಾಕರ್ ಹತ್ಯಾಕಾಂಡದ (Shraddha Walkar Murder Case) ಬೆನ್ನಲ್ಲೇ ಇನ್ನೊಂದು ಅಂತಹದೇ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಗಂಡನನ್ನು ಮಗನ ಸಹಾಯದಿಂದ ಕೊಂದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತನ್ನ ಗಂಡ ಅನೈತಿಕ ಸಂಬಂಧ (Extramarital Affair) ಹೊಂದಿದ್ದ ಎಂಬ ಕಾರಣಕ್ಕೆ ಮಗನ ಸಹಾಯದಿಂದ ಗಂಡನನ್ನು ಮಹಿಳೆ ಕೊಂದಿದ್ದಳು. ಅಲ್ಲದೇ ಗಂಡನ ಮೃತದೇಹವನ್ನು 22 ತುಂಡು ಮಾಡಿ ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟಿದ್ದಳು. ಗಂಡನ ಮೃತದೇಹದ ತುಂಡುಗಳನ್ನು ದೆಹಲಿಯ (Delhi Police) ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಗಂಡನ ದೇಹದ ಭಾಗಗಳು ಪತ್ತೆಯಾದ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ವೀಕ್ಷಿಸಲಾಗಿದೆ. ಮಹಿಳೆ ಮತ್ತು ಆಕೆಯ ಮಗ ಹಲವು ರಾತ್ರಿಗಳಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿರುವುದು ಸಿಸಿಟಿವಿ ವಿಡಿಯೋಗಳಲ್ಲಿ ಪತ್ತೆಯಾಗಿದೆ. ಪೊಲೀಸರು ತೀವ್ರ ತನಿಖೆ ನಡೆಸಿದಾಗ, ಪೂರ್ವ ದೆಹಲಿಯ ಪಾಂಡವ್ ನಗರದ ನಿವಾಸಿ ಅಂಜನ್ ದಾಸ್ ಸುಮಾರು ಆರು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ ಎಂಬುದು ಪತ್ತೆಯಾಗಿದೆ. ಆದರೂ ವ್ಯಕ್ತಿಯ ಕುಟುಂಬವು ಪೊಲೀಸ್ ದೂರು ದಾಖಲಿಸಿಲ್ಲ ಎಂದು ಸಹ ತಿಳಿದುಬಂದಿದೆ.
ಶ್ರದ್ಧಾ ವಾಕರ್ ಕೊಲೆಯಿಂದ ಬೆಚ್ಚಿಬಿದ್ದಿದ್ದ ದೆಹಲಿಯನ್ನು ಇನ್ನೊಂದು ಭೀಕರ ಹತ್ಯಾಕಾಂಡ ಮತ್ತೊಮ್ಮೆ ಭೀತಿಗೊಳ್ಳುವಂತೆ ಮಾಡಿದೆ.
ಇದೇ ಕುಟುಂಬದಿಂದ ಮತ್ತೆ ಬೆಚ್ಚಿಬಿದ್ದ ದೆಹಲಿ!
ದಾಸ್ ಎಂಬ ವ್ಯಕ್ತಿಯ ಹೆಂಡತಿಯಾದ ಪೂನಮ್ ಮತ್ತು ದೀಪಕ್ ಎಂಬುವವರೇ ಈ ಭೀಕರ ಕೊಲೆ ಮಾಡಿದ್ದು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಗಂಡ ದಾಸ್ ಎಂಬ ವ್ಯಕ್ತಿಗೆ ನಿದ್ರೆ ಗುಳಿಗೆ ಹಾಕಿ ಆತ ಮಂಪರಿನಲ್ಲಿ ಇದ್ದಾಗಲೇ ಭೀಕರವಾಗಿ ಕೊಲೆ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪನ ಮೃತದೇಹವನ್ನು ಕವರ್ನಲ್ಲಿ ಸುತ್ತಿದ ಮಗ!
ತನ್ನ ಅಮ್ಮನ ಜೊತೆ ಸೇರಿಕೊಂಡು ಅಪ್ಪನನ್ನೇ ಕೊಲೆ ಮಾಡಿದ ಮಗ ಅಪ್ಪನ ಮೃತದೇಹವನ್ನು ಪೀಸ್ ಪೀಸ್ ಮಾಡಿ ಕವರ್ನಲ್ಲಿ ಸುತ್ತಿದ್ದಾನೆ. ಆ ನಂತರ ಕವರ್ನ್ನು ಎಳೆದುಕೊಂಡು ವಿಲೇವಾರಿ ಮಾಡಿದ್ದಾನೆ. ಆತನ ಅಮ್ಮ, ಅಂದರೆ ಕೊಲೆಗೀಡಾದ ವ್ಯಕ್ತಿಯ ಹೆಂಡತಿ ಮಗನನ್ನು ಹಿಂಬಾಲಿಸಿದ್ದಾಳೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ವಾಕರ್ ಹತ್ಯಾಕಾಂಡ; ತನಿಖೆ ಎಲ್ಲಿಯವರೆಗೆ ಬಂತು?
ದೇಶವನ್ನೇ ಬೆಚ್ಚಿ ಬೀಳಿಸಿದ ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾ ವಾಕರ್ನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟ ಬಳಿಕ ಡೇಟಿಂಗ್ ಮಾಡಿದ ಮಹಿಳೆಯನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು ಕತ್ತರಿಸಿದ ದೇಹದ ಭಾಗಗಳು ಇನ್ನೂ ತನ್ನ ರೆಫ್ರಿಜರೇಟರ್ನಲ್ಲಿ ಇರುವಾಗಲೇ ಅಫ್ತಾಬ್ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್ಗೆ ಕರೆತಂದಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಈ ಮಹಿಳೆಯನ್ನು ಸಂಪರ್ಕಿಸಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Azamgarh: ಶ್ರದ್ಧಾ ಮಾದರಿಯಂತೆ ಮತ್ತೊಂದು ಹತ್ಯೆ: ಮಹಿಳೆಯನ್ನು 8 ಪೀಸ್ ಮಾಡಿದ ಪ್ರಿಯಕರ!
ಆಫ್ತಾಬ್ ಮೊಬೈಲ್ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕವೇ ಈ ಮಹಿಳೆಯನ್ನು ಸಹ ಪರಿಚಯ ಮಾಡಿಕೊಂಡಿದ್ದ. ಇದೇ ಡೇಟಿಂಗ್ ಆ್ಯಪ್ ಮೂಲಕವೇ ಅಫ್ತಾಬ್ ಶ್ರದ್ಧಾಳನ್ನು ಪರಿಚಯ ಮಾಡಿಕೊಂಡಿದ್ದ.
ಡೇಟಿಂಗ್ ಆ್ಯಪ್ ಪ್ರಧಾನ ಕಚೇರಿಗೆ ಪತ್ರ
ದೆಹಲಿ ಪೊಲೀಸರು ಡೇಟಿಂಗ್ ಆ್ಯಪ್ ಬಂಬಲ್ನ ಅಮೆರಿಕದ ಪ್ರಧಾನ ಕಛೇರಿಗೆ ಪತ್ರ ಬರೆದು ಆಫ್ತಾಬ್ನ ವಿವರಗಳನ್ನು ಕೋರಿದ್ದಾರೆ. ಇದರ ನಡುವೆಯೇಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್ಎ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಶನಿವಾರ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ