ಮೆಟ್ರೋ ಇಳಿದು ಮನೆಗೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಸಬ್​ ಇನ್ಸ್​​ಪೆಕ್ಟರ್​ ಪ್ರೀತಿ ಅಹ್ಲವಾತ್​ (26) ಮೃತ ಅಧಿಕಾರಿ. ಅವರು ಶುಕ್ರವಾರ ರಾತ್ರಿ ಮೆಟ್ರೋ ನಿಲ್ದಾಣದಿಂದ ಮನೆಗೆ ನಡೆದು ತೆರಳುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಮೃತ ಪ್ರೀತಿ

ಮೃತ ಪ್ರೀತಿ

  • Share this:
    ನವದೆಹಲಿ (ಫೆ.8): ಸಾಮಾನ್ಯರಿಗೆ ರಕ್ಷಣೆ ನೀಡುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಆದರೆ, ರಕ್ಷಣೆ ನೀಡುವ ಪೊಲೀಸರನ್ನೇ ಗುಂಡಿಕ್ಕಿ ಕೊಂದು ಬಿಟ್ಟರೆ? ದೆಹಲಿಯಲ್ಲಿ ಇದೇ ರೀತಿ ಘಟನೆ ನಡೆದಿದೆ. ಮಹಿಳಾ ಪೊಲೀಸ್​ ಅಧಿಕಾರಿಯನ್ನು ಗುಂಡಿಕ್ಕಿ ಕೊಂದಲಾಗಿದೆ.

    ಸಬ್​ ಇನ್ಸ್​​ಪೆಕ್ಟರ್​ ಪ್ರೀತಿ ಅಹ್ಲವಾತ್​ (26) ಮೃತ ಅಧಿಕಾರಿ. ಅವರು ಶುಕ್ರವಾರ ರಾತ್ರಿ ಮೆಟ್ರೋ ನಿಲ್ದಾಣದಿಂದ ಮನೆಗೆ ನಡೆದು ತೆರಳುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರೀತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರೀತಿ ಮೇಲೆ ದಾಳಿ ಮಾಡಿದವರನ್ನು ಗುರುತಿಸಲಾಗಿದೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. 2018ರಲ್ಲಿ ಪ್ರೀತಿ ದೆಹಲಿ ಪೊಲೀಸ್​ ಪಡೆ ಸೇರಿದ್ದರು. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಅದಕ್ಕೂ ಮೊದಲು ಈ ಗುಂಡಿನ ದಾಳಿ ನಡೆದಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
    First published: