Delhi Rains: ದೆಹಲಿಯಲ್ಲಿ ಧಾರಾಕಾರ ಮಳೆ, ನದಿಗಳಂತಾದ ರಸ್ತೆಗಳು; ಜನಜೀವನ ಸಂಪೂರ್ಣ ಅಸ್ತವ್ಯಸ್ತ

Delhi Rain: ದೆಹಲಿಯ ಪ್ರಗತಿ ಮೈದಾನ, ಐಟಿಒ, ಲಜಪತ್ ನಗರ ಮತ್ತು ಜಂಗಪುರದ ಪ್ರಮುಖ ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ ಮಳೆಯಿಂದ ನೀರು ತುಂಬಿಕೊಂಡಿದೆ.

ದೆಹಲಿಯಲ್ಲಿ ಭಾರೀ ಮಳೆ

ದೆಹಲಿಯಲ್ಲಿ ಭಾರೀ ಮಳೆ

  • Share this:
ನವದೆಹಲಿ(ಆ.21): ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ  ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮುಂದಿನ ಎರಡು ಗಂಟೆಗಳಲ್ಲಿ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯ ಪ್ರಗತಿ ಮೈದಾನ, ಐಟಿಒ, ಲಜಪತ್ ನಗರ ಮತ್ತು ಜಂಗಪುರದ ಪ್ರಮುಖ ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ ಮಳೆಯಿಂದ ನೀರು ತುಂಬಿಕೊಂಡಿದ್ದು, ಇದರ ಪರಿಣಾಮವಾಗಿ, ವಾಹನ ಸವಾರರು ಟ್ರಾಫಿಕ್ ಸಮಸ್ಯೆ ಎದುರಿಸಿದ್ದಾರೆ.

ಇನ್ನು ನಗರದ ವಾಹನ ಸಂಚಾರದ ಬಗ್ಗೆ ದೆಹಲಿ ಟ್ರಾಫಿಕ್ ಪೊಲೀಸರು ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಜಾದ್ ಮಾರ್ಕೆಟ್ ಅಂಡರ್‌ಪಾಸ್ ನಲ್ಲಿ 1.5 ಅಡಿ ನೀರು ತುಂಬಿಕೊಂಡಿದ್ದು, ರಸ್ತೆಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಇನ್ನು ಮೂಲ್‌ಚಂದ್ ಅಂಡರ್‌ಪಾಸ್‌ನಲ್ಲಿ ಸಹ ಮಳೆಯ ಹಿನ್ನೆಲೆ ಸಂಚಾರಕ್ಕೆ ತೊಂದರೆಯಾಗಿದೆ., ಮಿಂಟೋ ಸೇತುವೆಯ ಸಹ ಮಳೆಯ ಕಾರಣದಿಂದ ಜಲಾವೃತವಾಗಿದ್ದು, ಈ ಸೇತುವೆಯ ಮೇಲಿನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಇನ್ನು ನಗರದ ಪುಲ್ ಪ್ರಹ್ಲಾದಪುರ ಅಂಡರ್‌ಪಾಸ್‌ ಸಹ ಮಳೆಯಿಂದ ಜಲಾವೃತವಾಗಿದೆ.  ಎಂಬಿ ರಸ್ತೆಯಲ್ಲಿ ಮಳೆಯಿಂದಾಗೊ ಹೆಚ್ಚು ಟ್ರಾಫಿಕ್ ಉಂಟಾಗಿರುವ ಕಾರಣ, ವಾಹನ ಸವಾರರು ಮಥುರಾ ರಸ್ತೆಯಲ್ಲಿ ಸಂಚರಿಸಬೇಕಿದೆ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇನ್ನು ಹಲವಾರು ಪ್ರದೇಶಗಳಲ್ಲಿ ಮಳೆ ಮುಂದುವರೆಯಲಿದೆ. ದೆಹಲಿ, ಎನ್‌ಸಿಆರ್ (ಬಹದ್ದೂರ್‌ಘರ್, ಫರಿದಾಬಾದ್, ಬಲ್ಲಭಘರ್, ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಗಾಜಿಯಾಬಾದ್, ಇಂದಿರಪುರಂ, ನೋಯ್ಡಾ, ಗ್ರೇಟರ್ ನೋಯ್ಡಾ) ಕೈತಲ್, ಕರ್ನಾಲ್, ರಾಜೌಂಡ್, ಅಸ್ಸಂಧ್, ಪಾಣಿಪತ್, ಗೊಹಾನಾ, ಗನ್ನೌರ್, ಸೋನಿಪತ್, ನರ್ವಾನಾ, ಜಿಂದ್, ರೋಹ್ಟಕ್, ಜಜ್ಜರ್, ಫರುಖ್ ನಗರ, ಸೋಹಾನಾ, ಪಲ್ವಾಲ್, ಪಾಣಿಪತ್, ಕರ್ನಾಲ್, ಗೋಹಾನಾ, ಗನ್ನೌರ್ (ಹರಿಯಾಣ) ಸಹರಾನ್ಪುರ, ಗಂಗೋಹ್, ದೇವಬಂದ್, ಮುಜಾಫರ್ ನಗರ, ಶಮ್ಲಿ, ಬಾರತ್ ಜತ್ತಾರಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: 3 ದಿನಗಳಿಂದ ಇಳಿಕೆ ಕಂಡಿದ್ದ ಡೀಸೆಲ್​ ದರ ಇಂದು ಸ್ಥಿರ; ಪೆಟ್ರೋಲ್​ ಬೆಲೆಯಲ್ಲೂ ಯಥಾಸ್ಥಿತಿ

ಶುಕ್ರವಾರ, 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣತೆ ದಾಖಲಾಗಿದೆ, ಸರಾಸರಿಗಿಂತ ಒಂದು ಹಂತ ಕಡಿಮೆಯಾಗಿದೆ ಮತ್ತು ಕನಿಷ್ಠ ತಾಪಮಾನವು 27.3 ಡಿಗ್ರಿ ಸೆಲ್ಸಿಯಸ್‌ಗಿಂತ ಸಾಮಾನ್ಯವಾಗಿದೆ. ತೇವಾಂಶದ ಮಟ್ಟವು ಶೇಕಡಾ 97 ರಿಂದ 70 ರಷ್ಟು ಏರಿಳಿತ ಕಂಡಿದೆ.

ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಶನಿವಾರ 32 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್‌ ಆಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಶನಿವಾರ ಆರೆಂಜ್ ಅಲರ್ಟ್ ಮತ್ತು ಭಾನುವಾರ ಎಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಇಲಾಖೆಯು ಆಗಸ್ಟ್ 23 ರಿಂದ ಆಗಸ್ಟ್ 26 ರವರೆಗೆ ಗ್ರೀನ್ ಅಲರ್ಟ್ ಘೋಷಿಸಿದೆ.

ಮಳೆಯ ಬಗ್ಗೆ ಎಚ್ಚರಿಕೆ ನೀಡಲು ಭಾರತೀಯ ಹವಾಮಾನ ಇಲಾಖೆ ನಾಲ್ಕು ಬಣ್ಣದ ಸಂಕೇತಗಳನ್ನು ಬಳಸುತ್ತದೆ. ಹಸಿರು ಎಂದರೆ ಎಲ್ಲವೂ ಚೆನ್ನಾಗಿದೆ ಆದರೆ ಹಳದಿ ತೀವ್ರವಾಗಿ ಕೆಟ್ಟ ಹವಾಮಾನವನ್ನು ಸೂಚಿಸುತ್ತದೆ. ಹವಾಮಾನವು ಕೆಟ್ಟದಾಗಿ ಬದಲಾಗಬಹುದು, ಇದು ದಿನನಿತ್ಯದ ಚಟುವಟಿಕೆಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು ಎಂದು ಹಳದಿ ಬಣ್ಣ ಸೂಚಿಸುತ್ತದೆ. ರಸ್ತೆ ಮತ್ತು ಚರಂಡಿ ಸಮಸ್ಯೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗುವ ಸಾಧ್ಯತೆಗಳು ಮತ್ತು ಅತ್ಯಂತ ಕೆಟ್ಟ ಹವಾಮಾನದ ಎಚ್ಚರಿಕೆಯಾಗಿ ಆರೆಂಜ್ ಅಲರ್ಟ್ ನೀಡಲಾಗುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: