HOME » NEWS » National-international » DELHI VIOLENCE PFI DELHI PRESIDENT PARVEZ AND SECRETARY MOHAMMAD ILIYAS ARRESTED FOR INVOLVEMENT IN DELHI RIOTS SCT

ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ; ಪಿಎಫ್​ಐ ರಾಜ್ಯಾಧ್ಯಕ್ಷ ಪರ್ವೇಜ್ ಬಂಧನ

Delhi Riots: ಇಂದು ಪಿಎಫ್​ಐ ದೆಹಲಿ ರಾಜ್ಯಾಧ್ಯಕ್ಷ ಪರ್ವೇಜ್ ಅಹಮದ್​ ಮತ್ತು ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ ಅವರನ್ನು ಪೊಲೀಸರು ದೆಹಲಿ ಪಟಿಯಾಲ ಹೌಸ್ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

Sushma Chakre | news18-kannada
Updated:March 12, 2020, 11:28 AM IST
ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ; ಪಿಎಫ್​ಐ ರಾಜ್ಯಾಧ್ಯಕ್ಷ ಪರ್ವೇಜ್ ಬಂಧನ
ದೆಹಲಿ ಹಿಂಸಾಚಾರ
  • Share this:
ನವದೆಹಲಿ (ಮಾ. 12): ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್​ಆರ್​ಸಿ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರ ಪ್ರಕರಣದಲ್ಲಿ ಈಗಾಗಲೇ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ದೆಹಲಿಯ ಕೋಮುಗಲಭೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ದೆಹಲಿ ರಾಜ್ಯಾಧ್ಯಕ್ಷ ಪರ್ವೇಜ್ ಅಹಮದ್​ ಮತ್ತು ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ ಅವರನ್ನು ಬಂಧಿಸಲಾಗಿದೆ.

ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ಈ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪಿಎಫ್​ಐ ನಾಯಕರ ವಿರುದ್ಧ ದೆಹಲಿಯಲ್ಲಿ ನಡೆದ ಗಲಭೆಗೆ ಜನರನ್ನು ಪೂರೈಕೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಕೋಮುಗಲಭೆಗೆ ಪರ್ವೇಜ್ ಅಹಮದ್ ಬಂಡವಾಳ ಹೂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಪಕ್ಷಪಾತಿ ವರದಿ ಆರೋಪದ ಮೇಲೆ ಕೇರಳದ 2 ಸುದ್ದಿ ವಾಹಿನಿಗಳಿಗೆ 48 ಗಂಟೆ ನಿಷೇಧ

ಪಿಎಐಐ ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕರವಾಲ್ ನಗರದಿಂದ ಎಸ್​ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇಂದು ಅಥವಾ ನಾಳೆ ಪರ್ವೇಜ್ ಮತ್ತು ಇಲಿಯಾಸ್ ಅವರನ್ನು ಪೊಲೀಸರು ದೆಹಲಿ ಪಟಿಯಾಲ ಹೌಸ್ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: Viral Video: ಬಂಡೀಪುರದಲ್ಲಿ ಆನೆ ಮೇಲೆ ಫೈರಿಂಗ್; ಮಾನವೀಯತೆ ಮರೆತ ಅರಣ್ಯ ಇಲಾಖೆ ಸಿಬ್ಬಂದಿ ಅಮಾನತು

ದೆಹಲಿಯ ಕೋಮುಗಲಭೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. 2013ರಲ್ಲಿ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದ್ದ ಗಲಭೆಗಿಂತಲೂ ದೆಹಲಿಯ ಸಿಎಎ ವಿರೋಧಿ ಹಿಂಸಾಚಾರ ಭಯಾನಕವಾಗಿದೆ ಎನ್ನಲಾಗಿದೆ. ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 1,820 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 654 ಎಫ್​ಐಆರ್​ ದಾಖಲಾಗಿದೆ. ಈಶಾನ್ಯ ದೆಹಲಿಯ ಜಫ್ರಾಬಾದ್, ಮುಜಾಪುರ್, ಬಾಬಾರ್ಪುರ್​, ಚಾಂದ್ ಬಾಗ್, ಶಿವ ವಿಹಾರ್, ಯಮುನಾ ವಿಹಾರ್​ನಲ್ಲಿ ಇನ್ನೂ ಪ್ರತಿಭಟನೆಯ ಬಿಸಿ ತಣ್ಣಗಾಗಿಲ್ಲ.
Youtube Video
First published: March 12, 2020, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories