ಎನ್​ಪಿಆರ್​ಗೆ ಯಾವುದೇ ದಾಖಲಾತಿ ಅಗತ್ಯವಿಲ್ಲ, ವಿನಾಕಾರಣ ಗೊಂದಲ ಬೇಡ; ಅಮಿತ್ ಶಾ ಸ್ಪಷ್ಟನೆ

ದೇಶದ ಜನರು ಎನ್​ಪಿಆರ್​ ಬಗ್ಗೆ ಯೋಚಿಸಬೇಕಾದ, ಭಯಪಡಬೇಕಾದ ಅಗತ್ಯವಿಲ್ಲ. ಗಣತಿ ಮಾಡುವಾಗ ದಾಖಲೆ ಇಲ್ಲದ ಯಾರನ್ನೂ ಅನುಮಾನಾಸ್ಪದ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಮಿತ್​ ಶಾ

ಅಮಿತ್​ ಶಾ

  • Share this:
ನವದೆಹಲಿ (ಮಾ. 13): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್​ ಶಾ ಗುರುವಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ಈ ಕಾಯ್ದೆಯ ಕುರಿತು ಯಾರಿಗೂ ಗೊಂದಲ ಬೇಡ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ವೇಳೆ ದೇಶದ ಯಾವ ಪ್ರಜೆಗಳನ್ನೂ ಅನುಮಾನದಿಂದ ನೋಡುವುದಿಲ್ಲ. ತಮಗೆ ಇಷ್ಟವಿರುವ ಮಾಹಿತಿಯನ್ನು ಮಾತ್ರ ಜನಗಣತಿ ಮಾಡುವವರಿಗೆ ವಿವರಗಳನ್ನು ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಜನರು ಎನ್​ಪಿಆರ್​ ಬಗ್ಗೆ ಯೋಚಿಸಬೇಕಾದ, ಭಯಪಡಬೇಕಾದ ಅಗತ್ಯವಿಲ್ಲ. ಗಣತಿ ಮಾಡುವಾಗ ದಾಖಲೆ ಇಲ್ಲದ ಯಾರನ್ನೂ ಅನುಮಾನಾಸ್ಪದ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ. ಜನಗಣತಿ ಮಾಡುವವರು ಕೇಳುವ ಮಾಹಿತಿಗೆ ಉತ್ತರಿಸುವುದು, ಬಿಡುವುದು ಜನರ ಇಷ್ಟಕ್ಕೆ ಬಿಟ್ಟಿದ್ದು ಎಂದು ಅಮಿತ್​ ಶಾ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ; ಪಿಎಫ್​ಐ ರಾಜ್ಯಾಧ್ಯಕ್ಷ ಪರ್ವೇಜ್ ಬಂಧನ

ದೆಹಲಿ ಹಿಂಸಾಚಾರದ ಬಗ್ಗೆ ಕಳೆದ ವಾರ ವಿರೋಧ ಪಕ್ಷಗಳ ನಾಯಕರು ಸದನದಲ್ಲಿ ಹರಿಹಾಯ್ದಿದ್ದರು. ಇದಕ್ಕೆ ಗುರುವಾರ ಉತ್ತರಿಸಿರುವ ಅಮಿತ್​ ಶಾ, ಕೇಂದ್ರ ಸರ್ಕಾರದ ಗೃಹ ಸಚಿವನಾಗಿ ರಾಜ್ಯಸಭೆಯಲ್ಲಿ ನಿಂತು ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ. ಎನ್​ಪಿಆರ್ ಬಗ್ಗೆ ಜನರು ವಿನಾಕಾರಣ ಗೊಂದಲಕ್ಕೊಳಗಾಗಿದ್ದಾರೆ ಎಂದಿದ್ದಾರೆ.

ದೆಹಲಿಯ ಗಲಭೆಗಳಿಗೆ ಕಾರಣರಾದವರನ್ನು ಅವರ ಜಾತಿ, ಧರ್ಮ, ರಾಜಕೀಯ ಹಿನ್ನೆಲೆಯನ್ನು ಪರಿಗಣಿಸದೆ ಬಂಧಿಸಲಾಗಿದೆ. ಇನ್ನೂ ಕೂಡ ಕೆಲವರನ್ನು ಬಂಧಿಸಲಾಗುತ್ತದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 700ಕ್ಕೂ ಅಧಿಕ ಎಫ್‌ಐಆರ್ ದಾಖಲಿಸಲಾಗಿದೆ. 2,600ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಕೊರೋನಾ ವೈರಸ್​ ಪ್ರಕರಣ; ಬೆಂಗಳೂರಿನ ಗೂಗಲ್ ಉದ್ಯೋಗಿಗೆ ಮಾರಣಾಂತಿಕ ಸೋಂಕು ದೃಢ

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಗಂಭೀರ ಕೊಲೆ ಪ್ರಕರಣಗಳು, ಧಾರ್ಮಿಕ ಸ್ಥಳಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಹಲ್ಲೆ ಮೂರು ಎಸ್‌ಐಟಿಗಳಿಗೆ ಹಸ್ತಾಂತರಿಸಲಾಗುತ್ತಿದೆ. 53 ಜೀವಗಳನ್ನು ಬಲಿ ಪಡೆದಿರುವ ದೇಶ ವಿರೋಧಿಗಳನ್ನು ಬಂಧಿಸಿ, ತಕ್ಕ ಪಾಠ ಕಲಿಸಲಾಗುವುದು ಎಂದು ಅಮಿತ್​ ಶಾ ಎಚ್ಚರಿಕೆ ನೀಡಿದ್ದಾರೆ.
First published: