liveLIVE NOW

Delhi Violence Live: ಸಾವಿನ ಸಂಖ್ಯೆ 27ಕ್ಕೇರಿಕೆ; 106 ಮಂದಿ ಬಂಧನ, 18 ಎಫ್​​ಐಆರ್​​ ದಾಖಲು; ದೆಹಲಿ ಪೊಲೀಸ್​​​

Delhi Violence Live News Updates: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

  • News18 Kannada
  • | February 26, 2020, 22:35 IST
    facebookTwitterLinkedin
    LAST UPDATED 2 YEARS AGO

    AUTO-REFRESH

    ಹೈಲೈಟ್ಸ್

    22:04 (IST)

    ಹಿಂಸಾಚಾರ, ಕೋಮುಗಲಭೆ ಸ್ವರೂಪ ಪಡೆದಿರುವ ಸಿಎಎ ವಿರೋಧಿ ಪ್ರತಿಭಟನೆಗೆ ಬಲಿಯಾಗಿರುವವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ.

    21:52 (IST)

    ಪೊಲೀಸರು ಹೆಲ್ಪ್ ಲೈನ್ ನಂಬರ್ ಗಳನ್ನು ನೀಡಿದ್ದು - 011-22829334, 22829335 ಸಂಕಷ್ಟದ ಸಮಯದಲ್ಲಿ ಸಂಪರ್ಕಿಸಲು ಸೂಚಿಸಿದ್ದಾರೆ.

    21:31 (IST)

    ಸಿಎಎ ಮತ್ತು ಎನ್‌ಆರ್ ಸಿ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಗಲಭೆ ತಾರಕಕ್ಕೇರಿದೆ . ಸಂಘರ್ಷದಲ್ಲಿ ಬಲಿಯಾದವರ ಸಂಖ್ಯೆ ಏರುತ್ತಲೇ ಇದೆ. ಇದುವೆರೆಗೂ ಹಿಂಸಾಚಾರಕ್ಕೆ ಮೃತಪಟ್ಟವರ ಸಂಖ್ಯೆ 25 ಕ್ಕೆ ಏರಿದೆ ಎಂಬ ಮಾಹಿತಿ ಲಭ್ಯವಾಗಿದೆ.

    21:29 (IST)

    ದೆಹಲಿ ಪೊಲೀಸ್​ ಪಿಆರ್​ಒ ರಾಂಧವಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಿಂಸಾಚಾರ ಹೆಚ್ಚಾಗಲು ಕಾರಣರಾದ ದುಷ್ಕರ್ಮಿಗಳನ್ನು ಗುರುತಿಸಲಾಗುತ್ತಿದೆ. ನಮ್ಮ ಬಳಿ ಸಿಸಿಟಿವಿ ಫೂಟೇಜ್​ಗಳು ಸೇರಿ ಹಲವು ಪ್ರಮುಖ ಸಾಕ್ಷಿಗಳಿವೆ. ಇವತ್ತು ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

    21:29 (IST)

    ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ 106 ಮಂದಿಯನ್ನು ಬಂಧಿಸಲಾಗಿದ್ದು 18 ಎಫ್​ಐಆರ್​ಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    19:26 (IST)

    ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ 106 ಮಂದಿ ಬಂಧನ

    ಇಲ್ಲಿಯವರೆಗೂ 18 ಮಂದಿ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡಿದ್ದೇವೆ

    ದೆಹಲಿ ಪೊಲೀಸರ ಅಧಿಕೃತ ಹೇಳಿಕೆ

    18:50 (IST)

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಎರಡು ದಿನಗಳ ಹಿಂದೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಪೇದೆ ರತನ್ ಲಾಲ್ ಎನ್ನುವರು ಗಲಭೆಕೋರರ ದಾಳಿಗೆ ಬಲಿಯಾಗಿದ್ದರು. ಇಂತಹ ಪೊಲೀಸ್ ಪೇದೆಯ ಕುಟುಂಬಕ್ಕೆ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ 1 ಕೋಟಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ.

    18:42 (IST)

    ದೆಹಲಿಯಲ್ಲಿ ಸಾವಿನ ಸಂಖ್ಯೆ 23ಕ್ಕೇರಿಕೆ

    ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಸಿಎಂ ಕೇಜ್ರಿವಾಲ್​​ ಭೇಟಿ

    ವಿಧಾನಸಭೆಯಲ್ಲಿ ಗಲಭೆಗೆ ಬಾಹ್ಯ ಶಕ್ತಿಗಳೇ ಕಾರಣ ಎಂದು ಹೇಳಿದ ನಂತರ ಕೇಜ್ರಿವಾಲ್​​ ಭೇಟಿ

    18:00 (IST)

    ದೆಹಲಿ ಹಿಂಸಾಚಾರದಲ್ಲಿ ಜನರ ಪಾತ್ರವಿಲ್ಲ

    ಇದಕ್ಕೆ ಬಾಹ್ಯ ಶಕ್ತಿಗಳೇ ಕಾರಣ ಎಂದ ದೆಹಲಿ ಸಿಎಂ

    ದೆಹಲಿ ವಿಧಾನಭೆಯಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ ಆರೋಪ

    ರಾಷ್ಟ್ರ ರಾಜಧಾನಿ ನವದೆಹಲಿಯ ಈಶಾನ್ಯ ಭಾಗದಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಲ್ಲಿಯವರೆಗೂ ಸುಮಾರು 150ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ.  ಘಟನೆಯಲ್ಲಿ 27 ಜನ ಸಾವನ್ನಪ್ಪಿದ್ದಾರೆ.  ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು ಪರದಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...