Seema.RSeema.R
|
news18-kannada Updated:February 26, 2020, 2:02 PM IST
ಸಾವನ್ನಪ್ಪಿದ ಅಧಿಕಾರಿ
ನವದೆಹಲಿ (ಫೆ.26): ಪೌರತ್ವದ ಕಿಚ್ಚು ರಾಷ್ಟ್ರ ರಾಜಧಾನಿಯಲ್ಲಿ ಹೊತ್ತು ಉರಿಯುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಗಾಗಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ನಡುವೆ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಶವವೊಂದು ದೆಹಲಿಯ ಮೋರಿಯಲ್ಲಿ ಪತ್ತೆಯಾಗಿದೆ.
ಅಂಕಿತ್ ಶರ್ಮಾ ಸಾವನ್ನಪ್ಪಿದ ಅಧಿಕಾರಿಯಾಗಿದ್ದಾರೆ. ಉತ್ತರ ದೆಹಲಿಯ ಚಾಂದಭಾಗ್ನಲ್ಲಿ ಬೆಳಗ್ಗೆ ಇವರ ಶವ ಪತ್ತೆಯಾಗಿದೆ.
ಮಂಗಳವಾರ ಅಂಕಿತ್ ಶರ್ಮಾ ಮನೆಗೆ ಹಿಂದಿರುಗುವಾಗ ಅವರ ಮೇಲೆ ಗುಂಪು ದಾಳಿ ನಡೆಸಿದೆ. ಈ ವೇಳೆ ಹಲ್ಲೆ ನಡೆಸಿ ಅವರನ್ನು ಹತ್ಯೆಗಯ್ಯಲಾಗಿದೆ. ಬಳಿಕ ದೇಹವನ್ನು ಮೋರಿಗೆ ಎಸೆಯಲಾಗಿದೆ ಎಂದು ಅಂದಾಜಿಸಲಾಗಿದೆ.
ಶರ್ಮಾ ಅವರ ತಂದೆ ಕೂಡ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕರು ಅಂಕಿತ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪೌರತ್ವ ಮಸೂದೆ ಪರ ವಿರೋಧಗಳು ಗುಂಪಿನ ಸಂಘರ್ಷಕ್ಕೆ ದೆಹಲಿ ಹೊತ್ತಿ ಉರಿಯುತ್ತಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಈ ಕುರಿತ ಕ್ಷಣ ಕ್ಷಣದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ : Delhi Violence Live
ಕಳೆದ ಎರಡು ದಿನಗಳ ಹಿಂದೆ ಉಂಟಾದ ಈ ಸಂಘರ್ಷದಲ್ಲಿ 20 ನಜನ ಸಾವನ್ನಪ್ಪಿದ್ದಾರೆ. ಸೋಮವಾರ ಎರಡು ಗುಂಪುಗಳ ನಡುವೆ ಉಂಟಾದ ಸಂಘರ್ಷದಲ್ಲಿ 42 ವರ್ಷದ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಸಾವನ್ನಪ್ಪಿದ್ದರು. ಸದ್ಯ ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು, ನಿನ್ನೆಗಿಂತ ಕೊಂಚ ಗಲಭೆ ಕಡಿಮೆಯಾಗಿದೆ. ಈಶಾನ್ಯ ದೆಹಲಿಯುದ್ದಕ್ಕೂ ಪ್ಯಾರಾ ಮಿಲಿಟರಿ ಮತ್ತು ರಿಸರ್ವ್ ಪೊಲೀಸ್ ಪಡೆ ಗಸ್ತು ತಿರುಗುತ್ತಿದ್ದು, ಸೈನ್ಯವನ್ನೂ ನಿಯೋಜಿಸುವ ಸಾಧ್ಯತೆಯಿದೆ.
First published:
February 26, 2020, 2:02 PM IST