ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಸಾವಿನ ಸಂಖ್ಯೆ 34ಕ್ಕೆ ಏರಿಕೆ; 200ಕ್ಕೂ ಹೆಚ್ಚು ಜನರಿಗೆ ಗಾಯ

Delhi Violence: ರಾಜಧಾನಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮಹ್ಜುಪುರ್, ಜಫ್ರಬಾದ್​, ಸೀಲಂಪುರ ಮತ್ತು ಬಾದರ್ಪುರದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದೆಹಲಿ ಗಲಭೆ

ದೆಹಲಿ ಗಲಭೆ

 • Share this:
  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಎಎ ಮತ್ತು ಎನ್​​ಆರ್​ಸಿ ವಿರೋಧಿಸಿ ನಡೆಸುತ್ತಿರುವ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ. ಪರಿಣಾಮ ರಾಜಧಾನಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೆ 34 ಮಂದಿ ಮೃತಪಟ್ಟಿದ್ದು, ಸುಮಾರು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

  ಭಾನುವಾರ ಸಂಜೆಯಿಂದ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಹೆಚ್ಚಾಗಿದೆ. ರಾಜಧಾನಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮಹ್ಜುಪುರ್, ಜಫ್ರಬಾದ್​, ಸೀಲಂಪುರ ಮತ್ತು ಬಾದರ್ಪುರದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

  ಮುಂದುವರಿದ ದೆಹಲಿ ಹಿಂಸಾಚಾರ: ಇಂದೂ ಶಾಲಾ ಕಾಲೇಜು ರಜೆ; ಬೋರ್ಡ್​ ಪರೀಕ್ಷೆ ಮುಂದೂಡಿಕೆ

  ದೆಹಲಿ ಪೊಲೀಸರು ಎರಡು ಸಹಾಯವಾಣಿ ಸಂಖ್ಯೆಗಳನ್ನು ನೀಡಿದ್ದಾರೆ. 011-22829334, 22829335 - ಈ ನಂಬರ್​ಗಳಿಗೆ ಜನರು ಕರೆಮಾಡಿ ದೆಹಲಿ ಹಿಂಸಾಚಾರದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಜೊತಗೆಎ 112 ಸಹಾಯವಾಣಿಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

  ಸುಮಾರು 200 ಹೆಚ್ಚು ಗಾಯಾಳುಗಳು ಆಸ್ಪತ್ರೆಯಲ್ಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯೂ ಇದೆ. ಇನ್ನು ಭಾನುವಾರದಿಂದ ಹಿಂಸಾಚಾರಕ್ಕೆ ನಲುಗಿದ್ದ ದೆಹಲಿ ಈಗ ಭದ್ರತಾ ಪಡೆಗಳ ನಿಯಂತ್ರಣದಲ್ಲಿದೆ. ಕಳೆದ ರಾತ್ರಿಯೂ ಭದ್ರತಾ ಪಡೆ ದೆಹಲಿಯ ಗಲ್ಲಿಗಲ್ಲಿಗಳಲ್ಲಿ ಪರೇಡ್ ನಡೆಸಿದೆ. ಇಂದು ಗಲಭೆ ಪೀಡಿತ ಸೀಲಂಪುರ ಪ್ರದೇಶ ಸಹಜ ಸ್ಥಿತಿಗೆ ಮರಳುತ್ತಿದೆ.

  ಮಂಗಳೂರು; ದುಬೈ ಹೆಂಡತಿಗೆ ಕೈಕೊಟ್ಟು ಮರು ಮದುವೆಯಾಗಲು ಹೊರಟ ಭೂಪನಿಗೆ ಶಾಕ್ ಕೊಟ್ಟ ಅತ್ತೆ!

  ಇನ್ನು ಗಲಭೆಪೀಡಿತ ಪ್ರದೇಶಕ್ಕೆ ನಿನ್ನೆ ಭೇಟಿಕೊಟ್ಟಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಹಿಂಸಾಚಾರದ ಸಂಪೂರ್ಣ ವರದಿಯನ್ನ ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ್ದಾರೆ. ಸದ್ಯ ಹಿಂಸಾಚಾರಕ್ಕೆ ಕಾರಣವಾಗಿದ್ದ 106 ಮಂದಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದರು. ಪೊಲೀಸರು ಒಟ್ಟು 18 ಎಫ್​ಐಆರ್ ದಾಖಲಿಸಿದ್ದಾರೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಂದು ದೆಹಲಿಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. 10 ಮತ್ತು 12ನೇ ತರಗತಿಯ ಬೋರ್ಡ್​ ಪರೀಕ್ಷೆಗಳನ್ನು ಮುಂದೂಡಲಾಗಿದೆ.

  ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಪರ-ವಿರೋಧಿ ಗುಂಪುಗಳ ನಡುವಿನ ಘರ್ಷಣೆಯಿಂದ ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ. ಈ ಆದೇಶ ಈಶಾನ್ಯ ದೆಹಲಿಯ ಹಲವೆಡೆ ಜಾರಿಯಲ್ಲಿದ್ದು, ಹಿಂಸಾಚಾರ ತಡೆಗಟ್ಟಲು ಕಠಿಣ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ ಸಿಎಎ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.

  ಕೊರೊನಾ ಎಫೆಕ್ಟ್​; ಮಾರಕ ವೈರಸ್​ ಎಷ್ಟೆಲ್ಲಾ ದೇಶಗಳಲ್ಲಿ ಹಬ್ಬಿದೆ ಮತ್ತು ಇದರಿಂದ ಭಾರತಕ್ಕೇನು ಲಾಭ? ಏನು ನಷ್ಟ?
  First published: