ದೆಹಲಿ ಹಿಂಸಾಚಾರ: ಶಾಂತಿ ಕಾಪಾಡಲು ಅಮಿತ್​ ಶಾರಿಂದ ಎಲ್ಲಾ ರೀತಿಯ ನೆರವಿನ ಭರವಸೆ; ಕೇಜ್ರಿವಾಲ್​​

 ಹಿಂಸಾಚಾರ ಹತ್ತಿಕ್ಕಲು ಕೇಂದ್ರ ಸರ್ಕಾರ ಹೆಚ್ಚಿನ ಪೊಲೀಸ್​ ಸೇವೆ ನೀಡುವ ಭರವಸೆ ನೀಡಿದ್ದು, ಅಗತ್ಯ ಬಿದ್ದರೆ ಸೇನೆಯನ್ನು ಕಳುಹಿಸಿಕೊಡುವ ಭರವಸೆ ನೀಡಿದೆ ಎಂದು ಅಮಿತ್​ ಶಾ ಭೇಟಿ ಬಳಿಕ ಕೇಜ್ರಿವಾಲ್​ ಮಾಹಿತಿ ನೀಡಿದ್ದಾರೆ.

ಅಮಿತ್​​ ಶಾ ಭೇಟಿಯಾದ ಕೇಜ್ರಿವಾಲ್​​

ಅಮಿತ್​​ ಶಾ ಭೇಟಿಯಾದ ಕೇಜ್ರಿವಾಲ್​​

  • Share this:
ನವದೆಹಲಿ (ಫೆ.25): ಪೌರತ್ವ ತಿದ್ದುಪಡಿ ಕುರಿತು ಪರ ಮತ್ತು ವಿರೋಧ ಗುಂಪುಗಳ ನಡುವೆ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಈಗಾಗಲೇ 7 ಜನರು ಸಾವನ್ನಪ್ಪಿದ್ದಾರೆ. ಈ ಗಲಭೆ ನಿಯಂತ್ರಣ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್​ ಶಾ,  ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಜೊತೆ ತುರ್ತು ಸಭೆ ನಡೆಸಿದರು.

ಈ ಸಭೆಯಲ್ಲಿ ಶಾಂತಿ ಕಾಪಾಡಲು ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ಕೇಂದ್ರದಿಂದ ವ್ಯಕ್ತವಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಗಿಭದ್ರತೆ ನೀಡಲಾಗಿದೆ. ಹೊರಗಿನವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ. ಈ ಹಿನ್ನೆಲೆ ಹಿಂಸಾಚಾರ ತಡೆಗಟ್ಟಲು ನಗರಕ್ಕೆ ಹೊರಗಿನವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ.

ಹಿಂಸಾಚಾರ ಹತ್ತಿಕ್ಕಲು ಕೇಂದ್ರ ಸರ್ಕಾರ ಹೆಚ್ಚಿನ ಪೊಲೀಸ್​ ಸೇವೆ ನೀಡುವ ಭರವಸೆ ನೀಡಿದ್ದು, ಅಗತ್ಯ ಬಿದ್ದರೆ ಸೇನೆಯನ್ನು ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳಿಂದ ಆದೇಶ ಬರದ ಹಿನ್ನೆಲೆ ಪೊಲೀಸರು ಕೂಡ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಅಮಿತ್​ ಶಾ ಮುಂದೆ ಕೂಡ ತಿಳಿಸಲಾಗುವುದು. ಪೊಲೀಸರು ಹಿಂಸಾಚಾರ ನಿಯಂತ್ರಣಕ್ಕೆ ಟಿಯರ್​ ಗ್ಯಾಸ್​ ಅಥವಾ ಲಾಠಿ ಚಾರ್ಚ್​ ಮಾಡಲು ಸಾಧ್ಯವಿಲ್ಲ ಎಂದೂ ಈ ಸಂದರ್ಭದಲ್ಲಿ ಕೇಜ್ರಿವಾಲ್​ ಹೇಳಿದ್ದಾರೆ.

ಇಂದಿನ ಸಭೆ ಸಕಾರಾತ್ಮಕವಾಗಿದ್ದು. ನಗರದಲ್ಲಿ ಶಾಂತಿ ಮರುಕಳಿಸಲು ಎಲ್ಲಾ ಪಕ್ಷಗಳು ಪ್ರಮಾಣಿಕ ಪ್ರಯತ್ನ ನಡೆಸುವ ಕುರಿತು ಭರವಸೆ ನೀಡಿವೆ ಎಂದು ಕೇಜ್ರಿವಾಲ್​ ಹೇಳಿದ್ದಾರೆ.

ಒಬ್ಬ ಕಾನ್ಸ್​ಟೇಬಲ್​ ಸೇರಿದಂತೆ 7 ಮಂದಿ ಹಿಂಸಾಚಾರಕ್ಕೆ ಈ ವರೆಗೂ ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ ಕೇಜ್ರಿವಾಲ್​, ದೆಹಲಿ ಪರಿಸ್ಥಿತಿ ತೀರಾ ಬಿಗಡಾಯಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ದೆಹಲಿಯಲ್ಲಿ ಮುಂದುವರಿದ ಹಿಂಸಾಚಾರ: ಅಂಗಡಿ, ಕಾರುಗಳಿಗೆ ಬೆಂಕಿ; ಅಮಿತ್​ ಶಾ ಜೊತೆ ಕೇಜ್ರಿವಾಲ್​ ಸಭೆ

ಇನ್ನು ಘಟನೆ ನಡೆದ ಮೌಜಪುರ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ, ಉತ್ತರ ದೆಹಲಿಯ ಐದು ಪ್ರದೇಶಗಳಲ್ಲಿ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗಿದೆ. ಖಗಜುರಿ ಖಾಸ್​ ಭಜನಪುರ ಪ್ರದೇಶಗಳಲ್ಲಿ ಸೆಕ್ಷನ್​ 144 ಹೇರಲಾಗಿದೆ ಎಂದು ಕೇಜ್ರಿವಾಲ್​ ತಿಳಿಸಿದ್ದಾರೆ.
First published: