Robbery: ಪೊಲೀಸ್ ವೇಷದಲ್ಲಿ ಹೋಗಿ ಹಣ ದೋಚಿದ ಖದೀಮರು

ಡಿಸೆಂಬರ್ 28ರಂದು ಈ ಘಟನೆ ನಡೆದಿದ್ದು, ನಿಜಾಮುದ್ದೀನ್ ಮತ್ತು ಅವನ ಸ್ನೇಹಿತ ಶಹಜವಾನ್ 25 ಲಕ್ಷ ರೂಪಾಯಿಗಳ ಹಣ ಪಾವತಿಯನ್ನು ಸಂಗ್ರಹಿಸಲು ದೆಹಲಿಯ ಪೀರಾಗಾರಿಗೆ ಹೋಗಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಕಳ್ಳರು ಸಾಮಾನ್ಯ ಜನರಿಗೆ ಎಷ್ಟೇ ಚಳ್ಳೆ ಹಣ್ಣು ತಿನ್ನಿಸಿ ಹಣ ದೋಚಿದರೂ ಪೊಲೀಸರ ಕೈಯಿಂದ ಇವರು ತಪ್ಪಿಸಿಕೊಳ್ಳುವುದು(Escape) ಅಷ್ಟೊಂದು ಸುಲಭದ ಮಾತಲ್ಲ. ಇಲ್ಲಿಯೂ ಸಹ ಅದೇ ರೀತಿಯ ಘಟನೆ ನಡೆದಿದೆ ನೋಡಿ. ತಮ್ಮ ನೈಜ ಗುರುತನ್ನು ಮರೆ ಮಾಚಿಕೊಂಡು ಪೊಲೀಸ್ ವೇಷ ಧರಿಸಿ ಸ್ಕ್ರ್ಯಾಪ್ ಡೀಲರ್ (Scrap Dealer) ಒಬ್ಬರಿಂದ ಸುಮಾರು 75 ಲಕ್ಷ ರೂಪಾಯಿ ಹಣವನ್ನು ದೋಚಿದ (Robbing) ಆರೋಪದ ಮೇಲೆ ಒಬ್ಬ 20 ವರ್ಷ ವಯಸ್ಸಿನ ಪೊಲೀಸ್ ಮಾಹಿತಿದಾರರನ್ನು ಒಳಗೊಂಡ ಐವರನ್ನು ಉತ್ತರ ಪ್ರದೇಶದ (Uttar Pradesh) ಜಿಲ್ಲಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಪೊಲೀಸರು ಈ ಐವರು ಬಂಧಿತರನ್ನು ಮೊಹಮ್ಮದ್ ರಿಜ್ವಾನ್ (20), ಮೊಹಮ್ಮದ್ ಸಲ್ಮಾನ್ (26), ಮೊಹಮ್ಮದ್ ಶೋಯಿಬ್ (22), ಮೊಹಮ್ಮದ್ ಶಹಬುದ್ದೀನ್ (32) ಮತ್ತು ಸಕೀಬ್ ಹಸನ್ (21) ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ಶ್ವೇತಾ ಚೌಹಾಣ್ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ವೇಷ
"ಪೊಲೀಸರ ವಿಚಾರಣೆಯ ಸಮಯದಲ್ಲಿ, ಆರೋಪಿ ರಿಜ್ವಾನ್ ತಾನೊಬ್ಬ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನ ಮಾಹಿತಿದಾರ ಮತ್ತು ಈ ಹಿಂದೆ ಸ್ಕ್ರ್ಯಾಪ್ ಕಾರ್ಖಾನೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾನೆ.

ಇದನ್ನೂ ಓದಿ: YouTube ನೋಡಿ ಬ್ಯಾಂಕ್ ದರೋಡೆ ಮಾಡಿದ್ದ ಖತರ್​ನಾಕ್ ಗ್ಯಾಂಗ್, ಹಣದ ಸಮೇತ ಕಳ್ಳರನ್ನು ಹಿಡಿದ ಪೊಲೀಸ್ ನಾಯಿ!

ಅವನು ತನ್ನ ಮಾಜಿ ಉದ್ಯೋಗದಾತನ ದೈನಂದಿನ ಹಣದ ಸಂಗ್ರಹಗಳ ಬಗ್ಗೆ ತಿಳಿದಿದ್ದನು ಮತ್ತು ಸಂಗ್ರಹದ ಹಣವನ್ನು ತನ್ನ ಸ್ನೇಹಿತರೊಂದಿಗೆ ದೋಚುವ ಯೋಜನೆ ಮಾಡಿದನು. ಪೊಲೀಸರ ಕಾರ್ಯಶೈಲಿಯೂ ಅವನಿಗೆ ತಿಳಿದಿರುವುದರಿಂದ, ಅವರು ಪೊಲೀಸ್ ಸಿಬ್ಬಂದಿಯ ವೇಷ ಹಾಕಿಕೊಂಡು ದರೋಡೆ ಮಾಡಲು ನಿರ್ಧರಿಸಿದರು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದೆಹಲಿಯ ಪೀರಾಗಾರಿ
ದೂರುದಾರ ನಿಜಾಮುದ್ದೀನ್ ಪ್ರಕಾರ, ಡಿಸೆಂಬರ್ 28ರಂದು ಈ ಘಟನೆ ನಡೆದಿದ್ದು, ನಿಜಾಮುದ್ದೀನ್ ಮತ್ತು ಅವನ ಸ್ನೇಹಿತ ಶಹಜವಾನ್ 25 ಲಕ್ಷ ರೂಪಾಯಿಗಳ ಹಣ ಪಾವತಿಯನ್ನು ಸಂಗ್ರಹಿಸಲು ದೆಹಲಿಯ ಪೀರಾಗಾರಿಗೆ ಹೋಗಿದ್ದರು. ಮೊದಲ ಹಣ ಪಾವತಿಯನ್ನು ಪಡೆದ ನಂತರ, ಅವರು ಕರೋಲ್ ಬಾಗ್‌ಗೆ ಹೋದರು, ಅಲ್ಲಿಂದ ಅವರು 50 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ತಮ್ಮ ಉದ್ಯೋಗದಾತರ ಕಚೇರಿಗೆ ಹಿಂದಿರುಗುವಾಗ, ಅವರು ರಾಣಿ ಝಾನ್ಸಿ ಫ್ಲೈಓವರ್ ಗೆ ಹೋಗಲು ರಸ್ತೆಯ ತಪ್ಪಾದ ಭಾಗವನ್ನು ತೆಗೆದುಕೊಂಡರು. ಪೊಲೀಸರಂತೆ ನಟಿಸಿದ ಈ ಐದು ಜನರು ಅವರನ್ನು ತಡೆದು ಅವರಲ್ಲಿ ಒಬ್ಬನನ್ನು ವಿಚಾರಣೆಗೆ ಬರುವಂತೆ ಕೇಳಿದರು. ಆರೋಪಿಗಳಲ್ಲಿ ಒಬ್ಬರು ಉದ್ಯೋಗಿಯನ್ನು ಬೈಕಿನಲ್ಲಿ ಕರೆದೊಯ್ದರು.

ಪೊಲೀಸ್ ತಂಡ ರಚನೆ
ಮಾರ್ಗ ಮಧ್ಯದಲ್ಲೇ ಆರೋಪಿ ತನ್ನ ಬೈಕ್ ನಿಲ್ಲಿಸಿ, ನೌಕರನ ಕಪಾಳಕ್ಕೆ ಹೊಡೆದು, ಆ ಹಣವಿರುವ ಬ್ಯಾಗ್ ಅನ್ನು ದೋಚಿದ್ದಾನೆ' ಎಂದು ಡಿಸಿಪಿ ಚೌಹಾಣ್ ಹೇಳಿದ್ದಾರೆ. ಈ ಆರೋಪಿಗಳನ್ನು ಹಿಡಿಯಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಯಿತು ಮತ್ತು ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದರು ಮತ್ತು ಐದು ಶಂಕಿತರನ್ನು ಎರಡು ಮೋಟಾರು ಬೈಕುಗಳಲ್ಲಿ ಹೋಗುತ್ತಿರುವುದನ್ನು ಅವರು ನೋಡಿದರು.

ಇದನ್ನೂ ಓದಿ: Covid ಫಂಡ್ ಗೆ ದುಡ್ಡು ಸಂಗ್ರಹಿಸಿ Lamborghini, Rolex ವಾಚ್ ತಗೊಂಡು ಫುಲ್ ಮಜಾ!

ಬೈಕ್ ಉತ್ತರ ಪ್ರದೇಶದ ನೋಂದಣಿ
"ಅವರೆಲ್ಲರೂ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರು ಮತ್ತು ಶಂಕಿತರಲ್ಲಿ ಒಬ್ಬರು ಪೀರಾಗಾರಿಯಿಂದ ಆ ಹಣವನ್ನು ತೆಗೆದುಕೊಂಡು ಬರುವವರನ್ನು ಹಿಂಬಾಲಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅವರ ಬೈಕ್ ಉತ್ತರ ಪ್ರದೇಶದ ನೋಂದಣಿಯನ್ನು ಹೊಂದಿತ್ತು ಮತ್ತು ಸಾರಿಗೆ ಪ್ರಾಧಿಕಾರದೊಂದಿಗೆ ಪರಿಶೀಲಿಸಿದ ನಂತರ, ಪೊಲೀಸರು ಬೈಕ್‌ನ ಮಾಲೀಕರನ್ನು ಸಕೀಬ್ ಎಂದು ಗುರುತಿಸುವಲ್ಲಿ ಯಶಸ್ವಿಯಾದರು. ಪೊಲೀಸರು ಮೊದಲು ಸಕೀಬ್‌ನನ್ನು ಬಂಧಿಸಿದರು ಮತ್ತು ವಿಚಾರಣೆಯ ಸಂದರ್ಭದಲ್ಲಿ, ಅವನ ಸಹಚರರನ್ನು ಬಂಧಿಸಲಾಯಿತು. ಪೊಲೀಸರು ಅವರಿಂದ 60 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ" ಎಂದು ಡಿಸಿಪಿ ಚೌಹಾಣ್ ಹೇಳಿದರು.
Published by:vanithasanjevani vanithasanjevani
First published: