• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Delhi University Controversy| ವಿವಾದದಲ್ಲಿ ದೆಹಲಿ ವಿವಿ; ಮಹಾಶ್ವೇತಾದೇವಿ ಸೇರಿದಂತೆ ಪ್ರಮುಖ ದಲಿತ ಲೇಖಕರ ಪಠ್ಯ ಹೊರಕ್ಕೆ!

Delhi University Controversy| ವಿವಾದದಲ್ಲಿ ದೆಹಲಿ ವಿವಿ; ಮಹಾಶ್ವೇತಾದೇವಿ ಸೇರಿದಂತೆ ಪ್ರಮುಖ ದಲಿತ ಲೇಖಕರ ಪಠ್ಯ ಹೊರಕ್ಕೆ!

ದೆಹಲಿ ವಿಶ್ವವಿದ್ಯಾಲಯ.

ದೆಹಲಿ ವಿಶ್ವವಿದ್ಯಾಲಯ.

ದೆಹಲಿ ವಿಶ್ವವಿದ್ಯಾಲಯವು ಪದವಿ ಪೂರ್ವ ತರಗತಿಗಳಿಗೆ ನಿಗದಿ ಮಾಡಿದ್ದ ಇಂಗ್ಲಿಷ್ ಪಠ್ಯದಲ್ಲಿ ಮಹಾಶ್ವೇತಾದೇವಿ ಸೇರಿದಂತೆ ಅನೇಕ ಸ್ತ್ರೀವಾದಿ ಪಠ್ಯ ಸೇರಿದಂತೆ ಹಲವು ದಲಿತರ ಲೇಖಕರ ಪಠ್ಯ ಕೈಬಿಟ್ಟಿರುವುದು ತೀವ್ರ ಟೀಕೆಗೆ ಕಾರಣವಾಗಿವೆ.

 • Share this:

  delhi university controversyನವ ದೆಹಲಿ (ಆಗಸ್ಟ್​ 26); ಸದಾ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾಗುವ ದೆಹಲಿ ವಿಶ್ವವಿದ್ಯಾಲಯ (delhi university controversy) ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಕಳೆದ ವರ್ಷ ಉದ್ಯೋಗ ನೇಮಕಾತಿಯಲ್ಲಾದ ಅಕ್ರಮ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ಪರಿಣಾಮ ವಿಶ್ವವಿದ್ಯಾಲಯದ ಉಪ ಕುಲಪತಿ ಯೋಗೇಶ್ ತ್ಯಾಗಿ ಅವರನ್ನು ಅಮಾನತು ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ (ramnath kovind) ಆದೇಶ ಹೊರಡಿಸಿದ್ದರು. ಆದರೆ, ಈ ವಿವಾದ ತಣ್ಣಗಾಗುವ ಒಳಗಾಗಿ ಇದೀಗ ಮತ್ತೊಂದು ವಿವಾದವನ್ನು ದೆಹಲಿ ವಿವಿ ತನ್ನ ಮೈಮೇಲೆ ಎಳೆದುಕೊಂಡಿದೆ. ದೆಹಲಿ ವಿಶ್ವವಿದ್ಯಾಲಯವು ಪದವಿ ಪೂರ್ವ ತರಗತಿಗಳಿಗೆ ನಿಗದಿ ಮಾಡಿದ್ದ ಇಂಗ್ಲಿಷ್ ಪಠ್ಯದಲ್ಲಿ ಮಹಾಶ್ವೇತಾದೇವಿ (Mahasweta Devi) ಸೇರಿದಂತೆ ಅನೇಕ ಸ್ತ್ರೀವಾದಿ ಪಠ್ಯ ಸೇರಿದಂತೆ ಹಲವು ದಲಿತರ ಲೇಖಕರ (Dalit Writers) ಪಠ್ಯ ಕೈಬಿಟ್ಟಿರುವುದು ತೀವ್ರ ಟೀಕೆಗೆ ಕಾರಣವಾಗಿವೆ.


  ವಿವಿಯ ಮೇಲ್ವೀಚಾರಣ ಸಮಿತಿಯು ದಲಿತ ಲೇಖಕರಾದ ಬಾಮಾ ಫೌಸ್ಟಿನಾ ಸೂಸೈರಾಜ್, ಸುಕೀರ್ಥರಾಣಿ ಮತ್ತು ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಅವರ ಬರಹಗಳನ್ನು ಪಠ್ಯದಿಂದ ತೆಗೆದುಹಾಕಿದೆ ಎಂದು ವರದಿಯಾಗಿದೆ.


  ವಿವಿಯ ಈ ಕ್ರಮವನ್ನು ಅಕಾಡೆಮಿಕ್ ಕೌನ್ಸಿಲ್‌ನ 15 ಸದಸ್ಯರ ಸಮಿತಿಯು ತೀವ್ರವಾಗಿ ವಿರೋಧಿಸಿ ತನ್ನ ಭಿನ್ನಮತವನ್ನು ದಾಖಲಿಸಿದೆ. ಇದು ಪಠ್ಯಕ್ರಮದಲ್ಲಿ ಅತಿ ದೊಡ್ಡ ಧ್ವಂಸ ಎಂದು ಅದು ಟೀಕಿಸಿದೆ.


  ಮೇಲ್ವಿಚಾರಣಾ ಸಮಿತಿಯು ಮೊದಲು ಸೂಸೈರಾಜ್ ಮತ್ತು ಸುಕೀರ್ಥರಾಣಿ ಅವರ ಬರಹಗಳನ್ನು ತೆಗೆದು ಆ ಜಾಗದಲ್ಲಿ “ಮೇಲ್ಜಾತಿ ಬರಹಗಾರ್ತಿಯಾದ ರಮಾಬಾಯಿ”ಯವರ ಪಠ್ಯ ಸೇರಿಸಿದೆ. ನಂತರ ಆಂಗ್ಲ ವಿಭಾಗದಲ್ಲಿ ಮಹಾಶ್ವೇತಾ ದೇವಿಯವರ ಬುಡಕಟ್ಟು ಮಹಿಳೆಯ ಕುರಿತ ಕಥೆ ‘ದ್ರೌಪದಿ’ ಯಾವುದೇ ಶೈಕ್ಷಣಿಕ ತರ್ಕವನ್ನು ನೀಡದೆ ಅಳಿಸಿಹಾಕಿದೆ ಅಕಾಡೆಮಿಕ್ ಕೌನ್ಸಿಲ್‌ ಆಕ್ರೋಶ ವ್ಯಕ್ತಪಡಿಸಿದೆ.


  ವಸಾಹತುಶಾಹಿ ಪೂರ್ವ ಭಾರತೀಯ ಸಾಹಿತ್ಯ ವಿಭಾಗದಲ್ಲಿ ಚಂದ್ರವತಿ ರಾಮಾಯಣವನ್ನು ತೆಗೆದು ಅಲ್ಲಿ ತುಳಸಿದಾಸರ ಪಠ್ಯ ಸೇರಿಸಿಲಾಗಿದೆ. ರಾಮಾಯಣ ಮಹಾಕಾವ್ಯದ “ಸ್ತ್ರೀವಾದಿ ಓದು” ಪಠ್ಯ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.


  ಇದನ್ನೂ ಓದಿ: ಕಾಂಗ್ರೆಸ್​​ನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಗೃಹ ಸಚಿವ ಅರಗ ಜ್ಞಾನೇಂದ್ರ ಅಸೂಕ್ಷ್ಮ ಹೇಳಿಕೆ!


  ಮೇಲ್ವಿಚಾರಣಾ ಸಮಿತಿಯಲ್ಲಿ ದಲಿತರು ಮತ್ತು ಆದಿವಾಸಿ ಸಮುದಾಯದ ಸದಸ್ಯರಿಲ್ಲ. ಹಾಗಾಗಿ ಅದು ಸದಾ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ವಿರುದ್ಧ ಪೂರ್ವಾಗ್ರಹವನ್ನು ಹೊಂದಿದೆ. ಹಾಗಾಗಿ ಅಂತಹ ಎಲ್ಲಾ ಧ್ವನಿಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲು ಅದು ಸಂಘಟಿತ ಪ್ರಯತ್ನ ನಡೆಸುತ್ತಿದೆ ಎಂದು ಕೌನ್ಸಿಲ್ ಆರೋಪಿಸಿದೆ.


  ಈ ಕುರಿತು ಪ್ರತಿಕ್ರಿಯಿಸಿರುವ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಕೆ.ಪಂಡಿತ್, "ರದ್ದುಗೊಳಿಸಿರುವ ಪಠ್ಯಗಳ ಲೇಖಕರ ಜಾತಿಯ ಬಗ್ಗೆ ನನಗೆ ತಿಳಿದಿಲ್ಲ. ನಾನು ಜಾತೀಯತೆಯನ್ನು ನಂಬುವುದಿಲ್ಲ. ಭಾರತೀಯರು ವಿವಿಧ ಜಾತಿಗೆ ಸೇರಿದ್ದಾರೆ ಎಂದು ನಾನು ನೋಡುವುದಿಲ್ಲ" ಎಂದಿದ್ದಾರೆ.


  ಇದನ್ನೂ ಓದಿ: Court Definition of Marital Rape: ಗಂಡ-ಹೆಂಡತಿ ನಡುವಿನ ಬಲವಂತದ ಸೆಕ್ಸ್ ರೇಪ್ ಆಗಲ್ಲ: ಹೈಕೋರ್ಟ್


  ಒಂದು "ನಿರ್ದಿಷ್ಟ ಕಥೆ" ಯನ್ನು ಹಲವು ವರ್ಷಗಳಿಂದ ಕಲಿಸಿದ ನಂತರ ಕೋರ್ಸ್ ರಚನೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹಲವರು ಪಠ್ಯವನ್ನು ಬದಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:MAshok Kumar
  First published: