ನವ ದೆಹಲಿ (ಜೂನ್ 19); ಕರ್ತವ್ಯದ ವೇಳೆ ದುಷ್ಕರ್ಮಿಗಳಿಂದ ಕೊಲ್ಲಲ್ಪಟ್ಟ 6 ಜನ ರಕ್ಷಣಾ ಸಿಬ್ಬಂದಿಯ ಕುಟುಂಬಗಳಿಗೆ ತಲಾ ₹ 1 ಕೋಟಿ ಆರ್ಥಿಕ ನೆರವು ನೀಡುವುದಾಗಿ ದೆಹಲಿ ಸರ್ಕಾರ ಇಂದು ಪ್ರಕಟಿಸಿದೆ. ಆಮ್ ಆದ್ಮಿ ಪಕ್ಷದ ಸರ್ಕಾರವು ವಾಯುಸೇನೆಯ ಮೂವರು, ಇಬ್ಬರು ದೆಹಲಿ ಪೊಲೀಸರು ಮತ್ತು ಓರ್ವ ನಾಗರಿಕ ರಕ್ಷಣಾ ಇಲಾಖೆಯ ಕುಟುಂಬಗಳಿಗೆ ಪರಿಹಾರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. "ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಆರು ಹುತಾತ್ಮರ ಕುಟುಂಬಗಳಿಗೆ ದೆಹಲಿ ಸರ್ಕಾರ 1 ಕೋಟಿ ನೀಡಲು ಇಂದು ನಿರ್ಧರಿಸಿದೆ. ಈ ಪೈಕಿ ಮೂವರು ಭಾರತೀಯ ವಾಯುಸೇನೆಯವರು, ಇಬ್ಬರು ದೆಹಲಿ ಪೊಲೀಸರಿಂದ ಮತ್ತು ಒಬ್ಬರು ನಾಗರಿಕ ರಕ್ಷಣಾ ಕಾರ್ಯದವರು ಇದ್ದಾರೆ" ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
Addressing an important Press Conference | Live https://t.co/mNSu7j9zlU
— Manish Sisodia (@msisodia) June 19, 2021
ಮೃತ ಸಂಕೆತ್ ಕೌಶಿಕ್, ರಾಜೇಶ್ ಕುಮಾರ್, ಸುನೀತ್ ಮೊಹಂತಿ, ಮೀಟ್ ಕುಮಾರ್, ವಿಕಾಸ್ ಕುಮಾರ್ ಮತ್ತು ಪ್ರವೀಶ್ ಕುಮಾರ್ ಅವರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ರಕ್ಷಣಾ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡ ದುರದೃಷ್ಟಕರ ಘಟನೆಗಳ ಬಗ್ಗೆಯೂ ಮಾತನಾಡಿದ ಅವರು, "ದೇಶವು ಒಬ್ಬ ಮಗನನ್ನು ಕಳೆದುಕೊಂಡಾಗ, ಒಂದು ಕುಟುಂಬವು ಸಹ ತನಗೆ ಆಸರೆಯಾಗಿದ್ದ ರ್ವ ಧೈರ್ಯಶಾಲಿ ಮಗನನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ದೆಹಲಿ ಸರ್ಕಾರವು ದೇಶಕ್ಕೆ ಸೇವೆ ಸಲ್ಲಿಸಿ ಮರಣ ಹೊಂದಿದ ಸಿಬ್ಬಂದಿಗಳ ಕುಟುಂಬಗಳಿಗೆ ಬೆಂಬಲವಾಗಿ ನಿಂತಿದೆ" ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ