237 ಕೆ.ಜಿ ತೂಗುತ್ತಿದ್ದ ವಿಶ್ವದ ದಢೂತಿ ಬಾಲಕನಿಗೆ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ!


Updated:July 3, 2018, 5:20 PM IST
237 ಕೆ.ಜಿ ತೂಗುತ್ತಿದ್ದ ವಿಶ್ವದ ದಢೂತಿ ಬಾಲಕನಿಗೆ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ!

Updated: July 3, 2018, 5:20 PM IST
ನ್ಯೂಸ್ 18 ಕನ್ನಡ

ನವದೆಹಲಿ(ಜು.03): ಸಾಮಾನ್ಯ ವ್ಯಕ್ತಿಯ ಬಾಡಿ ಮಾಸ್​ ಇಂಡೆಕ್ಸ್​ ಅಂದರೆ ಎತ್ತರ ಹಾಗೂ ತೂಕದ ಅನುಪಾತ ಪ್ರತಿ ಮೀಟರ್​ಗೆ 22.5 ಕಿಲೋ ಗ್ರಾಂ ಇರುತ್ತದೆ. ಒಂದು ವೇಳೆ ವ್ಯಕ್ತಿಯ ಬಿಎಮ್​ಐ 32.5 ಆದರೆ ಅವರು ಸ್ಥೂಲಕಾಯದ ಸಮಸ್ಯೆಗೊಳಗಾಗಿರುತ್ತಾರೆ. ಇಂತಹವರಿಗೆ ವೈದ್ಯರು ಸರ್ಜರಿ ಮಾಡುವ ಆಯ್ಕೆ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ವ್ಯಕ್ತಿಯೊಬ್ಬನ ಬಿಎಮ್​ಐ 40, 50 ಅಥವಾ 60 ಇದ್ದರೆ, ಅತಿಹೆಚ್ಚು ಸ್ಥೂಲಕಾಯದ ಶ್ರೇಣಿಯಲ್ಲಿರುತ್ತಾರೆ. ಆದರೆ ಕೇವಲ 14 ವರ್ಷದ ಬಾಲಕನ ಬಿಎಮ್​ಐ 92ರಷ್ಟಿದ್ದರೆ ಆತನ ಸ್ಥೂಲಕಾಯದ ಮಟ್ಟ ಹೇಗಿರಬಹುದು?

ಪಶ್ಚಿಮ ದೆಹಲಿಯ ಉತ್ತರ ನಗರದ ನಿವಾಸಿ 14 ವರ್ಷದ ಮಿಹಿರ್​ ಜೈನ್​ ಎಂಬಾತ ಬರೋಬ್ಬರಿ 237 ಕೆಜಿ ತೂಕ ಹೊಂದಿದ್ದಾನೆ. ಕಳೆದ ಕೆಲ ತಿಂಗಳುಗಳಿಂದ ಈತನಿಗೆ ಸಾಕೆತ್​ನ ಮ್ಯಾಕ್ಸ್​ ಹಾಸ್ಪಿಟಲ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸರ್ಜರಿ ಮೂಲಕ ಮಿಹಿರ್​ ತೂಕವಿಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಆಸ್ಪತ್ರೆಯ ಸರ್ಜನ್ ಚೌಬೆ ಮಾತನಾಡುತ್ತಾ 'ಮಿಹಿರ್​ನನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತನ ತೂಕ ಬರೋಬ್ಬರಿ 237 ಕೆಜಿ ಇತ್ತು' ಎಂದಿದ್ದಾರೆಮಿಹಿರ್​ಗೆ ಗ್ಯಾಸ್ಟ್ರಿಕ್ ಬೈಪಾಸ್​ ಸರ್ಜರಿ ಮಾಡಿಸಿಕೊಂಡಿರುವ ಮಿಹಿರ್ ವಿಶ್ವದಲ್ಲೇ ಅತ್ಯಂತ ಹೆಚ್ಚು ತೂಕ ಹೊಂದಿರುವ ಕಿರಿಯ ವ್ಯಕ್ತಿಯಾಗಿದ್ದಾನೆ.

ಪಾಸ್ತಾ ಹಾಗೂ ಪಿಜ್ಜಾ ತಿನ್ನುವುದೆಂದರೆ ಬಲು ಇಷ್ಟ:

2003 ರಲ್ಲಿ ಮಿಹಿರ್ ಜನಿಸಿದ್ದು, ಮಗುವಾಗಿದ್ದಾಗ ಈತನ ತೂಕ ಎಲ್ಲಾ ಮಕ್ಕಳಂತೆ 2.5 ಕಿಲೋ ಗ್ರಾಂ ಆಗಿತ್ತು. ಆದರೆ ಸಮಯ ಉರುಳುತ್ತಿದ್ದಂತೆಯೇ ಆತನ ತೂಕ ಹೆಚ್ಚಾಗುತ್ತಾ ಹೋಯಿತು. 5 ವರ್ಷದ ಪ್ರಾಯದಲ್ಲಿ ಮಿಹಿರ್ ತೂಕ 60-70 ಕೆಜಿಗೇರಿತ್ತು. ಇನ್ನು ಮನೆಯವರ ತೂಕ ಹೆಚ್ಚಿದ್ದುದರಿಂದ, ಆರಂಭದಲ್ಲಿ ಇದು ಸಾಮಾನ್ಯವೆಂದು ಮನೆಯವರೂ ಭಾವಿಸಿದ್ದರು. ಆದರೆ ನಿಧಾನವಾಗಿ ಹೆಚ್ಚುತ್ತಿದ್ದ ತೂಕದಿಂದಾಗಿ ಮಿಹಿರ್​ಗೆ ನಡೆದಾಡಲೂ ಕಷ್ಟವಾಗುವ ಪರಿಸ್ಥಿತಿ ಏರ್ಪಟ್ಟಿತ್ತು ಹೀಗಾಗಿ ಆತ ಶಾಲೆಗೆ ಹೋಗುವುದನ್ನೂ ನಿಲ್ಲಿಸಬೇಕಾಯಿತು.

ಮನೆ ಮಂದಿ 2010 ರಲ್ಲಿ ಆತನಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರಾದರೂ, ವೈದ್ಯರು ಬಾಲಕನಿಗಿನ್ನೂ ಚಿಕ್ಕ ವಯಸ್ಸು ಸರ್ಜರಿ ಮಾಡಲು ಸಾಧ್ಯವಿಲ್ಲ ಎಂದಿದ್ದರಿಂದ ಸುಮ್ಮನಿರಬೇಕಾಯಿತು. ಇನ್ನು ಮಿಹಿರ್​ಗೆ ಪಿಜ್ಜಾ ಹಾಗೂ ಪಾಸ್ತಾ ಎಂದರೆ ಬಹಳ ಇಷ್ಟವಂತೆ ಆದರೆ ಈಗ ಸರ್ಜನ್ ಚೌಬೆ ಆತನಿಗೆ ಅತ್ಯಂತ ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಲು ಸೂಚಿಸಿದ್ದೃಆಎ. ಸಾಮಾನ್ಯ ಊಟದಲ್ಲಿ 2500 ರಿಂದ 3000 ಕ್ಯಾಲೋರಿ ಇರುತ್ತದೆ. ಆದರೆ ಕಡಿಮೆ ಕ್ಯಾಲೋರಿಯ ಊಟದಲ್ಲಿ ಕೇವಲ 800 ಕ್ಯಾಲೋರಿಗಳಿರುತ್ತವೆ. ಇನ್ನು ಮಿಹಿರ್​ ತನ್ನ ಆಹಾರ ಪದ್ದತಿ ತೊರೆದು ಅಷ್ಟು ಕಡಿಮೆ ಕ್ಯಾಲೋರಿಯ ಆಹಾರ ಸೇಬವಿಸಬಹುದೆಂಬ ವಿಶ್ವಾಸ ತಮಗೂ ಇರಲಿಲ್ಲ ಎಂಬುವುದು ವೈದ್ಯರ ಮಾತಾಗಿದೆ.

ಆದರೆ ಆಹಾರ ಪದ್ದತಿ ಬದಲಾಯಿಸಿದ ಕೆಲ ದಿನಗಳ ಬಳಿಕ ಮಿಹಿರ್ ತನ್ನ ಪೋಷಕರೊಂದಿಗೆ ಆಸ್ಪತ್ರೆಗೆ ಬಂದಿದ್ದು, ಆ ಸಂದರ್ಭದಲ್ಲಿ ಆತ ಬರೋಬ್ಬರಿ 10 ಕೆಜಿ ತೂಕವಿಳಿಸಿಕೊಂಡಿದ್ದ. ಹೀಗೇ ಆತ ಎರಡು ತಿಂಗಳಲ್ಲಿ ತನ್ನ ತೂಕವನ್ನು 237 ಕೆಜಿಯಿಂದ 196 ಕೆಜಿಗಿಳಿಸಿಕೊಂಡಿದ್ದ.
Loading...

ಇದಾದ ಬಳಿಕ ಮತ್ತಷ್ದಟು ತೂಕ ಇಳಿಸಲು ಬಾಲಕನಿಗೆ ಸರ್ಜರಿ ಮಾಡಲಾಗಿದೆ. ಆದರೆ ಸರ್ಜರಿ ವೇಳೆ ವೈದ್ಯರಿಗೆ ಅಷ್ಟು ತೂಕದ ಬಾಲಕನಿಗೆ ಅನಸ್ತೇಷಿಯಾ ಹೇಗೆ ನೀಡಬೇಕೆಂಬುವುದೇ ವೈದ್ಯರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತಂತೆ. ಆದರೆ ಇದಕ್ಕಾಗಿ ವೈದ್ಯರು ವಿಶೇಷವಾದ ಯಂತ್ರವನ್ನು ಬಳಸಿದ್ದಾರೆ. ಅದೇನಿದ್ದರೂ ವೈದ್ಯರು ಬಾಲಕನಿಗೆ ನಡೆಸಿದ ಸರ್ಜರಿ ಯಶಸ್ವಿಯಾಗಿದ್ದು, ಬಾಲಕ ಮಿಹಿರ್​ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಕೂಡಾ ಮಾಡಲಾಗಿದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ