HOME » NEWS » National-international » DELHI RIOTS SHARUKH KHAN WHO POINTED GUN AT POLICE IN DELHI COMMUNAL VIOLENCE ARRESTED TODAY SCT

ದೆಹಲಿ ಹಿಂಸಾಚಾರಕ್ಕೆ 47 ಬಲಿ; ಗಲಭೆಯಲ್ಲಿ ಪೊಲೀಸರಿಗೆ ಗನ್ ತೋರಿಸಿದ್ದ ಯುವಕನ​ ಬಂಧನ

ದೆಹಲಿಯ ಜಫ್ರಾಬಾದ್​ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರತ್ತ ಗನ್ ತೋರಿಸಿದ್ದ ಯುವಕನ ಫೋಟೋ ವೈರಲ್ ಆಗಿತ್ತು. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

Sushma Chakre | news18-kannada
Updated:March 3, 2020, 3:46 PM IST
ದೆಹಲಿ ಹಿಂಸಾಚಾರಕ್ಕೆ 47 ಬಲಿ; ಗಲಭೆಯಲ್ಲಿ ಪೊಲೀಸರಿಗೆ ಗನ್ ತೋರಿಸಿದ್ದ ಯುವಕನ​ ಬಂಧನ
ಬಂಧಿತ ಶಾರುಕ್​ ಖಾನ್
  • Share this:
ನವದೆಹಲಿ (ಮಾ. 3): ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಪ್ರತಿಭಟನೆ ಈಗಾಗಲೇ ಹಿಂಸಾಚಾರಕ್ಕೆ ತಿರುಗಿದೆ. ಕೋಮುಗಲಭೆಯ ರೂಪ ತಾಳಿರುವ ಪ್ರತಿಭಟನೆಯಲ್ಲಿ 47 ಜನರು ಸಾವನ್ನಪ್ಪಿದ್ದಾರೆ. ದೆಹಲಿ ಹಿಂಸಾಚಾರದ ವೇಳೆ ಪೊಲೀಸರಿಗೆ ಗನ್ ತೋರಿಸಿದ್ದ ಶಾರುಕ್​ ಖಾನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಜಫ್ರಾಬಾದ್​ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರತ್ತ ಗನ್ ತೋರಿಸಿದ್ದ ಯುವಕನ ಫೋಟೋ ವೈರಲ್ ಆಗಿತ್ತು. ಆತನ ಹೆಸರು ಶಾರುಕ್ ಖಾನ್ ಎಂದು ಪತ್ತೆಹಚ್ಚಿದ್ದ ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದರು. ಇಂದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ ಕುರಿತು ಟ್ವಿಟರ್​​ನಲ್ಲಿ ಸುಳ್ಳು ವದಂತಿ; 24 ವರ್ಷದ ಯುವಕನ ಬಂಧನ

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೂ 1,300 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು 369 ಎಫ್​ಐಆರ್​ ದಾಖಲಾಗಿದೆ. ಈಶಾನ್ಯ ದೆಹಲಿಯ ಜಫ್ರಾಬಾದ್, ಮುಜಾಪುರ್, ಬಾಬಾರ್ಪುರ್​, ಚಾಂದ್ ಬಾಗ್, ಶಿವ ವಿಹಾರ್, ಯಮುನಾ ವಿಹಾರ್​ನಲ್ಲಿ ಇನ್ನೂ ಪ್ರತಿಭಟನೆಯ ಬಿಸಿ ತಣ್ಣಗಾಗಿಲ್ಲ. ಈ ಪ್ರದೇಶಗಳ 47 ಜನ ಈಗಾಗಲೇ ಸಾವನ್ನಪ್ಪಿದ್ದಾರೆ. ನೂರಾರು ಜನರ ಸ್ಥಿತಿ ಗಂಭೀರವಾಗಿದೆ.

 
First published: March 3, 2020, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories